ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್‌ ಚೌಟಾಲಾಗೆ ಬಿಡುಗಡೆ ಭಾಗ್ಯ ? ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಸೆರೆವಾಸ ಶಿಕ್ಷೆ ಪಡೆದಿದ್ದ ಮಾಜಿ ಸಿಎಂ

ನವದೆಹಲಿ(ಜೂ.24): ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಸೆರೆವಾಸ ಶಿಕ್ಷೆ ಪಡೆದಿರುವ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್‌ ಚೌಟಾಲಾ ಅವರಿಗೆ ನೀಡಲಾಗಿದ್ದ ಶಿಕ್ಷೆಯನ್ನು ದೆಹಲಿ ಸರ್ಕಾರ 6 ತಿಂಗಳು ಕಡಿತ ಮಾಡಿದೆ.

ಹಾಗಾಗಿ ಚೌಟಾಲಾ ಶೀಘ್ರ ತಿಹಾರ್‌ ಜೈಲಿನಿಂದ ಬಿಡುಗಡೆ ಹೊಂದಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಜೈಲಿನ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 10 ವರ್ಷ ಕಾರಾಗೃಹ ಶಿಕ್ಷೆ ಪಡೆದು ಈಗಾಗಲೇ ಒಂಭತ್ತೂವರೆ ವರ್ಷ ಕಳೆದಿರುವ ಕೈದಿಗಳ ಉಳಿದ ಅವಧಿಯನ್ನು ಮಾಫಿ ಮಾಡಿ ದೆಹಲಿ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು.

2019-20ರಲ್ಲಿ ಚುನಾವಣಾ ಟ್ರಸ್ಟ್‌ ಮೂಲಕ ಬಿಜೆಪಿಗೆ 276 ಕೋಟಿ ದೇಣಿಗೆ

ಈ ಪ್ರಕಾರ ಚೌಟಾಲಾ ಅವರು ಈಗಾಗಲೇ ಒಂಭತ್ತೂವರೆ ವರ್ಷ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಗೆ ಅರ್ಹರಾಗಿದ್ದಾರೆ. 2000ನೇ ಇಸವಿಯಲ್ಲಿ 3206 ಶಿಕ್ಷಕರನ್ನು ಅಕ್ರಮವಾಗಿ ನೇಮಿಸಿಕೊಂಡ ಆರೋಪ ಸಂಬಂಧ ಒ.ಪಿ.ಚೌಟಾಲಾ, ಪುತ್ರ ಅಜಯ್‌ ಚೌಟಾಲಾ ಮತ್ತು 55 ಜನರನ್ನು ದೋಷಿಗಳೆಂದು ಪರಿಗಣಿಸಿ ಶಿಕ್ಷೆ ನೀಡಲಾಗಿತ್ತು.