Vaccine Is Imp : ಲಸಿಕೆ, ಮಾಸ್ಕ್‌ ರಾಮಬಾಣ, ರಾತ್ರಿ ಕರ್ಫ್ಯೂ ಅಲ್ಲ ಎಂದ WHO

  • ಬೂಸ್ಟರ್‌ ಡೋಸ್‌ನಿಂದಲೂ ಸೋಂಕು ನಿಯಂತ್ರಣ ಸಾಧ್ಯ
  • ಸೋಂಕಿನ ಕಡಿವಾಣಕ್ಕೆ ರಾತ್ರಿ ಕಫä್ರ್ಯ ವೈಜ್ಞಾನಿಕ ಕ್ರಮ ಅಲ್ಲ
  • ಭಾರತದಲ್ಲಿ ಈಗಷ್ಟೇ ಒಮಿಕ್ರೋನ್‌ ಹಾವಳಿ ಶುರು
WHO Chief Scientist Says Vaccines Masks Almighty Not Night Curfews dpl

ನವದೆಹಲಿ(ಜ.01): ಭಾರತದಲ್ಲಿ ಒಮಿಕ್ರೋನ್‌ ಅಬ್ಬರ ಆರಂಭವಾಗಿದ್ದು, ಭಾರಿ ಸಂಖ್ಯೆಯಲ್ಲಿ ವ್ಯಾಪಿಸುವ ಸಾಧ್ಯತೆ ಇದೆ. ಸೋಂಕು ನಿಯಂತ್ರಣಕ್ಕೆ ಎಲ್ಲಾ ದೇಶಗಳ ಸರ್ಕಾರಗಳು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌ ಸಲಹೆ ನೀಡಿದ್ದಾರೆ.

ಶುಕ್ರವಾರ ಮಾತನಾಡಿದ ಅವರು, ‘ವೈರಸ್‌ ಬಗ್ಗೆ ಹೆಚ್ಚು ಆತಂಕಕ್ಕೀಡಾಗುವ ಅಗತ್ಯವೇನಿಲ್ಲ. ಲಸಿಕೆ, ಮಾಸ್ಕ್‌ ಸೇರಿದಂತೆ ಕೋವಿಡ್‌ ಮಾರ್ಗಸೂಚಿಗಳ ಪಾಲನೆಗಳು ಕೊರೋನಾ ನಿಯಂತ್ರಣಕ್ಕೆ ಅನುವಾಗಲಿದೆ. ಜತೆಗೆ ಸೋಂಕಿನ ತೀವ್ರತೆ ಹೆಚ್ಚಿರುವವರಿಗೆ ಬೂಸ್ಟರ್‌ ಡೋಸ್‌ ನೀಡಬೇಕು. ಜನರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದನ್ನು ತಪ್ಪಿಸಲು ಸೀಮಿತಿ ಆರ್ಥಿಕ ಚ ಟುವಟಿಕೆ ಮೇಲೆ ನಿರ್ಬಂಧ ಹೇರಬೇಕು. ಆದರೆ ಕೊರೋನಾ ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಹೇರಿಕೆಯು ವೈಜ್ಞಾನಿಕ ಕ್ರಮವಲ್ಲ. ರಾತ್ರಿ ಕಫä್ರ್ಯ ಪರಿಣಾಮಕಾರಿ ಎಂಬುದಕ್ಕೆ ಸಾಕ್ಷಿಗಳಿಲ್ಲ’ ಎಂದರು.

ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಜಾರಿ, ಉಲ್ಲಂಘನೆ ಮಾಡಿದ್ರೆ ಕ್ರಮ ಕಟ್ಟಿಟ್ಟ ಬುತ್ತಿ

ಜತೆಗೆ ಸೋಂಕಿನಿಂದ ಜನರ ರಕ್ಷಣೆಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದನ್ನು ಆಯಾ ರಾಷ್ಟ್ರಗಳು ಸ್ಥಳೀಯ ಮಟ್ಟದ ವೈಜ್ಞಾನಿಕ ದತ್ತಾಂಶ ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ದೇಶಗಳಿಗೆ ಅವರು ಸಲಹೆ ನೀಡಿದರು.

ಕೊರೋನಾ ಭೀತಿ

 ಕೋವಿಡ್‍ ಸೋಂಕು (Coronvirus) ಹೆಚ್ಚಳ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ (New Year Celebration) ಬ್ರೇಕ್ ಹಾಕಲು ರಾಜ್ಯ ಸರ್ಕಾರ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ  ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್(Kamal Pant), ಇಂದು (ಡಿ. 31) ಸಂಜೆ 6 ಗಂಟೆಯಿಂದ ನಾಳೆ (ಜ. 1) ಬೆಳಗ್ಗೆ 5 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ 9Section 144) ಆದೇಶ ಹೊರಡಿಸಿದ್ದಾರೆ. ಇದರ ಪ್ರಕಾರ 5ಕ್ಕಿಂತ ಹೆಚ್ಚು ಜನ ಎಲ್ಲಿಯೂ ಸಮಾವೇಶಗೊಳ್ಳುವಂತಿಲ್ಲ. ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡಲು ಅವಕಾಶವಿಲ್ಲ. ಪಾರ್ಕ್, ಮೈದಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ.

ಪ್ರಮುಖವಾಗಿ ಪ್ರತಿ ವರ್ಷ ಅದ್ಧೂರಿ ವರ್ಷಾ ಚರಣೆ ನಡೆಯುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ಆಯಕಟ್ಟಿನ ಜಾಗಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಆಯಕಟ್ಟಿನ ಜಾಗಗಳೂ ಸೇರಿದಂತೆ ಎಲ್ಲೆಡೆ ಬಿಗಿಭದ್ರತೆ ಆಯೋಜಿಸಲಾಗಿದೆ.

ಜನವಸತಿ ಸಂಕೀರ್ಣ, ಖಾಸಗಿ ಕ್ಲಬ್‍ಗಳಲ್ಲಿ ಅದರ ನಿವಾಸಿಗಳು ಮತ್ತು ಸದಸ್ಯರು ಯಾವುದೇ ಸಂಘಟನಾತ್ಮಕ ಚಟುವಟಿಕೆಗಳಿಲ್ಲದೆ ಹೊಸ ವರ್ಷಾಚರಣೆ ಮಾಡಬಹುದಾಗಿದೆ. ಹೋಟೆಲ್, ಮಾಲ್, ರೆಸ್ಟೋರೆಂಟ್, ಕ್ಲಬ್, ಪಬ್, ಕ್ಲಬ್‍ಹೌಸ್ ಅಥವಾ ಇನ್ನಿತರ ಸ್ಥಳಗಳಲ್ಲಿ ಡಿಜೆ ಹಾಕುವುದು, ಕಾರ್ಯಕ್ರಮ ಆಯೋಜಿಸುವುದು, ಪ್ರದರ್ಶನಗಳು ಮತ್ತಿತರ ಆಚರಣೆಗಳಿಗೆ ಕಡಿವಾಣವಿದೆ. ಸಂಗೀತ ರಸಸಂಜೆ, ನೃತ್ಯ ಇತರ ಪಾರ್ಟಿಗಳಿಗೂ ಅವಕಾಶವಿಲ್ಲ.

ಆದರೆ ಅನುಮತಿ ಪಡೆದ ಪ್ರಮಾಣದಲ್ಲಿ ಸಂಗೀತದೊಂದಿಗೆ ಯಾಂತ್ರಿಕ ವ್ಯವಹಾರಗಳನ್ನು ನಡೆಸಲು ಅವಕಾಶವಿದೆ. ಆದರೆ ಹೋಟೆಲ್, ಮಾಲ್, ಪಬ್, ರೆಸ್ಟೋರೆಂಟ್‍ಗಳು ಕೋವಿಡ್ ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ನಾಗರಿಕ ಸುರಕ್ಷತೆಗೆ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು, ಪೊಲೀಸ್ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಆಡಳಿತ ಅಕಾರಿಗಳು ಕೋವಿಡ್ ಮಾರ್ಗಸೂಚಿಗಳ ಪಾಲನೆ ಮೇಲೆ ನಿಗಾ ಇಡಲಿದ್ದಾರೆ ಎಂದಿದ್ದಾರೆ.

Latest Videos
Follow Us:
Download App:
  • android
  • ios