ನವದೆಹಲಿ/ವಾಷಿಂಗ್ಟನ್(ಏ.22):  ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಾನವ ಜೀವನಕ್ಕೆ ಬೆಲೆಯಿಲ್ಲ, ಅಮೆರಿಕದಂಥ ಮುಂದುವರೆದ ದೇಶಗಳಲ್ಲಿ ಜೀವ ಅತ್ಯಂತ ಅಮೂಲ್ಯ ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ಕೇಳಿಬರುವ ಮಾತು. ಆದರೆ ಕೊರೋನಾ ಸಂದರ್ಭದಲ್ಲಿ ಈ ಮಾತು ಅದೆಷ್ಟುಸುಳ್ಳು ಎಂಬುದು ಸಾಬೀತಾಗಿದೆ.

ಕಾರಣ, ಕೊರೋನಾ ವೈರಸ್‌ ಹರಡುವಿಕೆ ಸಂದರ್ಭದಲ್ಲಿ ಭಾರತ ಆರ್ಥಿಕತೆಯನ್ನು ತ್ಯಾಗ ಮಾಡಿ ಜೀವ ರಕ್ಷಣೆಗೆ ಒತ್ತು ನೀಡುತ್ತಿದ್ದರೆ, ಅಮೆರಿಕವು ಆರ್ಥಿಕತೆ ಉಳಿಸಿಕೊಳ್ಳಲು ಜನರ ‘ಬಲಿ’ ನೀಡುತ್ತಿರುವಂತಿದೆ.

ಅಮೆರಿಕ ವೈರಸ್‌ ತಂಡಕ್ಕೆ ವುಹಾನ್‌ ಭೇಟಿ ಅವಕಾಶಕ್ಕೆ ಚೀನಾ ನಕಾರ!

ಕೊರೋನಾ ಪ್ರಕರಣಗಳಲ್ಲಿ ಚೀನಾ, ಇಟಲಿ ಸೇರಿದಂತೆ ವಿಶ್ವದ ಇತರ ಎಲ್ಲ ದೇಶಗಳನ್ನು ಹಿಂದಕ್ಕೆ ಹಾಕಿರುವ ಅಮೆರಿಕದಲ್ಲಿ ನಿತ್ಯ ಈ ವ್ಯಾಧಿಗೆ ಸರಾಸರಿ ನಿತ್ಯ 2000 ಜನ ಸಾಯುತ್ತಿದ್ದಾರೆ ಹಾಗೂ ಸುಮಾರು 8 ಲಕ್ಷ ಜನ ಸೋಂಕಿತರಾಗಿದ್ದಾರೆ. ಆದರೂ ಅಮೆರಿಕವು ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಮಾಡದೇ, ಆರ್ಥಿಕ ಚಟುವಟಿಕೆಯನ್ನು ಎಂದಿನಂತೆ ಜೀವಂತವಾಗಿರಿಸಿದೆ. ಹೀಗಾಗಿ ಟ್ರಂಪ್‌ ಆಡಳಿತವು ಜೀವಕ್ಕಿಂತ ಹೆಚ್ಚಾಗಿ ದುಡ್ಡಿಗೆ (ಆರ್ಥಿಕತೆಗೆ) ಬೆಲೆ ಕೊಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ, ಭಾರತವು ಲಾಕ್‌ಡೌನ್‌ ಸೇರಿದಂತೆ ಅನೇಕ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಕೊರೋನಾ ಹತ್ತಿಕ್ಕಲು ಶ್ರಮಿಸುತ್ತಿದೆ. ಆರ್ಥಿಕತೆಗೆ ಲಾಕ್‌ಡೌನ್‌ನಿಂದ ಹೊಡೆತ ಬೀಳುತ್ತಿದ್ದರೂ, ಅದನ್ನು ಲೆಕ್ಕಿಸದೇ ವೈರಾಣುವಿನಿಂದ ಜೀವಗಳನ್ನು ರಕ್ಷಿಸಲು ಒತ್ತು ನೀಡುತ್ತಿದೆ. ಅಮೆರಿಕ ಹಾಗೂ ಭಾರತದ ಈ ನಿಲುವುಗಳನ್ನು ಗಮನಿಸಿದರೆ ಉಭಯ ದೇಶಗಳ ಸರ್ಕಾರಗಳು ಹಾಗೂ ಜನರ ದೃಷ್ಟಿಕೋನದ ನಡುವಿನ ವ್ಯತ್ಯಾಸದ ಅಗಾಧತೆ ಅರ್ಥವಾಗುತ್ತದೆ.

ಅಮೆರಿಕ ತೈಲ ಮಾರುಕಟ್ಟೆಯಲ್ಲಿ ಕೇಳರಿಯದ ಕುಸಿತ: ಬೆಲೆ ಶೂನ್ಯಕ್ಕಿಂತ ಕೆಳಗೆ!

ವಿಶ್ವದ ಜನಸಂಖ್ಯೆಯಲ್ಲಿ ಭಾರತದ ಪಾಲು ಶೇ. 16 ಹಾಗೂ ಕೊರೋನಾ ಸಾವಿನ ಪಾಲು ಶೇ.0.3. ಅಮೆರಿಕದ ಜನಸಂಖ್ಯೆ ಪಾಲು ಶೇ.4 ಹಾಗೂ ಕೊರೋನಾ ಸಾವಿನ ಪಾಲು ಶೇ.24 ಎಂಬುದು ಇಲ್ಲಿ ಗಮನಾರ್ಹ.