ಆನೆ ಮರಿ ಕಾಪಾಡಲು ಹೆಗಲ ಮೇಲೇ ಹೊತ್ತೊಯ್ದ ಅರಣ್ಯ ಸಿಬ್ಬಂದಿ!
ಹೊಂಡಕ್ಕೆ ಬಿದ್ದ ಆನೆ ಮರಿ| ತಾಯಾನೆ ಬಳಿ ತಲುಪಿಸಲು ಹೊತ್ತೊಯ್ದ ಅರಣ್ಯ ಸಿಬ್ಬಂದಿ| ವೈರಲ್ ಆಯ್ತು ಫೋಟೋ
ಚೆನ್ನೈ(ಏ.14): ಡಿಸೆಂಬರ್ 20117ರಲ್ಲಿ, ತಮಿಳುನಾಡಿನಲ್ಲಿ ಅರಣ್ಯ ಸಿಬ್ಬಂದಿಯೊಬ್ಬ ಹೊಂಡದಲ್ಲಿ ಬಿದ್ದಿದ್ದ ಆನೆ ಮರಿಯೊಂದನ್ನು ಎತ್ತಿ ತಾಯಿ ಆನೆ ಬಳಿ ತಲುಪಿಸಲು ತನ್ನ ಹೆಗಲೇ ಮೇಲೇ ಹೊತ್ತು ಸಾಗಿದ್ದ. ಪಳನಿಸ್ವಾಮಿ ಶರದ್‌ಕುಮಾರ್‌ರವರ ಈ ಮಾನವೀಯ ನಡೆ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವಾಧಿಕಾರಿ ದೀಪಿಕಾ ವಾಜಪೇಯಿ ಈ ಫೋಟೋ ಶೇರ್ ಮಾಡಿಕೊಂಡಿದ್ದು, ಮತ್ತೊಮ್ಮೆ ಜನರ ಮನ ಗೆಲ್ಲುತ್ತಿದೆ.
ಸೋಮವಾರದಂದು ದೀಪಿಕಾ ವಾಜಪೇಯಿಯವರು ಪಳನಿಸ್ವಾಮಿ ಶರದ್‌ಕುಮಾರ್‌ರವರ ಫೋಟೋ ಒಂದನ್ನು ಶೇರ್ ಮಾಡಿಕೊಡಿದ್ದು ಇದರಲ್ಲಿ ಅವರು ತನಗಿಂತಲೂ ಅಧಿಕ ತೂಕ ಹೊಂದಿರುವ ಅನೆ ಮರಿಯನ್ನು ಹೆಗಲ ಮೇಲೆ ಹೊತ್ತೊಯ್ಯುತ್ತಿರುವ ದೃಶ್ಯವಿದೆ. ಘಟನೆ ನಡೆದ ಎರಡು ವರ್ಷಗಳ ಬಳಿಕ ಈ ಫೋಟೋ ಮೈಕ್ರೋ ಬ್ಲಾಗಿಂಗ್‌ನಲ್ಲಿ ವೈರಲ್ ಆಗಿದೆ. ಜನರು ಮತ್ತೊಮ್ಮೆ ಈ ಅರಣ್ಯ ಸಿಬ್ಬಂದಿಗೆ ಸಲಾಂ ಎನ್ನತೊಡಗಿದ್ದಾರೆ.
ನೆಲ್ಲೀಮಾಲಾದ ದಟ್ಟಾರಣ್ಯದಲ್ಲಿ ಆನೆ ಮರಿಯೊಂದು ತನ್ನ ಗುಂಪಿನಿಂದ ಬೇರ್ಪಟ್ಟು ದಾರಿ ತಪ್ಪಿ, ಹೊಂಡದಲ್ಲಿ ಬಿದ್ದಿತ್ತು. ಈ ಮಾಹಿತಿ ಸಿಕ್ಕ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಹಹಲವಾರು ಯತ್ನಗಳನ್ನು ನಡೆಸಿದ ಬಳಿಕ ಅದನ್ನು ಮಲೆತ್ತಲಾಗಿತ್ತು. ಹೀಗಿದ್ದರೂ ಗಾಯಗೊಂಡಿದ್ದರಿಂದ ಆನೆಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಇಹೀಗಿರುವಾಗ ಪಳನೀಸ್ವಾಮಿ ಆನೆಯನ್ನು ಎತ್ತಿಕೊಂಡೇ ತಾಯಾನೆ ಬಳಿ ತೆರಳಿದ್ದರು.