ಹೈದ್ರಾಬಾದ್‌[ಡಿ.11]: ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದ ನಾಲ್ವರು ಪೊಲೀಸರ ಜೊತೆಗಿನ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ಬಳಿಕ, ಸೈಬರಾಬಾದ್‌ ಪೊಲೀಸರ ವಾಟ್ಸ್‌ಆ್ಯಪ್‌ ಹೆಲ್ಪ್‌ಲೈನ್‌ ನಂಬರ್‌ ಅನ್ನೇ ತಾತ್ಕಾಲಿಕವಾಗಿ ರದ್ದುಗಳಿಸಲಾಗಿದೆ.

ಎನ್‌ಕೌಂಟರ್‌ ಬಳಿಕ ಈ ಮೊಬೈಲ್‌ ಸಂಖ್ಯೆಗೆ ಭಾರೀ ಪ್ರಮಾಣದಲ್ಲಿ ಸಂದೇಶಗಳು ಬರಲು ಆರಂಭವಾದ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ ಈ ಕ್ರಮ ಕೈಗೊಂಡಿದೆ. ಜನರಿಗೆ ತಮ್ಮ ಕುಂದುಕೊರತೆಗಳ ಕುರಿತು ದೂರು ಸಲ್ಲಿಸಲೆಂದು ಸೈಬಾರಾಬಾದ್‌ ಪೊಲೀಸರು ಈ ಹಿಂದೆ 94906 17444 ವಾಟ್ಸ್‌ಆ್ಯಪ್‌ ಮೊಬೈಲ್‌ ಸಂಖ್ಯೆ ಬಳಸುತ್ತಿದ್ದರು. ಆದರೆ ಸಂದೇಶಗಳ ಭರ ತಡೆಯಲಾಗದೆ ಇದೀಗ ಸಂಖ್ಯೆಯನ್ನು ಸ್ಥಗಿತಗೊಳಿಸಲಾಗಿದೆ.

ಅದರ ಬದಲು ಇದೀಗ 79011 14100 ಹೊಸ ಸಂಖ್ಯೆಯನ್ನು ವಾಟ್ಸ್‌ಆ್ಯಪ್‌ ಪೊಲೀಸರಿಗೆ ನೀಡಿದೆ.