* ಪುಲ್ವಾಮಾ ಹುತಾತ್ಮನ ಪತ್ನಿಗೆ ಲೆಫ್ಟಿನೆಂಟ್‌ ಹುದ್ದೆ* ಪುಲ್ವಾಮಾ ಎನ್‌​ಕೌಂಟ​ರ್‌​ನಲ್ಲಿ ಸಾವ​ನ್ನ​ಪ್ಪಿದ್ದ ಮೇಜರ್‌ ಧೌಂಡಿ​ಯಾಲ್‌* ಒಂದು ವರ್ಷದ ತರ​ಬೇ​ತಿ ಪಡೆ​ದು ನಿಕಿತಾ ಕೌಲ್‌ ಸೇನೆಗೆ ಸೇರ್ಪ​ಡೆ* ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡ ಬಳಿಕ ನಿಕಿತಾ ಭಾಷಣ

ನವದೆಹಲಿ(ಜೂ.01): 2019ರ ಪುಲ್ವಾಮಾ ದಾಳಿಯ ಬಳಿಕ ನಡೆ​ದ ಭಯೋ​ತ್ಪಾ​ದಕ ನಿಗ್ರಹ ಕಾರ್ಯಚರ​ಣೆಯ ವೇಳೆ ತನ್ನ ಪತಿ​ಯನ್ನು ಕಳೆ​ದು​ಕೊಂಡಿ​ದ್ದ 29 ವರ್ಷದ ನಿಕಿತಾ ಕೌಲ್‌ ಶನಿ​ವಾರ ಸೇನೆಗೆ ಸೇರ್ಪಡೆ ಆಗಿದ್ದಾರೆ. ನಿಕಿತಾರವರು ಆಫೀಸರ್ಸ್‌ ಟ್ರೈನಿಂಗ್ ಅಕಾಡೆಮಿಯಿಂದ ತೇರ್ಗಡೆಯಾದ ಬೆನ್ನಲ್ಲೇ ಉಧಂಪುರ ರಕ್ಷಣಾ ಇಲಾಖೆ ಪಿಆರ್‌ಒ ಅಧಿಕೃತ ಟ್ವಿಟ್ಟರ್ ನಲ್ಲಿ ಅವರ ವಿಡಿಯೋ ಶೇರ್ ಮಾಡಿ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೇಜರ್ ದೌಂಡಿಯಾಲ್ ಹುತಾತ್ಮರಾಗಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರಿಗೆ ಶೌರ್ಯ ಚಕ್ರ ನೀಡಲಾಗಿತ್ತು. ಈಗ ಅವರ ಪತ್ನಿ ನಿಕಿತಾ ಕೌಲ್ ಸೇನಾ ಸಮವಸ್ತ್ರ ಧರಿಸಿದ್ದಾರೆ, ತನ್ನ ಗಂಡನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಪಾಲಿಗೆ ಇದೊಂದು ಹೆಮ್ಮೆಯ ಕ್ಷಣ ಎಂದು ಟ್ವೀಟ್ ಮಾಡಿದ್ದರು.

ಪುಲ್ವಾಮಾ ಹುತಾತ್ಮ ಮೇ| ದೌಂಡಿಯಾಲ್ ಪತ್ನಿ ನಿಖಿತಾ ಭಾರತೀಯ ಸೇನೆಗೆ ಸೇರ್ಪಡೆ!

ಇನ್ನು ಸೇನೆ ಅಧಿಕೃತವಾಗಿ ಸೇರ್ಪಡೆಗೊಂಡ ಬಳಿಕ ಲೆಫ್ಟಿನೆಂಟ್ ನಿಕಿತಾ ಕೌಲ್‌ ಭಾಷಣವೊಂದನ್ನು ಮಾಡಿದ್ದು, ಸುದ್ದಿಸಂಸ್ಥೆ ಎಎನ್‌ಐ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. 'ಇದೊಂದು ಅದ್ಭುತ ಪ್‌ರಯಾಣ ಹಾಗೂ ಈ ಪ್ರಯಾಣ ಈಗಷ್ಟೇ ಆರಂಭಗೊಂಡಿದೆ. ಕಳೆದ ಹನ್ನೊಂದು ತಿಂಗಳು ಜೀವನದಲ್ಲಿ ನಾನು ಹಲವಾರು ವಿಚಾರಗಳನ್ನು ಕಲಿಯುವಂತೆ ಮಾಡಿದೆ. ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದಗಳು. ಇದೇ ವೇಳೆ ನಿಮ್ಮ ಮೇಲೆ ನೀವು ನಂಬಿಕೆ ಇರಿಸಿ ಎಂದು ಕೇಳಿಕೊಳ್ಳುತ್ತೇನೆ. ಹೀಗಿರುವಾಗ ನೀವು ಸಾಧಿಸಬೇಕಾದ ಗುರಿಯಿಂದ ನಿಮ್ಮನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಮೇಲೆ ನೀವು ವಿಶ್ವಾಸವಿಡಿ. ಜೈ ಹಿಂದ್' ಎಂದು ನಿಕಿತಾರವರು ಹೇಳಿದ್ದಾರೆ.

YouTube video player

ಈ ವಿಡಿಯೋ ಭಾರೀ ವೈರಲ್ ಆಗಿದ್ದು ಅನೇಕ ಗಣ್ಯರು ಇವರ ಧೈರ್ಯ ಹಾಗೂ ಸಾಹಸವನ್ನು ಹಾಡಿ ಹೊಗಳಿದ್ದಾರೆ. ಇನ್ನು ಇವರ ಈ ಮಾತಿಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಹಾಘೂ ಬಿಜೆಪಿ ಸಂಸದ ಗೌತಮ್ ಗಂಭೀರ್ 'ನಟರು ಅಥವಾ ಕ್ರಿಕೆಟಗರಲ್ಲ, ಈ ಮಹಿಳೆಯೇ ನಿಜವಾದ ಹೀರೋ. ಇದೇ ಕಾರಣದಿಂದ ಭಾರತವನ್ನು ತಾಯ್ನಾಡು ಎನ್ನಲಾಗುತ್ತದೆ, ಫಾದರ್‌ಲ್ಯಾಂಡ್‌(ತಂದೆನಾಡು) ಅಲ್ಲ. ಜೈ ಹಿಂದ್ ಎಂದು ಬರೆದಿದ್ದಾರೆ.

Scroll to load tweet…

ಪತಿಯಂತೆ ದೇಶಸೇವೆ ಮಾಡುವ ಛಲ

ಪತಿಯ ರೀತಿಯೇ ದೇಶಸೇವೆ ಮಾಡಬೇಕೆಂಬ ಛಲ ನಿಕಿತಾಗೆ ಇತ್ತು. ಹೀಗಾಗಿ ಸ್ಟಾಫ್‌ ಸೆಲೆಕ್ಷನ್‌ ಕಮಿಶನ್‌ (ಎಸ್‌ಎಸ್‌ಸಿ) ಪರೀಕ್ಷೆ ಪಾಸಾಗಿ ತಮಿ​ಳು​ನಾ​ಡಿ​ನಲ್ಲಿ ಒಂದು ವರ್ಷ​ಗಳ ಸೇನಾ ತರ​ಬೇ​ತಿ​ಯನ್ನು ಪೂರ್ಣ​ಗೊ​ಳಿ​ಸಿ​ರುವ ನಿಕಿತಾ ಕೌಲ್‌, ಚೆನ್ನೈ ಅಧಿ​ಕಾ​ರಿ​ಗಳ ತರ​ಬೇತಿ ಅಕಾ​ಡೆಮಿ (ಒ​ಟಿ​ಎ​)​ಯಲ್ಲಿ ಆಯೋ​ಜಿ​ಸಿದ್ದ ಸರಳ ಕಾರ್ಯ​ಕ್ರ​ಮದ ವೇಳೆ ಲೆಫ್ಟಿ​ನೆಂಟ್‌ ಅಧಿ​ಕಾ​ರಿ​ಯಾಗಿ ಸೇನೆಗೆ ಸೇರ್ಪಡೆ ಆದರು. ಈ ವೇಳೆ ಲೆ| ಜ| ವೈ.ಕೆ. ಜೋಶಿ ಸೇನಾ ಸಮ​ವ​ಸ್ತ್ರದ ಭುಜದ ಪಟ್ಟಿಗೆ ಮೂರು ಸ್ಟಾರ್‌​ಗ​ಳನ್ನು ಜೋಡಿ​ಸುವ ಮೂಲಕ ಶುಭ​ಹಾ​ರೈ​ಸಿ​ದ​ರು.

ಮೂಲತಃ ಕಾಶ್ಮೀ​ರ​ದ​ವ​ರಾದ ಕೌಲ್, ಮೇಜರ್‌ ವಿಭೂತಿ ಶಂಕರ್‌ ಧೌಂಡಿ​ಯಾಲ್‌ ಅವ​ರನ್ನು ವಿವಾಹ ಆದ 9 ತಿಂಗಳ ಅಂತ​ರ​ದಲ್ಲೇ ತಮ್ಮ ಪತಿ​ಯನ್ನು ಕಳೆ​ದು​ಕೊಂಡಿ​ದ್ದರು. 2019 ಫೆ.18ರಂದು ಪುಲ್ವಾ​ಮಾ​ದಲ್ಲಿ ಸಿಆ​ರ್‌​ಪಿ​ಎಫ್‌ ಯೋಧರ ಮೇಲೆ ದಾಳಿಗೆ ಕಾರ​ಣ​ರಾದ ಜೈಷ್‌ ಎ ಮೊಹ​ಮ್ಮದ್‌ ಸಂಘ​ಟ​ನೆಯ ಭಯೋ​ತ್ಪಾ​ದ​ಕರ ವಿರುದ್ಧ ನಡೆಸಲಾ​ದ ಎನ್‌​ಕೌಂಟರ್‌ ವೇಳೆ ಮೇಜರ್‌ ಧೌಂಡಿ​ಯಾಲ್‌ ಸೇರಿ ಐವರು ದೇಶ​ಕ್ಕಾಗಿ ಪ್ರಾಣ​ತ್ಯಾಗ ಮಾಡಿ​ದ್ದ​ರು. ಧೌಂಡಿ​ಯಾಲ್‌ ಅವ​ರಿಗೆ ಮರ​ಣೋ​ತ್ತ​ರ​ವಾಗಿ ಶೌರ್ಯ ಚಕ್ರ ಪ್ರಶ​ಸ್ತಿ​ಯನ್ನು ನೀಡ​ಲಾ​ಗಿತ್ತು.