Asianet Suvarna News Asianet Suvarna News

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂದರೇನು? ಈ ಸ್ಕೀಮ್‌ನಲ್ಲಿದೆ ಹಲವು ಸೌಲಭ್ಯ!

ಕೇಂದ್ರ ಸರ್ಕಾರ ಇದೀಗ ಗ್ಯಾಸ್ ಸಿಲಿಂಡರ್ ಮೇಲೆ 200 ರೂಪಾಯಿ ಕಡಿತಗೊಳಿಸಿ ಜನಸಾಮಾನ್ಯರ ಸಿಹಿ ಸುದ್ದಿ ನೀಡಿದೆ. ಇದರ ಬೆನ್ನಲ್ಲೇ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಪಡೆಯುತ್ತಿರುವ ಕುಟುಂಬಗಳ ಹೊರೆ ತಗ್ಗಲಿದೆ. ಏನಿದು ಉಜ್ವಲ ಯೋಜನೆ, ಅರ್ಜಿ ಸಲ್ಲಿಕೆ ಹೇಗೆ?

What is Pradhan Mantri Ujjwala Yojana PMUJ beneficiaries will get a subsidy of Rs 400 per Gas cylinder ckm
Author
First Published Aug 29, 2023, 5:55 PM IST | Last Updated Aug 29, 2023, 6:10 PM IST

ನವದೆಹಲಿ(ಆ.29) ಕೇಂದ್ರ ಸಚಿವ ಸಂಪುಟ ಗ್ಯಾಸ್ ಸಿಲಿಂಡರ್ ಬೆಲೆ ಕಡಿತಗೊಳಿಸಲು ಅನುಮೋದನೆ ನೀಡಿದೆ. ಆಗಸ್ಟ್ 30 ರಿಂದ ಗ್ಯಾಸ್ ಸಿಲಿಂಡರ್ ಬೆಲೆ 200 ರೂಪಾಯಿ ಕಡಿತಗೊಳಿಸಲಿದೆ. ಇಷ್ಟೇ ಅಲ್ಲ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಪಡೆಯುವ ಕುಟುಂಬಗಳಿಗೆ ಕೇಂದ್ರ ಬಂಪರ್ ಕೊಡುಗೆ ನೀಡಿದೆ. ಪ್ರತಿ ಸಿಲಿಂಡರ್ ಮೇಲೆ 400 ರೂಪಾಯಿ ಕಡಿತಗೊಳ್ಳಲಿದೆ. ಈ ಮೂಲಕ ಉಜ್ವಲ ಸಿಲಿಂಡರ್ ಫಲಾನುಭವಿಗಳು ಅತೀ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲಿದ್ದಾರೆ. ಮಾರ್ಚ್ ತಿಂಗಳಲ್ಲಿ ಉಜ್ವಲ ಯೋಜನೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಕಡಿತ ಮಾಡಲಾಗಿತ್ತು. 

ಏನಿದು ಪ್ರಧಾನ ಮಂತ್ರಿ ಉಜ್ವಲ ಯೋಜನೆ?: ನರೇಂದ್ರ ಮೋದಿ ಆರಂಭಿಸಿದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡವರಿಗೆ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಹಾಗೂ ಸಿಲಿಂಡರ್ ನೀಡುವ ಯೋಜನೆಯಾಗಿದೆ.2016ರಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಇದೀಗ ಉಜ್ವಲ 2.0 ಯೋಜನೆ ಚಾಲ್ತಿಯಲ್ಲಿದೆ. 

PM Modi Birthday: ಬಡ ಜನರ 'ಅಚ್ಚೇದಿನ್‌' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು

2016ರಿಂದ 2019ರ ವರೆಗಿನ ಮೊದಲ ಹಂತದ ಉಜ್ವಲ ಯೋಜನೆಯಲ್ಲಿ ಕೇಂದ್ರ ಸರ್ಕಾರ 8 ಕೋಟಿ ಅಡುಗೆ ಅನಿಲ ಸಂಪರ್ಕ ನೀಡಿದೆ. ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದಲ್ಲಿ ಜಾರಿಗೆ ತಂದಿರುವ ಈ ಯೋಜನೆಯಡಿ ಬಡ ಕುಟುಂಬಗಳಿಗೆ ತ್ವರಿತವಾಗಿ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ಮೊದಲು ಸಂಪರ್ಕ ಪಡೆಯಲು 10 ದಿನ ಕಾಯಬೇಕಿದ್ದರೆ, ಇದೀಗ ತಕ್ಷಣವೇ ನೀಡಲಾಗುತ್ತದೆ.

ಉಜ್ವಲ ಯೋಜನೆಯಡಿ ಮೊದಲು ಗ್ಯಾಸ್ ಸಂಪರ್ಕ ಪಡೆಯುವು ಕುಟುಂಬಕ್ಕೆ ಉಚಿತ ಸಂಪರ್ಕ, ಉಚಿತ ಗ್ಯಾಸ್ ಸ್ಟೌವ್ ನೀಡಲಾಗುತ್ತದೆ. ಬಳಿಕ ಪ್ರತಿ ಸಿಲಿಂಡರ್‌ಗೆ ಒಟ್ಟು 400 ರೂಪಾಯಿ ಸಬ್ಸಿಡಿಯಲ್ಲಿ ನೀಡಲಾಗುತ್ತದೆ. ಬಾಡಿಗೆ ಮನೆಯಲ್ಲಿದ್ದರೂ ಉಜ್ವಲ ಯೋಜನೆಯಡಿ ಅರ್ಹರಿಗೆ ಗ್ಯಾಸ್ ಸಂಪರ್ಕ ಹಾಗೂ ಸಿಲಿಂಡರ್ ನೀಡಲಾಗುತ್ತದೆ.

ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಹಾಗೂ ಸಿಲಿಂಡರ್ ಪಡೆಯಲು ಮಹಿಳೆಯರು ಮಾತ್ರ ಅರ್ಹರಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಮಹಿಳೆಗೆ ಉಜ್ವರ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ಮಹಿಳೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಇನ್ನು ಉಜ್ವಲ ಯೋಜನೆ ಲಾಭ ಪಡೆಯುವ ಕುಟುಂಬದಲ್ಲಿ ಇತರ ಗ್ಯಾಸ್ ಸಂಪರ್ಕ ಇರಬಾರದು. 

LPG Gas Price: ರಕ್ಷಾಬಂಧನಕ್ಕೆ ಕೇಂದ್ರದ ಬಂಪರ್ ಗಿಫ್ಟ್, ಗ್ಯಾಸ್ ಸಿಲಿಂಡರ್ ಬೆಲೆ 200 ರೂ ಇಳಿಕೆ!

ಅರ್ಜಿದಾರ ಮಹಿಳೆಯ ಆಧಾರ್ ಕಾರ್ಡ್, ಗುರುತಿನ ಚೀಟಿ ಕಡ್ಡಾಯವಾಗಿದೆ. ಆಯಾ ರಾಜ್ಯ ಸರ್ಕಾರ ನೀಡುವ ಬಡತನ ರೇಖೆಗಿಂತ ಕೆಳಗಿನ ಪಡಿತರ ಚೀಟಿ(BPL Card) ಹೊಂದಿರಬೇಕು. ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಕಾರ್ಡ್, ಪಡಿತರ ಚೀಟಿ ದಾಖಲೆ, ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು. 

ಉಜ್ವಲ ಯೋಜನೆಯಡಿ ಹೊಸ ಗ್ಯಾಸ್ ಸಂಪರ್ಕ ಪಡೆಯಲು ಬಯಸಿದ ಮಹಿಳೆ ಎರಡು ವಿಧದಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹಾಗೂ, ಡೌನ್ಲೋಡ್ ಮಾಡಿದ ಅರ್ಜಿ ಭರ್ತಿ ಮಾಡಿ ಹತ್ತಿರದ ಗ್ಯಾಸ್ ಎಜೆನ್ಸಿಗೆ ನೀಡುವ ಮೂಲಕವೂ ಸಲ್ಲಿಕೆ ಮಾಡಬಹುದು. 

Latest Videos
Follow Us:
Download App:
  • android
  • ios