Asianet Suvarna News Asianet Suvarna News

ಕೆಂಪು ಕೋಟೆ ಮೇಲೆ ಹಾರಿಸಿದ್ದು ಖಲಿಸ್ತಾನಿ ಧ್ವಜವಲ್ಲ, ನಿಶಾನ್ ಸಾಹಿಬ್!: ಏನಿದು? ಇಲ್ಲಿದೆ ವಿವರ!

ಕೆಂಪುಕೋಟೆ ಮೇಲೆ ಉದ್ರಿಕ್ತರು ಹಾರಿಸಿದ್ದು ಖಲಿಸ್ತಾನಿ ಧ್ವಜವಲ್ಲ, ನಿಶಾನ್ ಸಾಹೆಬ್| ಸೇನೆಯಲ್ಲೂ ಗೌರವಿಸಲಾಗುತ್ತೆ ನಿಶಾನ್ ಸಾಹೆಬ್| ಅಷ್ಟಕ್ಕೂ ಏನಿದರ ಮಹತ್ವ? ಇಲ್ಲಿದೆ ವಿವರ 

What is Nishan Sahib It is found flying atop every gurdwara pod
Author
Bangalore, First Published Jan 27, 2021, 2:14 PM IST

ನವದೆಹಲಿ(ಜ.27): ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆ ಮೇಲಿನ ಬೇರೊಂದು ಧ್ವಜಾರೋಹಣ ಮಾಡಿದ ವಿಚಾರ ಸದ್ಯ ಇಡೀ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಹೀಗಿರುವಾಗ ಕೆಂಪುಕೋಟೆ ಮೇಲೆ ಆಕ್ರೋಶಿತರು ಹಾರಿಸಿದ್ದು ಖಲಿಸ್ತಾನಿ ಧ್ವಜ ಎಂಬ ಮಾತರುಗಳೂ ಜೋರಾಗಿವೆ. ಆದರೆ ಇದು ನಿಜವಲ್ಲ, ಐತಿಹಾಸಿಕ ಸ್ಮಾರಕದ ಮೇಲೆ ಹಾರಿಸಿದ್ದು ಸಿಖ್ ಧ್ವಜ, ನಿಶಾನ್ ಸಾಹೆಬ್.

ನಿಶಾನ್ ಸಾಹೆಬ್,ಬಹುತೇಕ ಎಲ್ಲಾ ಗುರುದ್ವಾರಗಳಲ್ಲಿ ಕಂಡು ಬರುವ ಈ ಧ್ವಜವನ್ನು ಧಾರ್ಮಿಕ ಮೆರವಣಿಗೆ ವೇಳೆ ಜನರು ತೆಗೆದುಕೊಳ್ಳುತ್ತಾರೆ. ಗುರುದ್ವಾರಗಳಲ್ಲಿ ಎತ್ತರದ ಸ್ಥಾನದಲ್ಲಿ 'ಖಂಡ'(ಖಡ್ಗ)ದ ಜೊತೆಗೆ ಹಾರಿಸುತ್ತಾರೆ. 

ಭಾರತೀಯ ಸೇನೆಯಲ್ಲೂ ನಿಶಾನ್ ಸಾಹೆಬ್

ಸಿಖ್ ಧ್ವಜ ನಿಶಾನಬ್ ಸಾಹೆಬ್ ಸೀಕ್ ರೆಜಿಮೆಂಟ್‌ನ ಎಲ್ಲಾ ಗುರುದ್ವಾರಗಳಲ್ಲೂ ಹಾಕಿರುತ್ತಾರೆ. ಈ ರೆಜಿಮೆಂಟ್‌ನ ದಳವೊಂದು ಗುರುದ್ವಾರವನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ, ಸಿಖ್ಖರ ಪವಿತ್ರ ಗ್ರಂಥ 'ಗುರು ಗ್ರಂಥ ಸಾಹಿಬ್' ಜೊತೆಗೆ ಈ 'ನಿಶಾನ್ ಸಾಹೆಬ್' ಬಾವುಟವನ್ನು ಕೊಂಡೊಯ್ಯುತ್ತಾರೆ. ಇದನ್ನು ಭಾರತೀಯ ಯೋಧರು ಹಾಗೂ ಅಧಿಕಾರಿಗಳು ಬಹಳ ಗೌರವಿಸುತ್ತಾರೆ. ಸೇನಾ ಕಂಟೋಂನ್ಮೆಂಟ್‌ನ ಪ್ರತಿಯೊಂದು ಗುರುದ್ವಾರದಲ್ಲೂ ಈ ಧ್ವಜ ಇದ್ದೇ ಇರುತ್ತದೆ.

ಕೆಂಪು ಕೋಟೆ ಮೇಲಿನ ತ್ರಿವರ್ಣ ಧ್ವಜ ಕಿತ್ತೆಸೆದಿದ್ದಾರಾ?

ಇಲ್ಲ, ದಾಳಿ ವೇಳೆ ರೆಕಾರ್ಡ್ ಮಾಡಲಾದ ವಿಡಿಯೋಗಳಲ್ಲಿ ಸಿಖ್ ಧ್ವಜವನ್ನು ಖಾಲಿ ಗುಮ್ಮಟದ ಮೇಲೆ ಹಾರಿಸಿರುವುದನ್ನು ತೋರಿಸುತ್ತದೆ. ಹೀಗಿರುವಾಗ ಈ ಧ್ವಜ ಹಾರಿಸಿದ ಯಾರೊಬ್ಬರೂ ತ್ರಿವರ್ಣ ಧ್ವಜವನ್ನು ಮುಟ್ಟಿಲ್ಲ. ಅಲ್ಲದೇ ಕೆಲ ಪ್ರತಿಭಟನಾಕಾರರು ಸಿಖ್ ಧ್ವಜದೊಂದಿಗೆ ತ್ರಿವರ್ಣ ಧ್ವಜವನ್ನೂ ಹಿಡಿದಿರುವ ದೃಶ್ಯಗಳೂ ಕಂಡು ಬಂದಿದೆ. 

Follow Us:
Download App:
  • android
  • ios