ನವದೆಹಲಿ(ಡಿ.19): ಟಿಎಂಸಿ ತೊರೆದು ಬಿಜೆಪಿ ಸೇರಲು ಸಜ್ಜಾಗಿರುವ ಸುವೇಂದು ಅಧಿಕಾರಿ ಅವರಿಗೆ ಕೇಂದ್ರ ಸರ್ಕಾರ ಝಡ್‌ ಮಾದರಿ ಭದ್ರತೆ ಒದಗಿಸಿದೆ. ಸುವೇಂದು ಪಶ್ಚಿಮ ಬಂಗಾಳದಲ್ಲಿ ಸಂಚರಿಸುವ ವೇಳೆ ಅವರಿಗೆ ಸಿಆರ್‌ಪಿಎಫ್‌ನ ಕಮಾಂಡೋಗಳು ಭದ್ರತೆ ನೀಡಲಿದ್ದಾರೆ.

ಇನ್ನು ರಾಜ್ಯದಿಂದ ಹೊರಗೆ ಸಂಚರಿಸುವ ವೇಳೆ ಅವರು ವೈ ಪ್ಲಸ್‌ ಭದ್ರತೆಗೆ ಒಳಪಡಲಿದ್ದು, ಅರೆಸೇನಾಪಡೆ ಸಿಬ್ಬಂದಿಯಿಂದ ರಕ್ಷಣೆ ಪಡೆಯಲಿದ್ದಾರೆ. ಈ ನಡುವೆ ಸುವೇಂದು ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ತಾವು ಅಂಗೀಕರಿಸಿಲ್ಲ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್‌ ಬಿಮನ್‌ ಬ್ಯಾನರ್ಜಿ ಹೇಳಿದ್ದಾರೆ.

ಅವರು ಖುದ್ದಾಗಿ ನನಗೆ ರಾಜೀನಾಮೆ ಪತ್ರ ಹಸ್ತಾಂತರಿಸಿಲ್ಲ. ಹೀಗಾಗಿ ಅದು ಅವರು ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಖಚಿತವಿಲ್ಲ. ಹೀಗಾಗಿ ಅದನ್ನು ತಿರಸ್ಕರಿಸಿದ್ದೇನೆ ಎಂದಿದ್ದಾರೆ.