Asianet Suvarna News Asianet Suvarna News

ಟಿಎಂಸಿ ಸೇರಿದ ಸಂಸದ ಬಬೂಲ್ ಸುಪ್ರಿಯೋಗೆ ಮಹತ್ವದ ಜವಬ್ದಾರಿ ನೀಡಿದ ಮಮತಾ!

  • ಕೇಂದ್ರ ಸಂಪುಟ ಪುನಾರಚನೆ ಬಳಿಕ ಬಿಜೆಪಿ ತೊರೆದಿದ್ದ ಬಬೂಲ್ ಸುಪ್ರಿಯೋ
  • ರಾಜಕೀಯಕ್ಕೆ ಗುಡ್‌ಬೈ ಎಂದಿದ್ದ ಬಬೂಲ್ ಇದೀಗ ಟಿಎಂಸಿ ಸೇರ್ಪಡೆ
  • ಟಿಎಂಸಿ ಸೇರಿದ ಬಬೂಲ್‌ಗೆ ಮಹತ್ವದ ಜವಾಬ್ದಾರಿ ನೀಡಿದ ಮಮತಾ ಬ್ಯಾನರ್ಜಿ
West Bengal politics Sitting Mp Former Union Minister Babul Supriyo joined ruling Trinamool Congress ckm
Author
Bengaluru, First Published Sep 18, 2021, 6:20 PM IST
  • Facebook
  • Twitter
  • Whatsapp

ನವದೆಹಲಿ(ಸೆ.18): ಕೇಂದ್ರ ಸುಂಪುಟ ಪುನಾರಚಣೆಯಲ್ಲಿ ಸಚಿವ ಸ್ಥಾನ ವಂಚಿತರಾದ ಸಂಸದ ಬಬೂಲ್ ಸುಪ್ರಿಯೋ ಇದೀಗ ಟಿಎಂಸಿ ಸೇರ್ಪಡೆಗೊಂಡಿದ್ದಾರೆ. ಸಂಪುಟ ಪುನಾರಚನೆ ಬಳಿಕ ಅಸಮಾಧಾನಗೊಂಡಿದ್ದ ಬಬೂಲ್ ಬಿಜೆಪಿ ತೊರೆದಿದ್ದರು. ಬಳಿಕ ರಾಜಕೀಯಕ್ಕೆ ಗುಡ್‌ಬೈ ಮಾತನಾಡಿದ್ದ ಸುಪ್ರಿಯೋ ಇದೀಗ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲಕ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಕೇಂದ್ರ ಸಂಪುಟ ಪುನಾರಚನೆ ವೇಳೆ ಕೊಕ್, ರಾಜಕೀಯಕ್ಕೆ ಗುಡ್‌ಬೈ ಹೇಳಿದ ಬಬೂಲ್ ಸುಪ್ರಿಯೋ!

ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹಾಗೂ ರಾಜ್ಯಸಭಾ ಸಂಸದ ಡರೇಕ್ ಒಬ್ರಿಯಾನ್ ಸಮ್ಮುಖದಲ್ಲಿ ಬಬೂಲ್ ಸುಪ್ರಿಯೋ ಟಿಎಂಸಿ ಸೇರಿಕೊಂಡಿದ್ದಾರೆ. ಟಿಎಂಸಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಬೂಲ್ ಸುಪ್ರಿಯೋಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ರಾಜಕೀಯ ತೊರೆಯುವುದಾಗಿ ನಾನು ಹೇಳಿದ್ದೆ. ನನ್ನ ನಿರ್ಧಾರಕ್ಕೆ ಹಲವು ವಿರೋಧ ವ್ಯಕ್ತಪಡಿಸಿದ್ದರು. ರಾಜಕೀಯ ತೊರೆಯುವುದು ಉತ್ತಮ ನಿರ್ಧಾರವಲ್ಲ ಎಂದು ಸಲಹೆ ನೀಡಿದ್ದರು. ಇದೀಗ ಉತ್ತಮ ಅವಕಾಶವೊಂದು ಒಲಿದು ಬಂದಿದೆ. ಹೀಗಾಗಿ ನಿರ್ಧಾರ ಬದಲಿಸಿ ಟಿಎಂಸಿಗೆ ಸೇರಿಕೊಂಡಿದ್ದೇನೆ. ಸಿಎಂ ಮಮತಾ ಬ್ಯಾನರ್ಜಿ ಪಕ್ಷದ ಮಹತ್ವದ ಜವಾಬ್ದಾರಿ ನೀಡಿರುವುದಾಗಿ ಬಬೂಲ್ ಸುಪ್ರಿಯೋ ಹೇಳಿದ್ದಾರೆ.

 

2014ರಲ್ಲಿ ಬಿಜೆಪಿ ಸೇರಿಕೊಂಡ ಬಬೂಲ್ ಸುಪ್ರಿಯೋ ಅಸನ್ಸೋಲ್ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿಯೂ ಅಧಿಕಾರ ಚಲಾಯಿಸಿದ್ದಾರೆ. ಆದರೆ ಇತ್ತೀಚೆಗೆ ಕೇಂದ್ರ ಬಿಜೆಪಿಯಲ್ಲಿ ನಡೆದ ಸಂಪುಟ ಪುನಾರಚನೆಯಲ್ಲಿ ಬಬೂಲ್ ಸುಪ್ರಿಯೋ ಮಂತ್ರಿಗಿರಿ ಕೆಳೆದುಕೊಂಡಿದ್ದರು.

 

ಕೇಂದ್ರ ಸರ್ಕಾರದ ಈ ನಡೆಯಿಂದ ಬಬೂಲ್ ಸುಪ್ರಿಯೋ ಅಸಮಾಧಾನಗೊಂಡಿದ್ದರು. ಹೀಗಾಗಿ ಬಿಜೆಪಿ ತೊರೆದಿದ್ದರು. ಇದೀಗ ಟಿಎಂಸಿ ಸೇರಿದ್ದಾರೆ. 

Follow Us:
Download App:
  • android
  • ios