ಕೋಲ್ಕತಾ(ಏ.10); ಪಶ್ಚಿಮ ಬಂಗಾಳ ಚುನಾವಣೆ ಪ್ರತಿ ಹಂತದ ಚುನಾವಣೆಯಲ್ಲಿ ಹಿಂಸಾಚಾರ ನಡೆಯುತ್ತಿದೆ. 2ನೇ ಹಂತದ ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ನಡೆದ ಬಳಿಕ ಇದೀಗ 4ನೇ ಹಂತದ ಚುನಾವಣೆಯಲ್ಲೂ ಹಿಂಸೆ ಭುಗಿಲೆದ್ದಿದೆ.  ಉದ್ರಿಕ್ತರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಭದ್ರತಾ ಪಡೆಗಳ ಮೇಲಿನ ಗುಂಡಿನ ದಾಳಿಗಗೆ ನಾಲ್ವರು ಬಲಿಯಾಗಿದ್ದಾರೆ. ಆದರೆ ಈ ಹಿಂಸಾಚಾರದ ನಡುವೆ 4ನೇ ಹಂತದಲ್ಲಿ ಗರಿಷ್ಠ ಹಂತದ ಮತದಾನವಾಗಿದೆ.

ಮತದಾನದ ವೇಳೆ ಹಿಂಸಾಚಾರ: ಟಿಎಂಸಿ, ಬಿಜೆಪಿಗರ ಸಂಘರ್ಷ, ಗುಂಡಿನ ದಾಳಿಗೆ 4 ಬಲಿ!

4ನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದ 5 ಜಿಲ್ಲೆಗಳ 44 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. 4ನೇ ಹಂತದಲ್ಲಿ ದಾಖಲೆಯ ಶೇಕಡಾ 76.16 ರಷ್ಟು ಮತದಾನವಾಗಿದೆ. ಕೂಚ್‌ಬಿಹಾರ್ ಅಲಿಪುರ್‌ದೌರ್, ದಕ್ಷಿಣ 24 ಪರಗಣ, ಹರಾ ಹಾಗೂ ಹೂಗ್ಲಿ ಜಿಲ್ಲೆಗಳಲ್ಲಿ 4ನೇ ಹಂತದ ಮತದಾನ ನಡೆದಿದೆ.  ಇದರಲ್ಲಿ ಕೂಚ್‌ಬಿಹಾರ್ ಜಿಲ್ಲೆಯಲ್ಲಿ ಭಾರಿ ಹಿಂಸಾಚಾರ ನಡೆದಿತ್ತು.

ಬಂಗಾಳದ ಹಿಂಸಾಚಾರಕ್ಕೆ ಅಮಿತ್ ಶಾ ಕಾರಣ ಎಂದ ಮಮತಾ ಬ್ಯಾನರ್ಜಿ!.

ಸಿತಾಲ್‌ಕುಚಿಯಲ್ಲಿ ನಡೆದ ಹಿಂಸಾಚಾರದಲ್ಲಿ ಭದ್ರತಾ ಪಡೆಗಳು ಸಿಡಿಸಿದ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. ಈ ಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರ ಕಾರಣ, ಹೀಗಾಗಿ ಶಾ ರಾಜೀನಾಮೆ ನೀಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ಮೇ.02 ರಂದು ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು. ಅಮಿತ್ ಶಾ ಇರುವುದರಿಂದ ದೇಶ ಸುರಕ್ಷಿತವಾಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ತಿರುಗೇಟು ನೀಡಿದ್ದಾರೆ.