Asianet Suvarna News Asianet Suvarna News

Mamata banerjee On RSS: ಆರೆಸ್ಸೆಸ್‌ ಕೆಟ್ಟ ಸಂಘಟನೆಯಲ್ಲ; ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರು ಕೆಡಿಸುವ ಯಾವುದದೇ ಪ್ರಯತ್ನ ಮಾಡಬಾರದು, ಇಲ್ಲದಿದ್ದರೆ ಯಾರನ್ನೂ ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 
 

West Bengal Chief Minister Mamata Banerjee On RSS Critisized Bjp Politics san
Author
First Published Sep 1, 2022, 11:45 AM IST

ಕೋಲ್ಕತ್ತಾ (ಸೆ. 1): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿ ಉಳಿದುಕೊಂಡಿದ್ದಾರೆ. ಅವರು, ಚರ್ಚೆಯಲ್ಲಿ ಉಳಿಯಲು ಕಾರಣ ಆರೆಸ್ಸೆಸ್‌ ಅನ್ನು ಹೊಗಳಿರುವ ಅವರ ಇತ್ತೀಚಿನ ಒಂದು  ಹೇಳಿಕೆ. ಮಾಧ್ಯಮ ವರದಿಗಳ ಪ್ರಕಾರ, ಆರೆಸ್ಸೆಸ್‌ ಕೆಟ್ಟ ಸಂಘಟನೆ ಎಂದು ನಾನು ಭಾವಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.  ಈಗ ಸಂಘದಲ್ಲಿಯೂ ಬಿಜೆಪಿಯವರಂತೆ ಯೋಚಿಸದ ಕೆಲವರು ಇದ್ದಾರೆ. ಒಂದಲ್ಲ ಒಂದು ದಿನ ಅವರ ಈ ತಾಳ್ಮೆ ಮುರಿಯುವುದು ಖಂಡಿತ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್‌ನಲ್ಲಿರುವ ಎಲ್ಲರೂ ಕೆಟ್ಟವರಲ್ಲ, ಬಿಜೆಪಿಯನ್ನು ವಿರೋಧಿಸುವ ಕೆಲವರು ಒಳ್ಳೆಯವರೂ ಆಗಿದ್ದಾರೆ ಮತ್ತು ಅವರು ಶೀಘ್ರದಲ್ಲೇ ಹೊರಬರುತ್ತಾರೆ ಎಂದು ಹೇಳಿದರು. ಇದಲ್ಲದೇ ಬಿಜೆಪಿ ವಿರುದ್ಧ ದೊಡ್ಡ ಮಟ್ಟದಲ್ಲಿ ವಾಗ್ದಾಳಿಯನ್ನೂ ನಡೆಸಿದ್ದಾರೆ. ತೃಣಮೂಲ ಕಾಂಗ್ರೆಸ್ ಕುಟುಂಬದ (ಪಕ್ಷ) ಹೆಸರು ಕೆಡಿಸುವ ಪ್ರಯತ್ನವನ್ನು ಯಾರೂ ಮಾಡಬಾರದು, ಹಾಗೇನದರೂ ಮಾಡಿದರೆ, ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.  ರಾಜ್ಯ ಪೊಲೀಸ್ ದಿನಾಚರಣೆಯ ಮುನ್ನಾದಿನದಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ  ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ಈ ವೇಳೆ ಅವರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆರ್‌ಎಸ್‌ಎಸ್‌ನವರು ಕೂಡ ಶೀಘ್ರದಲ್ಲೇ ಬಿಜೆಪಿಯನ್ನು ವಿರೋಧಿಸಲಿದ್ದಾರೆ. ಇದಲ್ಲದೇ ಅಭಿಷೇಕ್ ಬ್ಯಾನರ್ಜಿಗೆ ಇಡಿ ಸಮನ್ಸ್ ನೀಡಿರುವ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ.


ರಾಜಕೀಯ ಇಷ್ಟೊಂದು ಕೊಳಕು ಆಗುತ್ತೆ ಅಂತ ಗೊತ್ತಿದ್ದಿದ್ದರೆ ನಾನೆಂದಿಗೂ ಬರುತ್ತಿರಲಿಲ್ಲ: ಈ ವೇಳೆ ತಮ್ಮ ರಾಜಕೀಯ ಪ್ರವೇಶ ಮಾಡಿದ ಆರಂಭಿಕ ದಿನಗಳ ಬಗ್ಗೆ ಅವರು ಮಾತನಾಡಿದ್ದಾರೆ. ನಾನು ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದೆ ಎಂದು ತೃಣಮೂಲ ಕಾಂಗ್ರೆಸ್ (Trinamool Congress) ಮುಖ್ಯಸ್ಥೆ ಬ್ಯಾನರ್ಜಿ (Mamata banerjee) ಹೇಳಿದ್ದಾರೆ. ಆದರೆ, ಈಗ ನನಗೆ ಅನಿಸೋದು ಏನೆಂದರೆ, ನಾನು ಬಹಳ ಹಿಂದೆಯೇ ರಾಜಕೀಯವನ್ನು ತೊರೆಯಬೇಕಿತ್ತು. ಹಾಗೇನಾದರೂ ರಾಜಕೀಯ ಇಷ್ಟು ಕೊಳಕು ಎನ್ನುವ ಸೂಚನೆ ಮೊದಲೇ ಏನಾದರೂ ಸಿಕ್ಕಿದ್ದರೆ ಖಂಡಿತಾ ಇದನ್ನು ಮಾಡಿರುತ್ತಿತ್ತು. ಯಾಕೆಂದರೆ ರಾಜಕೀಯದಲ್ಲಿರುವ (Politics) ಏಕೈಕ ಕಾರಣಕ್ಕಾಗಿ ನಾನು ಹಾಗೂ ನನ್ನ ಕುಟುಂಬದವರು ಬಹಿರಂಗವಾಗಯೇ ಇಷ್ಟೆಲ್ಲಾ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಕೇಂದ್ರದ ಏಜೆನ್ಸಿಗಳು ಬರೀ ಸೇಡಿನ ರಾಜಕಾರಣದ ರೂಪವಾಗಿ ಸಮನ್ಸ್‌ ನೀಡುತ್ತಿಲ್ಲ. ಇದು ಬಹಿಂರಗವಾಗಿ ಮಾಡುತ್ತಿರುವ ಹಿಂದೆ. ದನ ಮತ್ತು ಕಲ್ಲಿದ್ದಲು ಕಳ್ಳಸಾಗಣೆ ಸಮಸ್ಯೆಗಳು ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಮಮತಾ ಮತ್ತೊಮ್ಮೆ ಹೇಳಿದ್ದಾರೆ.

ಕಾಶ್ಮೀರದ ಲಾಲ್‌ ಚೌಕದಲ್ಲಿ ವಂದೇ ಮಾತರಂ, ಧ್ವಜಾರೋಹಣ ಮಾಡಿ ಡಾನ್ಸ್‌ ಮಾಡಿದ ಮಮತಾ ಬ್ಯಾನರ್ಜಿ!

ಮಮತಾ ಆರೋಪ: ಬಿಜೆಪಿ ಆರೋಪಕ್ಕೆ ಬಿಜೆಪಿ, ಮಮತಾ ಕೂಡ ಪ್ರತಿಕ್ರಿಯಿಸಿದ್ದಾರೆ. ಕಲ್ಲಿದ್ದಲು, ಜಾನುವಾರು ಕಳ್ಳಸಾಗಣೆ ಮತ್ತು ಶಿಕ್ಷಕರ ನೇಮಕಾತಿ ಹಗರಣಗಳಿಗೆ ಕಾಳಿಘಾಟ್ ಆದಾಯದ ಅಂತಿಮ ತಾಣವಾಗಿದೆ ಎಂದು ಬಿಜೆಪಿ ಆರೋಪಿಸಿದೆ ಎಂದು ಮಮತಾ ಹೇಳಿದರು. ನೀವು ಕಾಳಿಘಾಟ್‌ನಲ್ಲಿಯೇ ಏಕೆ ನಿಂತಿದ್ದೀರಿ ಎಂದು ನಾನು ಕೇಳಲು ಬಯಸುತ್ತೇನೆ? ನಿಮಗೆ ಧೈರ್ಯವಿದ್ದರೆ, ಆ ಹಣವನ್ನು ಅಂತಿಮವಾಗಿ ಸ್ವೀಕರಿಸಿದ್ದು ಯಾರು ಎಂದು ಆ ವ್ಯಕ್ತಿಯನ್ನು ಹೆಸರಿಸಿ. ಅಥವಾ ಕಾಳಿಘಾಟ್‌ನ ಪ್ರಸಿದ್ಧ ಕಾಳಿ ಮಂದಿರಕ್ಕೆ ಹಣ ಹೋಗುತ್ತಿದೆ ಎಂದು ನಾವು ಅರ್ಥ ಮಾಡಿಕೊಳ್ಳೋಣವೇ ಎಂದು ಪ್ರಶ್ನೆ ಮಾಡಿದ್ದಾರೆ.

ಗೋವುಗಳ ಸಾಗಣೆ ಪ್ರಕರಣ ಮಮತಾ ಬ್ಯಾನರ್ಜಿ ಆಪ್ತ, ಟಿಎಂಸಿ ನಾಯಕ ಅನುಬ್ರತಾ ಮೊಂಡಲ್ ಬಂಧಿಸಿದ ಸಿಬಿಐ!

ಹಲವು ಭತ್ಯೆಗಳ ಘೋಷಣೆ: ರಾಜ್ಯ ಪೊಲೀಸ್ ದಿನಾಚರಣೆಯ ಮುನ್ನಾದಿನದಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ರಾಜ್ಯದ ಪೊಲೀಸರಿಗೆ ಉಡುಗೊರೆಯನ್ನೂ ನೀಡಿದರು. ಹಲವಾರು ವರ್ಗಗಳಲ್ಲಿ ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ, ಸಮವಸ್ತ್ರ ಭತ್ಯೆ, ಪರಿಹಾರ ನೇಮಕಾತಿ ಮತ್ತು ಗರಿಷ್ಠ ವಯೋಮಿತಿಯಲ್ಲಿ ಹೆಚ್ಚಳವನ್ನು ಘೋಷಿಸಲಾಗಿದೆ. ಇದರಿಂದ ಅನೇಕ ಪೊಲೀಸರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

Follow Us:
Download App:
  • android
  • ios