ಕೋಲ್ಕತಾ(ಜು.02): ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಹಾಗೂ ಸಂಸದ ದಿಲೀಪ್‌ ಘೋಷ್‌ ಮೇಲೆ ಕೊಲ್ಕತಾದ ನ್ಯೂಟೌನ್‌ನಲ್ಲಿ ಬುಧವಾರ ಹಲ್ಲೆ ನಡೆದಿದೆ.

ಘೋಷ್‌ ಹಾಗೂ ಅವರ ಭದ್ರತಾ ಸಿಬ್ಬಂದಿಯ ವಾಹನಗಳ ಮೇಲೆ ಹಲ್ಲೆ ನಡೆದಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಕಾರ್ಯಕರ್ತನೊಬ್ಬನ ಮನೆಗೆ ಕರೆದುಕೊಂಡು ಹೋಗಲಾಗಿದೆ. ಕೆಲ ಕಾರ್ಯಕರ್ತರನ್ನು ಒಗ್ಗೂಡಿಸಿ, ‘ಚಾಯ್‌ ಪೇ ಚರ್ಚಾ’ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದ ವೇಳೆ ಹಲ್ಲೆ ನಡೆದಿದ್ದು, ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಟಿಎಂಸಿ ನಾಯಕ ಮೊಹ್ಸಿನ್‌ ಗಾಝಿ ಈ ಕೃತ್ಯದ ಹಿಂದಿದ್ದಾರೆ ಎಂದು ದಿಲೀಪ್‌ ಆರೋಪಿಸಿದ್ದಾರೆ. ದಿಲೀಪ್‌ ಮೇಲಿನ ಹಲ್ಲೆಯನ್ನು ಕಾಂಗ್ರೆಸ್‌ ಲೋಕಸಭಾ ನಾಯಕ ಅಧೀರ್‌ ಚೌಧರಿ ಖಂಡಿಸಿದ್ದಾರೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"