*ರಾಮಪುರಹಟ್‌ -1 ಬ್ಲಾಕ್‌ ಅಧ್ಯಕ್ಷ ಅನರುಲ್‌ ಹೊಸ್ಸೇನ್‌ ಸೆರೆ*ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ: ಮಮತಾ

ರಾಮಪುರಹಟ್‌ (ಮಾ. 25) : ಪಶ್ಚಿಮ ಬಂಗಾಳದ ಬೀರ್‌ಭೂಮ್‌ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಸೇರಿ 8 ಮಂದಿಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಟಿಎಂಸಿ ನಾಯಕ, ರಾಮಪುರಹಟ್‌-1 ಬ್ಲಾಕ್‌ ಅಧ್ಯಕ್ಷ ಅನಾರುಲ್‌ ಹೊಸ್ಸೈನ್‌ ಎಂಬಾತನನ್ನು ಗುರುವಾರ ಬಂಧಿಸಲಾಗಿದೆ. ಹತ್ಯೆಗೆ ಕುಮ್ಮಕ್ಕು ನೀಡಿದ ಹೊಸ್ಸೈನ್‌ ಬಂಧಿಸುವಂತೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಚಿಸಿದ ಬೆನ್ನಲ್ಲೇ ಹೊಸ್ಸೈನ್‌ನನ್ನು ತಾರಪಿತಾ ಜಿಲ್ಲೆಯಲ್ಲಿ ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಡುವೆ ರಾಮಪುರಹಟ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಇನ್‌-ಚಾಜ್‌ರ್‍ ತ್ರಿದಿಬ್‌ ಪ್ರಮಾಣಿಕ್‌ ಅವರನ್ನು ನಿರ್ಲಕ್ಷ್ಯ ಆರೋಪದಡಿ ಅಮಾನತು ಮಾಡಲಾಗಿದೆ.

ಮಮತಾ ಚಾಟಿ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾಋು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪೊಲೀಸರು, ಜಿಲ್ಲಾ ಗುಪ್ತಚರ ಇಲಾಖೆಯ ನಿರ್ಲಕ್ಷ್ಯ ಧೋರಣೆಯೇ ಹಿಂಸಾಚಾರಕ್ಕೆ ಕಾರಣ ಎಂದು ಹರಿಹಾಯ್ದಿದ್ದಾರೆ. ಇದೇ ವೇಳೆ ರಾಮ್‌ಪುರಹಟ್‌ ಹತ್ಯೆಯ ಶಂಕಿತರು ಶರಣಾಗದಿದ್ದರೆ ಅವರನ್ನು ಬಂಧಿಸುವುದು ಖಚಿತ ಎಂದು ಹೇಳಿದರು. 

ಏತನ್ಮಧ್ಯೆ ಪ್ರಕರಣದಿಂದ ನೊಂದ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು. ಹಾಗೆಯೇ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಹಾಗೂ ಮನೆ ಕಟ್ಟಲು 2 ಲಕ್ಷ ನೆರವು ನೀಡುವುದಾಗಿ ಘೋಷಿಸಿದರು.

ಇದನ್ನೂ ಓದಿಟಿಎಂಸಿ ನಾಯಕನ ಹತ್ಯೆ ಬಳಿಕ ಮನೆಗೆ ಬೆಂಕಿ: 10 ಜನರ ಸಜೀವ ದಹನ

ಹಿಗ್ಗಾಮುಗ್ಗ ಥಳಿಸಿ ಬಳಿಕ 8 ಜನರ ಹತ್ಯೆ: ಪಶ್ಚಿಮ ಬಂಗಾಳದ ಬೀರ್‌ಭೂಮ್‌ ಜಿಲ್ಲೆಯ ರಾಮಪುರಹಟ್‌ನಲ್ಲಿ ಇಬ್ಬರು ಮಕ್ಕಳು ಸೇರಿ 8 ಮಂದಿಯನ್ನು ಬೆಂಕಿಹಚ್ಚಿ ಕೊಲೆಗೈಯ್ಯುವ ಮುನ್ನ ಅವರಿಗೆ ಹಿಗ್ಗಾಮುಗ್ಗಾ ಥಳಿಸಲಾಗಿತ್ತು ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ.

ಮಂಗಳವಾರ ಟಿಎಂಸಿ ನಾಯಕರೊಬ್ಬರ ಹತ್ಯೆಗೆ ಪ್ರತಿಯಾಗಿ ದುಷ್ಕರ್ಮಿಗಳ ಗುಂಪು ಗ್ರಾಮದ ಗುಡಿಸಿಗೆ ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಸೇರಿ 8 ಸಜೀವ ದಹನಗೊಂಡಿದ್ದರು. ಸುಟ್ಟು ಕರಕಲಾದ ಶವಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಸಂತ್ರಸ್ತರನ್ನು ತೀವ್ರವಾಗಿ ಥಳಿಸಿ ನಂತರ ಜೀವಂತವಾಗಿ ಬೆಂಕಿ ಹಚ್ಚಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ ಎಂದು ರಾಮಪುರಹಟ್‌ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೀರ್‌ಭೂಮ್‌ ಹತ್ಯೆ ಹೇಯ ಕೃತ್ಯ: ಮೋದಿ: ರಾಮಪುರಹಟ್‌ನಲ್ಲಿ ಮಂಗಳವಾರ ನಡೆದ 8 ಜನರ ಭೀಕರ ಹತ್ಯೆ ಪ್ರಕರಣ ಅತ್ಯಂತ ಹೇಯ ಕೃತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕೋಲ್ಕತಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ವಚ್ರ್ಯುವಲ್‌ ಆಗಿ ಭಾಗವಹಿಸಿ ಮಾತನಾಡಿದ ಮೋದಿ, ಯಾವುದೆ ಕಾರಣಕ್ಕೂ ದೋಷಿಗಳನ್ನು ಸುಮ್ಮನೆ ಬಿಡಬಾರದು. ಅವರನ್ನು ಪತ್ತೆ ಮಾಡಲು ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧ ಎಂದು ಹೇಳಿದರು.

ಇದನ್ನೂ ಓದಿ:Coal Mining Scam ಮಮತಾ ಬ್ಯಾನರ್ಜಿ ಸೋದರಳಿಯನ ಕುಟುಂಬಕ್ಕೆ ಇಡಿ ಉರುಳು!

ಈ ನಡುವೆ ಬೀರ್‌ಭುಮ್‌ ಪ್ರಕರಣದಲ್ಲಿ ್ಲ ಭಾಗಿಯಾದ ಎಲ್ಲಾ ದೋಷಿಗಳಿಗೂ ಕಠಿಣ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದವರು ಯಾವುದೇ ಪಕ್ಷದವರಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಲಿ ಘಟನಾ ಸ್ಥಳದಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಬೀಡುಬಿಟ್ಟಿರುವ ಕಾರಣ, ತಾವು ಗುರುವಾರ ರಾಮಪುರಹಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಮಮತಾ ತಿಳಿಸಿದರು.

ಮಹಿಳಾ ಆಯೋಗ ಸೂಚನೆ: ರಾಜಕೀಯ ಹಿಂಸೆಗೆ ಇಬ್ಬರು ಮಕ್ಕಳು ಮತ್ತು ಮಹಿಳೆಯರು ಬಲಿಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಪ್ರಕರಣದ ತನಿಖೆಯ ಮೇಲೆ ನಿಗಾ ಇಟ್ಟು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಂಗಾಳದ ಪೊಲೀಸ್‌ ಆಯುಕ್ತರಿಗೆ ಸೂಚಿಸಿದೆ. ಅಲ್ಲದೆ ಕೈಗೊಂಡ ಕ್ರಮಗಳ ಬಗ್ಗ 24 ಗಂಟೆಗಳಲ್ಲಿ ವರದಿ ಸಲ್ಲಿಕೆಗೂ ಸೂಚಿಸಿದೆ.

ಕೋರ್ಟ್‌ ಸೂಚನೆ: ಪ್ರಕರಣದ ಎಲ್ಲಾ ಸಾಕ್ಷಿಗಳಿಗೂ ಪೊಲೀಸರು ಭದ್ರತೆ ನೀಡಬೇಕು. ಸ್ಥಳದಲ್ಲಿ ವಿಧಿವಿಜ್ಞಾನ ತಜ್ಞರಿಂದ ಸಾಕ್ಷ್ಯ ಸಂಗ್ರಹಿಸಿ ತನಿಖೆಗೆ ಬಳಸಿಕೊಳ್ಳಬೇಕು ಎಂದು ಕೋಲ್ಕತಾ ಹೈಕೋರ್ಟ್‌ ಪೊಲೀಸರಿಗೆ ಸೂಚಿಸಿದೆ.