ಕೋಲ್ಕತ್ತಾ[ಡಿ.11]: ಎರಡು ತಲೆಯ ಹಾವು ನೋಡಲು ಸಿಗುವುದು ಬಹಳ ವಿರಳ. ಪಶ್ಚಿಮ ಬಂಗಾಳದ ಹಳ್ಳಿಯೊಂದರಲ್ಲಿ ಎರಡು ತಲೆಯ ಹಾವು ಪತ್ತೆಯಾಗಿದ್ದು, ಇದನ್ನು ನೋಡಲು ಜನರ ದಂಡೇ ಸೇರಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸುದ್ದಿ ಸಂಸ್ಥೆ ANI ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.

ದೇಗುಲದಲ್ಲಿ ವಿಭೂತಿಧಾರಿ ಹಾವು ಪ್ರತ್ಯಕ್ಷ!

ಬೆಲ್ದಾ ಅರಣ್ಯ ಪ್ರದೇಶದ ಬಳಿ ಇರುವ ಈಕ್ರುಖೀ ಹಳ್ಳಿಯಲ್ಲಿ ಈ ಎರಡು ತಲೆಯ ಹಾವು ಪತ್ತೆಯಾಗಿದೆ. ಇನ್ನು ಈ ಹಾವು ಕಂಡು ಬಂದ ಬೆಬ್ಬಲ್ಲೇ ಹಳ್ಳಿಯ ಜನರು ಹಾವಿಗೆ ಹಾಲೆರೆದು ಪೂಜೆ ಮಾಡಿದ್ದಾರೆ. ಅಲ್ಲದೇ ಅನೇಕರು ಹಾವಿನ ಫೋಟೋ ಕ್ಲಿಕ್ಕಿಸುವುದರೊಂದಿಗೆ ಸೆಲ್ಫೀ ಕೂಡಾ ತೆಗೆದಿದ್ದಾರೆ.

ಡಿಸೆಂಬರ್ 11 ರಂದು ANI ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಗ್ರಾಮಸ್ಥರೇ ಸೆರೆ ಹಿಡಿದ ಕಾಳಿಂಗ ಸರ್ಪ ಅರ​ಣ್ಯ​ಕ್ಕೆ