ರಾಹುಲ್‌ ಗಾಂಧಿ ವಿರುದ್ಧ ಯೋಜಿತ ವೈಯಕ್ತಿಕ ದಾಳಿ: ಗಾಂಧಿ ಕುಟುಂಬ ಆಪ್ತ ಸ್ಯಾಮ್‌ ಪಿತ್ರೋಡಾ ಆಕ್ರೋಶ

‘ರಾಹುಲ್‌ ಗಾಂಧಿ ಹೇಳಿದ್ದೇನೆಂದರೆ 1. ಭಾರತದ ಪ್ರಜಾಪ್ರಭುತ್ವ ಜಾಗತಿಕ ಪರಿಣಾಮಗಳನ್ನು ಹೊಂದಿದೆ. 2. ಭಾರತದ ಪ್ರಜಾಪ್ರಭುತ್ವದ ಪರಿಸ್ಥಿತಿ ಕಳವಳಕಾರಿಯಾಗಿದೆ. 3. ಅದು ಭಾರತದ ಸಮಸ್ಯೆ, ಮತ್ತು ನಾವದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು. ಇದರ ಹೊರತಾಗಿ ಅವರೆಂದೂ ವಿದೇಶಗಳನ್ನು ಭಾರತದ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಕರೆಕೊಟ್ಟಿಲ್ಲ. ಹೀಗಿರುವಾಗ ಸುಳ್ಳು ಮಾಹಿತಿಗಳನ್ನು ಆಧರಿಸಿ ರಾಹುಲ್‌ ಗಾಂಧಿ ಅವರ ಮೇಲೆ ಅತ್ಯಂತ ಯೋಜಿತ ಸ್ವರೂಪದಲ್ಲಿ ದಾಳಿ ನಡೆಸುವ ಅವಶ್ಯಕತೆಯಾದರೂ ಏನಿತ್ತು’ ಎಂದು ಸ್ಯಾಮ್‌ ಪಿತ್ರೋಡಾ ಪ್ರಶ್ನಿಸಿದ್ದಾರೆ.

well orchestrated personal attack based on lies sam pitroda on criticism of rahuls remarks in uk ash

ನವದೆಹಲಿ : ಭಾರತದಲ್ಲಿ ನಿಸ್ತೇಜವಾಗಿರುವ ಪ್ರಜಾಪ್ರಭುತ್ವದ ವಿಷಯದಲ್ಲಿ ವಿದೇಶಗಳು ಮಧ್ಯಪ್ರವೇಶ ಮಾಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಯಾವುದೇ ಹಂತದಲ್ಲೂ ಕರೆಕೊಟ್ಟಿಲ್ಲ. ಸುಳ್ಳು ಮತ್ತು ತಪ್ಪು ಮಾಹಿತಿಗಳ ಮೂಲಕ ರಾಹುಲ್‌ ವಿರುದ್ಧ ಅತ್ಯಂತ ಯೋಜಿತ ರೀತಿಯಲ್ಲಿ ವೈಯಕ್ತಿಕ ದಾಳಿ ನಡೆಸಲಾಗುತ್ತದೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಘಟಕದ ಮುಖ್ಯಸ್ಥ ಸ್ಯಾಮ್‌ ಪಿತ್ರೋಡಾ ಸ್ಪಷ್ಟಪಡಿಸಿದ್ದಾರೆ.

ರಾಹುಲ್‌ ಗಾಂಧಿ (Rahul Gandhi) ಹೇಳಿಕೆ ಕುರಿತು ದೇಶವ್ಯಾಪಿ ಭಾರೀ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಪ್ರತಿಕ್ರಿಯೆ ನೀಡಿರುವ ಸ್ಯಾಮ್‌ ಪಿತ್ರೋಡಾ (Sam Pitroda) ‘ರಾಹುಲ್‌ ಗಾಂಧಿ ಲಂಡನ್‌ನಲ್ಲಿ (London) ಆಡಿದ ಮಾತುಗಳ ಬಗ್ಗೆ ಸುಳ್ಳನ್ನು ಉತ್ತೇಜಿಸುವ, ಸುಳ್ಳನ್ನು ಹರಡುವ ಕೆಲಸವನ್ನು ದಯವಿಟ್ಟು ನಿಲ್ಲಿಸಿ. ಇಂಥ ಆರೋಪ ಮಾಡುವವರು ರಾಹುಲ್‌ ಗಾಂಧಿ ಭಾಷಣದ ಸ್ಥಳದಲ್ಲಿ ಇದ್ದರಾ? ಅವರು ರಾಹುಲ್‌ ಗಾಂಧಿ ಭಾಷಣದ ವಿಡಿಯೋಗಳನ್ನು (Speech Video) ನೋಡಿದ್ದಾರಾ? ಅವರು ಏನು ಹೇಳಿದ್ದಾರೆಂದು ನಿಮಗೆ ನಿಜವಾಗಿಯೋ ಗೊತ್ತಿದೆಯಾ?’ ಎಂದು ಟೀಕಾಕಾರರನ್ನು ಪ್ರಶ್ನಿಸಿದ್ದಾರೆ.

ಇದನ್ನು ಓದಿ: SORRY POLITICS: ರಾಹುಲ್‌ - ಮೋದಿ ಕ್ಷಮೆ ಗಲಾಟೆಗೆ ಬಲಿಯಾಯ್ತು 2ನೇ ದಿನದ ಕಲಾಪ..!

ಜೊತೆಗೆ, ‘ರಾಹುಲ್‌ ಗಾಂಧಿ ಹೇಳಿದ್ದೇನೆಂದರೆ 1. ಭಾರತದ ಪ್ರಜಾಪ್ರಭುತ್ವ ಜಾಗತಿಕ ಪರಿಣಾಮಗಳನ್ನು ಹೊಂದಿದೆ. 2. ಭಾರತದ ಪ್ರಜಾಪ್ರಭುತ್ವದ ಪರಿಸ್ಥಿತಿ ಕಳವಳಕಾರಿಯಾಗಿದೆ. 3. ಅದು ಭಾರತದ ಸಮಸ್ಯೆ, ಮತ್ತು ನಾವದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು. ಇದರ ಹೊರತಾಗಿ ಅವರೆಂದೂ ವಿದೇಶಗಳನ್ನು ಭಾರತದ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಕರೆಕೊಟ್ಟಿಲ್ಲ. ಹೀಗಿರುವಾಗ ಸುಳ್ಳು ಮಾಹಿತಿಗಳನ್ನು ಆಧರಿಸಿ ರಾಹುಲ್‌ ಗಾಂಧಿ ಅವರ ಮೇಲೆ ಅತ್ಯಂತ ಯೋಜಿತ ಸ್ವರೂಪದಲ್ಲಿ ದಾಳಿ ನಡೆಸುವ ಅವಶ್ಯಕತೆಯಾದರೂ ಏನಿತ್ತು’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:  ಭಾರತದ ಸಂಸತ್ತಿನಲ್ಲಿ ವಿಪಕ್ಷಗಳಿಗೆ ಉಸಿರುಗಟ್ಟಿಸುವ ಸ್ಥಿತಿ; ಬಿಜೆಪಿಯದ್ದು ಹೇಡಿತನದ ಸಿದ್ಧಾಂತ: ರಾಹುಲ್‌ ಗಾಂಧಿ ಆರೋಪ

Latest Videos
Follow Us:
Download App:
  • android
  • ios