ನವದೆಹಲಿ (ಏ. 14)  ಪ್ರಧಾನಿ ನರೇಂದ್ರ  ಮೋದಿಗೆ ಕಾಂಗ್ರೆಸ್ ಅಭಿನಂದನೆ ತಿಳಿಸಿದೆ. ಇದಕ್ಕೆ ಕಾರಣ ಇದೆ.  ಸಿಬಿಎಸ್‌ಇ ಪರೀಕ್ಷೆಗಳನ್ನು ಮುಂದೆ ಹಾಕಿದ್ದಕ್ಕೆ ವೆಲ್ ಡನ್ ಮೋದಿ ಜಿ ಎಂದಿದೆ.

ಕೊರೋನಾ ವೈರಸ್ ಅಬ್ಬರ ಇಡೀ ದೇಶವನ್ನು ಆವರಿಸಿದ ಕಾರಣ ಕಾಂಗ್ರೆಸ್ ಆದಿಯಾಗಿ ಅನೇಕರು ಪರೀಕ್ಷೆ ಮುಂದೆ ಹಾಕಬೇಕು ಎಂದು ಕೇಳಿಕೊಂಡಿದ್ದರು. 

ಕರ್ನಾಟಕದ ಉಳಿದ ಪರೀಕ್ಷೆಗಳ ಬಗ್ಗೆ ಸುರೇಶ್  ಕುಮಾರ್ ಸ್ಪಷ್ಟನೆ

ನರೆಂದ್ರ ಮೋದಿ ಅವರೇ ಉತ್ತಮ ಕೆಲಸ ಮಾಡಿದ್ದೀರಿ. ರಾಹುಲ್ ಗಾಂಧಿ ಅವರ ಮಾತು ಕೇಳಿ ಪರೀಕ್ಷೆ ನಡೆಸದಿರುವ ತೀರ್ಮಾನ ಮಾಡಿದ್ದೀರಿ ಎಂದು ಸೋಶಿಯಲ್ ಮೀಡಿಯಾ ಮುಖೇನ ಹೇಳಿದೆ. 

ಪ್ರಿಯಾಂಕಾ ವಾದ್ರಾ ಸಹ ಟ್ವೀಟ್ ಮಾಡಿ  ಸರ್ಕಾರ ಕೊನೆಗೂ ತೀರ್ಮಾನ ಮಾಡಿದೆ ಎಂಬುದನ್ನು ಉಲ್ಲೇಖ ಮಾಡಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಪರೀಕ್ಷೆ ಮುಂದಕ್ಕೆ ಹಾಕಬೇಕು ಎಂದು ಕೇಳಿಕೊಂಡಿದ್ದರು. ಎರಡನೇ ಅಲೆ ದೇಶದ ಅನೇಕ ರಾಜ್ಯಗಳನ್ನು ವ್ಯಾಪಿಸುತ್ತಿದ್ದು ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಸಾಲದು ಎಂಬ ಸ್ಥಿತಿ ನಿರ್ಮಾಣವಾಗಿದೆ.