ನವದೆಹಲಿ(ಸೆ.04):  ಜಮ್ಮ ಮತ್ತು ಕಾಶ್ಮೀರದಲ್ಲಿ ಯುವ ಜನಾಂಗ ಭಯೋತ್ಪಾದಕತೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳತ್ತ ಹೋಗುವುದನ್ನು ತಡೆಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ದಿಕ್ಷಾಂತ್ ಪರೇಡ್‌ನಲ್ಲಿ  ಐಪಿಎಸ್ ಪ್ರೊಬೇಶನರಿಗಳನ್ನುದ್ದೇಶಿ ಮೋದಿ ಮಾತನಾಡಿದರು.

ವಿಶ್ವಾಸಾರ್ಹ ವ್ಯವಹಾರಕ್ಕೆ ಎಲ್ಲರ ಆಯ್ಕೆ ಭಾರತ; ಅಮೆರಿಕ ಉದ್ಯಮಕ್ಕೆ ಮೋದಿ ಸ್ವಾಗತ!

ವಿಡಿಯೋ ಕಾಲ್ ಮೂಲಕ ಮಾತನಾಡಿದ ಮೋದಿ, ಜಮ್ಮ ಮತ್ತು ಕಾಶ್ಮೀರದಲ್ಲಿ ಕೆಲ ಯುವಕರನ್ನು ಸರಿದಾರಿಗೆ ತರಬೇಕಿದೆ ಎಂದರು. ಇದೇ ವೇಳೆ ಕೊರೋನಾ ವೈರಸ್ ಸಂದರ್ಭದಲ್ಲಿ ಪೊಲೀಸರು ಕಾರ್ಯವನ್ನು ಶ್ಲಾಘಿಸಿದರು. ಖಾಖಿ ಧರಿಸಿ ನೀವು ಮಾಡಿದ ಸೇವೆಗೆ ಸಲಾಂ ಎಂದು ಮೋದಿ ಹೇಳಿದ್ದಾರೆ. ನಿಮ್ಮ ಸಮವಸ್ತ್ರ ಕುರಿತು ನಿಮಗೆ ಯಾವತ್ತೂ ಗೌರವ ಹಾಗೂ ಹೆಮ್ಮೆ ಇರಬೇಕು ಎಂದರು.

ಚೌಕಿದಾರನ ಖಾತೆಗೆ ಖದೀಮರಿಂದ ಕನ್ನ; ಪಿಎಂ ಪರಿಹಾರ ನಿಧಿ ಮೇಲೆ ಅವರ ಕಣ್ಣು..!.

ಎಲ್ಲಾ ಸಂದರ್ಭ ಎದರಿಸಲು ಸಜ್ಜಾಗಿರಬೇಕು. ಸದಾ ಎಚ್ಚರದಿಂದ ಇರಬೇಕು. ಹೀಗಾಗಿ ಒತ್ತಡಗಳೇ ಹಚ್ಚಾಗಿರುತ್ತದೆ. ಇದರ ನಡುವೆ ಆಪ್ತರೊಂದಿಗೆ, ಸ್ಥಳೀಯರೊಂದಿಗೆ ಮಾತನಾಡಿ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಯೋಗ ಹಾಗೂ ಪ್ರಾಣಾಯಾಮ ಎಲ್ಲಾ ಕಾಲಕ್ಕೂ ಉತ್ತಮವಾಗಿದೆ ಎಂದು ಐಪಿಎಸ್ ಪ್ರೊಬೇಶನರಿಗಳಿಗೆ ಕಿವಿ ಮಾತು ಹೇಳಿದರು.

 ಪ್ರತಿ ವರ್ಷ ಐಪಿಎಲ್ ತೇರ್ಗಡೆಯಾದವರೊಂದಿಗೆ ಮಾತನಾಡುತ್ತೇನೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರ ಜೊತೆ ಚರ್ಚಿಸುತ್ತಿದ್ದೆ.  ಆದರೆ ಕೊರೋನಾ ವೈರಸ್ ಕಾರಣ ಯಾರನ್ನೂ ಭೇಟಿಯಾಗಲೂ  ಈ ಬಾರಿ ಸಾಧ್ಯವಾಗಿಲ್ಲ ಎಂದು ಮೋದಿ ಹೇಳಿದರು