ಸಂಸತ್ ಆದೇಶಕ್ಕಾಗಿ ಕಾಯುತ್ತಿದ್ದೇವೆ: ಸೇನಾ ಮುಖ್ಯಸ್ಥರ ಸ್ಫೋಟಕ ಹೇಳಿಕೆ!
ಸಂಸತ್ತಿನ ಯಾವ ಆದೇಶಕ್ಕೆ ಸೇನೆ ಕಾಯುತ್ತಿದೆ?| ನೂತನ ಸೇನಾ ಮುಖ್ಯಸ್ಥರು ನೀಡಿದ ಸ್ಫೋಟಕ ಹೇಳಿಕೆ ಏನು?| ಸಂಪೂರ್ಣ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದ ಜನರಲ್ ಮುಕುಂದ್ ನರವಣೆ| ಕೇಂದ್ರ ಸರ್ಕಾರ ಬಯಸಿದರೆ ಪಿಒಕೆ ಮೇಲೆ ದಾಳಿ ಮಾಡಲು ಸೇನೆ ಸನ್ನದ್ಧ ಎಂದ ನರವಣೆ| ಸಂಸತ್ತು ಬಯಿಸಿದರೆ ಪಿಒಕೆ ಮರುವಶಕ್ಕೆ ಸೇನೆಯಿಂದ ಕಾರ್ಯಾಚರಣೆ ಎಂದ ಸೇನಾ ಮುಖ್ಯಸ್ಥ|
ನವದೆಹಲಿ(ಜ.11): ಪಾಕ್ ಆಕ್ರಮಿತ ಕಾಶ್ಮೀರವೂ ಸೇರಿದಂತೆ ಸಂಪೂರ್ಣ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಪಿಒಕೆ ಮರುವಶಕ್ಕೆ ಸೇನೆ ಸಜ್ಜಾಗಿದೆ ಎಂದು ನೂತನ ಸೇನಾ ಮುಖ್ಯಸ್ಥ ಜನರಲ್ ಮುಕುಂದ್ ನರವಣೆ ಹೇಳಿದ್ದಾರೆ.
"
ಸಂಪೂರ್ಣ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದರಲ್ಲಿ ಸಂದೇಹವೇ ಇಲ್ಲ ಎಂದಿರುವ ನರವಣೆ, ಸಂಸತ್ತು ಅನುಮತಿ ನೀಡಿದರೆ ಪಿಒಕೆ ಮೇಲೆ ದಾಳಿಗೆ ಸರ್ವ ಸನ್ನದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ಸರ್ಕಾರ ಆದೇಶಿಸುವ ಯಾವುದೇ ಕಾರ್ಯಾಚರಣೆಯನ್ನು ಸಫಲಗೊಳಿಸುವುದು ಸೇನೆಯ ಜವಾಬ್ದಾರಿಯಾಗಿದ್ದು, ಸಂಸತ್ತು ಪಿಒಕೆ ಮರುವಶ ಬಯಸಿದರೆ ಅದಕ್ಕೆ ನಾವು ಸಿದ್ಧ ಎಂದು ನರವಣೆ ಸ್ಪಷ್ಟಪಡಿಸಿದರು.
ಪಾಕ್ ಆಕ್ರಮಿತ ಕಾಶ್ಮೀರ ಟಾರ್ಗೆಟ್ ಮಾಡಲು ಸಿದ್ಧ: ಸೇನಾ ಮುಖ್ಯಸ್ಥ!
ಸಂಪೂರ್ಣ ಕಾಶ್ಮೀರವನ್ನು ಒಗ್ಗೂಡಿಸುವ ಕೂಗಿಗೆ ಕಣಿವೆಯ ಜನತೆ ಬೆಂಬಲವಾಗಿ ನಿಂತಿದ್ದು, ಜನರ ಸಹಕಾರದೊಂದಿಗೆ ಈ ಪ್ರಯತ್ನಕ್ಕೆ ಕೈಹಾಕಲು ಸೇನೆ ಬಯಸಿದೆ ಎಂದು ಜನರಲ್ ನರವಣೆ ನುಡಿದರು.
ಪಿಒಕೆ ಮೇಲೆ ಸ್ವಯಂಪ್ರೇರಿತವಾಗಿ ಕಾರ್ಯಾಚರಣೆ ಕೈಗೊಳ್ಳುವುದು ಸೇನೆಯ ಕೆಲಸವಲ್ಲ. ಈ ಆದೇಶ ಸಂಸತ್ತಿನಿಂದಲೇ ಬರಬೇಕು ಎಂದು ನರವಣೆ ಸೂಚ್ಯವಾಗಿ ಹೇಳಿದರು.