ಹಮದಾಬಾದ್[ಫೆ.24]: ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ಪತ್ನಿ, ಪುತ್ರಿ, ಅಳಿಯ ಸೇರಿದಂತೆ ಅಧಿಕಾರಿಗಳೊಂದಿಗೆ ಭಾರತಕ್ಕೆ ಬರಲಿರುವ ಟ್ರಂಪ್‌ಗೆ ಅದ್ಧೂರಿ ಸ್ವಾಗತ ಕೋರಲು ಅಹಮದಾಬಾದ್ ನವ ವಧುವಿನಂತೆ ತಯಾರಾಗಿದೆ.

ಇನ್ನು ಭಾರತಕ್ಕೆ ಇಬರುವುದಕ್ಕೂ ಮುನ್ನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಒಂದನ್ನು ಮಾಡುತ್ತಾ ತಾವು ಭಾರತಕ್ಕೆ ಆಗಮಿಸಲು ಸಜ್ಜಾಗಿದ್ದೇವೆ. ಈಗಾಗಲೇ ನಾವು ಹೊರಟಿದ್ದು, ಇನ್ನು ಕೆಲವೇ ಗಂಟೆಯಲ್ಲಿ ಭೇಟಿಯಾಗುತ್ತೇವೆ ಎಂದು ಬರೆದಿದ್ದಾರೆ.

ಇನ್ನು ಈ ಟ್ವೀಟ್ ಹಿಂದಿಯಲ್ಲಿ ಇದೆ ಎಂಬುವುದು ಉಲ್ಲೇಖನೀಯ. ಈಗಾಗಲೇ ಟ್ರಂಪ್ ಎರಡು ದಿನದ ಭಾರತ ಪ್ರವಾಸಕ್ಕೆ ಸಕಲ ಸಿದ್ಧತೆ ನಡೆದಿದ್ದು, ಅಹಮದಾಬಾದ್‌ನ ಮೊಂಟೆರೋ ಸ್ಟೇಡಿಯಂನಲ್ಲಿ ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದಾರೆ. ಅಮೆರಿಕಾ ಅಧ್ಯಕ್ಷರ ಆಗಮನ ಹಿನ್ನೆಲೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ.

ಟ್ರಂಪ್ ಮಾಡಿದ ಈ ಟ್ವೀಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು, ಅತಿಥಿ ದೇವೋಭವ ಎಂದು ಬರೆದಿದ್ದಾರೆ.

ಈಗಾಗಲೇ ಡೊನಾಲ್ಡ್ ಟ್ರಂಪ್ ಸ್ವಾಗತಿಸಲು ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಹಮದಾಬಾದ್‌ಗೆ ಆಗಮಿಸಿದ್ದಾರೆ.

ಟ್ವೀಟ್‌ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿಳಿದಿದ್ದು, ಪ್ರಧಾನಿ ಮೋದಿ ಆಲಂಗಿಸಿದ್ದಾರೆ.