ಮಾರಿಯಮ್ಮನ ಮುನಿಸೇ ದುರಂತಕ್ಕೆ ಕಾರಣವಾಯ್ತಾ? 2 ವರ್ಷದ ಹಿಂದೆಯೇ ಸೂಚನೆ ಕೊಟ್ಟಿತ್ತಾ ದೇವರು?

ಮಾರಿಯಮ್ಮನ ಮುನಿಸಿನಿಂದ ನಡೆಯಿತಾ ಕೇರಳದಲ್ಲಿ ಮಹಾ ದುರ್ಘಟನೆ? ಎರಡು ವರ್ಷದ ಹಿಂದೆಯೇ ದೇವರು ಸೂಚನೆ ಕೊಟ್ಟಿದ್ದೇನು? ತಾಂಬೂಲ‌ ಪ್ರಶ್ನೆಯಲ್ಲಿ ಬಂದ ಉತ್ತರವನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ನಡೆಯಿತಾ ಮಹಾ ದುರಂತ? ಗ್ರಾಮಸ್ಥರಲ್ಲಿ ನಡೆದಿದೆ ಗುಸುಗುಸು! ಸ್ಥಳೀಯರು ಹೇಳೋದೇನು?
 

Wayanad landslides What reasons the disaster? mariyamma temple shiva temple rav

Wayanad landslides: ಭಾರೀ ಮಳೆಯಿಂದಾಗಿ ಕೇರಳದ ವಯನಾಡಿನಲ್ಲಿ ಅಕ್ಷರಶಃ ಜಲಪ್ರಳಯವೇ ಸಂಭವಿಸಿದೆ ಗುಡ್ಡ ಕುಸಿತ ದುರಂತದಲ್ಲಿ ಇದುವರೆಗೆ ಮೃತರ ಸಂಖ್ಯೆ ನಾಲ್ಕು ನೂರರ ಗಡಿ ಸಮೀಪಿಸಿದೆ 500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಕೆಲವರು ಹಲವಾರು ಜನ ಮಣ್ಣಿನಡಿಯಲ್ಲೇ ಸಿಲುಕಿದ್ದಾರೆ. ದುರಂತದ ಸ್ಥಳದಲ್ಲಿ ಎನ್‌ಡಿಆರ್‌ಎಫ್, ನೌಕಪಡೆ, ಸಂಘಸಂಸ್ಥೆಗಳು ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಎಲ್ಲಿ ನೋಡಿದರೂ ರಾಶಿ ರಾಶಿ ಹೆಣಗಳು ಬಿದ್ದಿವೆ. ಪೋಸ್ಟ್ ಮಾರ್ಟಂ ಮಾಡಿ ವೈದ್ಯರೇ ಸುಸ್ತಾಗಿದ್ದಾರೆ. ಕೇರಳ ಭೂಕುಸಿತ ದುರಂತ ಅಷ್ಟು ಭಯಾನಕವಾಗಿದೆ.

ಕೇರಳ ಭೂಕುಸಿತಕ್ಕೆ ಕಾರಣವೇನು? ಮಾನವ ನಿರ್ಮಿತವೇ? ಪ್ರಾಕೃತಿ ವಿಕೋಪವೇ ದೇವರನಾಡಿನಲ್ಲಿ ದೈವದ ಮುನಿಸೇ? ಭೂಕುಸಿತ ದುರಂತದ ಬಳಿಕ ಇದೀಗ ಪ್ರಶ್ನೆಗಳು ಎದ್ದಿವೆ. ಕೇರಳದ ದುರಂತಕ್ಕೆ ಮಾರಿಯಮ್ಮನ ಮುನಿಸೇ ಕಾರಣ ಎನ್ನುತ್ತಿರುವ ಸ್ಥಳೀಯರು. ಇಂದಿನ ದುರ್ಘಟನೆ ಬಗ್ಗೆ ಎರಡು ವರ್ಷದ ಹಿಂದೆಯೇ ಸೂಚನೆ ಕೊಟ್ಟಿತ್ತಾ ದೇವರು? ತಾಂಬೂಲ ಪ್ರಶ್ನೆಯಲ್ಲಿ ಬಂದ ಉತ್ತರವನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ನಡೆದುಹೋಯಿತಾ ದುರಂತ? ಚೋರಲ್ ಮಲೈ ಗ್ರಾಮಸ್ಥರಲ್ಲಿ ನಡೆದಿದೆ ಗುಸುಗುಸು ಸುದ್ದಿ! 

ಇವನ ಬಳಿ ದೇಶ ಸುಧಾರಿಸುವ ಐಡಿಯಾಗಳಿವೆಯಂತೆ; ಜಿಲ್ಲಾಧಿಕಾರಿ ಹುದ್ದೆಗೆ ಬೇಡಿಕೆ ಇಟ್ಟ ವಿಚಿತ್ರ ಯುವಕ!

ಭೂ ಕುಸಿತ ದುರಂತದಲ್ಲಿ ಶಿವನ ದೇವಾಲಯ ನಾಶವಾದ ಸ್ಥಳದಲ್ಲೇ ಇದ್ದ ಮಾರಿಯಮ್ಮ ದೇವಾಲಯ. ಮಾರಿಯಮ್ಮ ದೇವಾಲಯ ಇದ್ದ ಸ್ಥಳದಲ್ಲಿ ಶಿವನ ದೇವಾಲಯ ನಿರ್ಮಾಣ ಮಾಡಿದ್ದ ಗ್ರಾಮಸ್ಥರು. ಮಾರಿಯಮ್ಮ ದೇವಾಲಯ ಇದ್ದ ಸ್ಥಳದಲ್ಲೇ ಎರಡು ವರ್ಷಗಳ ಹಿಂದೆ  ಶಿವನ ದೇವಾಲಯ ನವೀಕರಣ ಕಾರ್ಯ ಮಾಡಿದ್ರು. ಒಂದೂವರೆಗೆ ಕೋಟಿ ರೂ. ವೆಚ್ಚದಲ್ಲಿ ಶಿವನ ದೇವಾಲಯ ನಿರ್ಮಾಣ ಮಾಡಲಾಗಿತ್ತು. ಶಿವನ ದೇವಾಲಯ ನಿರ್ಮಾಣ ಮಾಡಿದ ನಂತರ ಹಲವು ಸಮಸ್ಯೆಗಳು ಉದ್ಬವಿಸಲಾರಂಭಿಸಿದವು. ಹಲವು ಸಮಸ್ಯೆಗಳು ಬರಲಾರಂಭಿಸಿದ್ದರಿಂದ ಅಷ್ಟ ಮಂಗಲ‌ ಪ್ರಶ್ನೆ ಕೇಳಿದ್ದ ಚೋರಲ್ ಮಲೈ ಗ್ರಾಮಸ್ಥರು. ಈ ವೇಳೆ ನದಿ ತಿರುವು ಬದಲಾಗುತ್ತೆ, ದೇವಸ್ಥಾನಕ್ಕೆ ಧಕ್ಕೆಯಾಗುತ್ತೆ ಎಂಬ ಉತ್ತರ ನೀಡಿತ್ತು ದೇವರು. ಆದರೂ ದೈವದ ಉತ್ತರವನ್ನು ನಿರ್ಲಕ್ಷ್ಯ ಮಾಡಿ ದೇವಸ್ಥಾನ ನಿರ್ಮಾಣ ಮಾಡಿದ್ದ ಜನರು. ಈಗ ದುರ್ಘಟನೆ ನಂತರ ತಾಂಬೂಲ ಪ್ರಶ್ನೆಗಳ ವಿಚಾರಗಳನ್ನ ನಂಬಬೇಕಿತ್ತು. ತಪ್ಪು ಮಾಡಿದೆವು ಎನ್ನುತ್ತಿರುವ ಗ್ರಾಮಸ್ಥರು. ಈ ಬಗ್ಗೆ ಸ್ಥಳೀಯರಾದ ರಾಜ್‌ಕುಮಾರ ಎಂಬುವವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ಕೊಡಲಿಯಿಂದ ತಾಯಿ ಮೇಲೆಯೇ ಮಗನಿಂದ ಹಲ್ಲೆ! ಮಾನಸಿಕ ಅಸ್ವಸ್ಥನ ಹಿಡಿಯಲು ಪೊಲೀಸರು ಹರಸಾಹಸ!

8 ಕಿಲೋಮೀಟರ್ ದೂರದಲ್ಲಿ ಗುಡ್ಡ ಕುಸಿತ ಆಗಿರೋದು. ಈ ಹಿಂದೆ 1984ರಲ್ಲೂ ಗುಡ್ಡ ಕುಸಿದು 13 ಜನರು ಮೃತಪಟ್ಟಿದ್ರು. ಅದಾದ ಬಳಿಕ ಮತ್ತೆ 2019ರಲ್ಲಿ ಗುಡ್ಡ ಕುಸಿದು 17 ಜನರು ಮೃತಪಟ್ಟಿದ್ರು. ಅಂದಿನ ದುರಂತದಲ್ಲಿ ನಾಪತ್ತೆಯಾದ ಐದು ಜನರ ಬಾಡಿ ಇನ್ನುವರೆಗೆ ಸಿಕ್ಕಿಲ್ಲ. ಗುಡ್ಡದ ಹಿಂದೆ ದುರ್ಘಟನೆ ಆದಾಗ 49 ಜನ ಸತ್ತಿದ್ರು. ಇದು ಸ್ವಲ್ಪ ಸೂಕ್ಷ್ಮ ಪ್ರದೇಶವಾಗಿದೆ. ಪದೇಪದೆ ಇಂತಹ ದುರ್ಘಟನೆಗಳು ನಡೆದಿದ್ದರಿಂದ ದೇವರ ಮೊರೆ ಹೋಗಿದ್ದ ಗ್ರಾಮಸ್ಥರು. ಈಗ ದುರ್ಘಟನೆ ನಂತರ ತಾಂಬೂಲ ಪ್ರಶ್ನೆ ವಿಚಾರಗಳನ್ನು ನಂಬಬೇಕಿದೆ ಸ್ಥಳೀಯರು ಈ ಬಗ್ಗೆ ಸ್ಥಳೀಯ ರಾಜ್‌ಕುಮಾರ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios