ಕಾರಿನ ಡ್ರೈವರ್ ಆದ ಬುಸ್ ಬುಸ್ ನಾಗಪ್ಪ; ಅಸಲಿ ಚಾಲಕ ಎಲ್ಲಪ್ಪಾ..?
ಕೋಟದಲ್ಲಿ ಒಂದು ಕಾರಿನೊಳಗೆ ನಾಗರ ಹಾವು ನುಗ್ಗಿ ಕಾರಿನ ಸ್ಟೇರಿಂಗ್ ಮೇಲೆ ಕುಳಿತು ಕೆಲವು ಗಂಟೆಗಳ ಕಾಲ ಭಯ ಹುಟ್ಟಿಸಿತ್ತು. ಆದರೆ, ಅಸಲಿ ಕಾರಿನ ಡ್ರೈವರ್ ಮಾತ್ರ ಕಾರನ್ನು ಬಿಟ್ಟು ಜೀವ ಭಯದಿಂದ ಅಲ್ಲಿಂದ ಓಡಿ ಹೋಗಿದ್ದನು.
ರಾಜಸ್ಥಾನ (ನ.20) : ಅಯ್ಯೊ..! ಇಲ್ಲಿ ನೋಡಿ ಕಾರಿನ ಚಾಲಕ ಕೂರುವ ಜಾಗದಲ್ಲಿ ಸ್ಟೇರಿಂಗ್ ಹಿಡಿದು ನಾಗರ ಹಾವು ಕುಳಿತುಕೊಂಡಿದೆ. ಇನ್ನು ಕಾರಿನ ಚಾಲಕ ಬಂದು ಬಾಗಿಲು ತೆರೆದು ಹಾವನ್ನು ನೋಡಿ ಗಾಬರಿಗೊಂದು ದೂರ ಓಡಿದ್ದಾನೆ. ಹಾವನ್ನು ಓಡಿಸಲು ಜನರು ಸುತ್ತುವರಿದಿದ್ದರಿಂದ ಹಾವು ಗಾಬರಿಗೊಂಡು ಇಂಜಿನ್ ಒಳಗೆ ಹೊಕ್ಕಿದ್ದು, ಸುಮಾರು 3 ಗಂಟೆಗಳ ಕಾಲ ಕಾರಿನಿಂದ ಹೊರಬರದೇ ಮಾಲೀಕನಿಗೆ ಕಾಟ ಕೊಟ್ಟಿದೆ.
ಸಾಮಾನ್ಯವಾಗಿ ನಾವು ವಾಹನಗಳನ್ನು ನಿಲ್ಲಿಸಿದಾಗ ಅದರಲ್ಲಿ ಹಾವು, ಚೇಳು, ಇಲಿ ಸೇರಿದಂತೆ ಕೆಲವು ಕೀಟಗಳು ಹಾಗೂ ವಿಷ ಜಂತುಗಳು ಸೇರಿಕೊಳ್ಳುತ್ತವೆ. ಹೀಗಾಗಿ, ಕಾಡಂಚಿನ ಗ್ರಾಮಸ್ಥರು, ರಸ್ತೆ ಬದಿ ಇರುವವರು, ಜಮೀನಿನ ಬಳಿ ಮನೆ ಹೊಂದಿರುವವರು ಹಾಗೂ ಸುತ್ತಲೂ ಖಾಲಿ ನಿವೇಶನಗಳಿರುವ ಜಾಗದಲ್ಲಿ ಮನೆ ಕಟ್ಟಿಸಿಕೊಂಡವರು ಪ್ರತಿಬಾರಿ ಬೆಳಗ್ಗೆ ವಾಹನ ತೆಗೆಯುವಾಗ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಸ್ವಲ್ಪ ಯಾಮಾರಿದರೂ ಅನಾಹುತ ಮಾತ್ರ ತಪ್ಪಿದ್ದಲ್ಲ. ಇದರಲ್ಲಿ ಪ್ರಾಣಿಗಳದ್ದು ತಪ್ಪು ಎಂದು ಹೇಳುವುದಕ್ಕಿಂತ, ನಾವೇ ಅವುಗಳ ಆವಾಸ ಸ್ಥಾನದಲ್ಲಿ ವಾಸ ಮಾಡಲು ಮುಂದಾಗಿದ್ದು, ಅವುಗಳಿಗೆ ತೊಂದರೆ ಕೊಡದೇ ಸಂರಕ್ಷಣೆ ಮಾಡಿ ಬೇರೆ ಸ್ಥಳಾಂತರಿಸಬೇಕು.
ರಾಜಸ್ಥಾನದ ಕೋಟಾ ನಗಗರದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾಕ್ ಮಾಡಿದ ಕಾರಿನೊಳಗೆ ನುಗ್ಗಿದ ನಾಗರ ಹಾವು ನುಗ್ಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಸ್ಥಳೀಯ ವ್ಯಕ್ತಿ ಅರ್ಜುನ್ ಗುರ್ಜರ್ ಎಂಬುವವರು ತಮ್ಮ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು, ವಾಪಸ್ ಬರುವಾಗ ಕಾರಿನ ಸುತ್ತಲೂ ಜನರು ನಿಂತಿದ್ದರು. ಕಾರಿನ ಸುತ್ತಲೂ ಜನರು ನಿಂತುಕೊಂಡು ಕಾರಿನ ಒಳಗೆ ಹಾವು ತೆವಳುತ್ತಿರುವುದನ್ನು ನೋಡುತ್ತಿದ್ದರು. ಇದೇನಿರಬಹುದು ಎಂದು ಕಾರಿನ ಬಾಗಿಲು ತೆರೆದು ನೋಡಿದ ಮಾಲೀಕನಿಗೆ ಸ್ಟೇರಿಂಗ್ ಮೇಲೆ ನಾಗರ ಹಾವು ಹೆಡೆ ಎತ್ತು ಕುಳಿತಿರುವುದು ಕಂಡುಬಂದಿದೆ. ಇದನ್ನು ಓಡಿಸಲು ಪ್ರಯತ್ನ ಮಾಡಿದರಾದರೂ, ಅದು ಎಂಜಿನ್ ಒಳಗೆ ಸೇರಿಕೊಂಡಿದೆ.
ಇದನ್ನೂ ಓದಿ: ದೂರದರ್ಶನ ನಿರೂಪಕಿ ಮಥೀರಾ ಖಾಸಗಿ ವಿಡಿಯೋ ವೈರಲ್
ಎಂಜಿನ್, ಡಿಕ್ಕಿ ಮತ್ತು ಸ್ಟೀರಿಂಗ್‌ವರೆಗೂ ತಲುಪಿದ ಕೋಬ್ರಾ: ತಕ್ಷಣ ಕಾರಿನ ಮಾಲೀಕ ಸ್ಥಳೀಯ ಹಾವು ಹಿಡಿಯುವ ವ್ಯಕ್ತಿ ಗೋವಿಂದ್ ಶರ್ಮಾ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಗೋವಿಂದ್ ಶರ್ಮಾ ಕಾರಿನ ಎಂಜಿನ್, ಡಿಕ್ಕಿ ಮತ್ತು ಸ್ಟೀರಿಂಗ್ ಬಳಿ ಹಾವನ್ನು ಹುಡುಕಲು ಪ್ರಯತ್ನಿಸಿದರು, ಆದರೆ ಯಶಸ್ವಿಯಾಗಲಿಲ್ಲ. ಕೊನೆಗೆ ಕಾರನ್ನು ಮೆಕ್ಯಾನಿಕ್ ಅಂಗಡಿಗೆ ತಗೆದುಕೊಂಡು ಹೋಗಬೇಕಾಯಿತು. ಮೆಕ್ಯಾನಿಕ್ ಕಾರಿಗೆ ನೀರಿನ ಪ್ರೆಸರ್ ಬಿಟ್ಟು ನೋಡಿದರೂ ಹಾವು ಕಾಣಿಸಲಿಲ್ಲ. ಈ ಸಮಯದಲ್ಲಿ ಕಾರು ಮಾಲೀಕನಿಗೆ ತುಂಬಾ ಭಯವಾಗಿದ್ದರಿಂದ ಅವನು ಕಾರನ್ನು ಓಡಿಸದೇ ಸುಮ್ಮನಾಗಿದ್ದಾರೆ. ಆಗ, ಹಾವು ಹಿಡಿಯುವವನೇ ಕಾರನ್ನು ಮೆಕ್ಯಾನಿಕ್ ಗ್ಯಾರೇಜಿನ ಬಳಿ ಓಡಿಸಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್; ಈತನಿಗಿತ್ತು ರೋಚಕ ಇತಿಹಾಸ
ಮೂರು ಗಂಟೆಗಳ ಕಠಿಣ ಪರಿಶ್ರಮದ ನಂತರ ಹೊರಬಂದ ಹಾವು: ಇನ್ನು ಕಾರು ಇಂಜಿನ್ ಆರಂಭವಾಗಿ ಸ್ವಲ್ಪ ಬಿಸಿ ಎನಿಸಿದಾಗ ಹಾವು ಕಾರಿನಿಂದ ಹೊರಗೆ ಬರಲು ಪ್ರಯತ್ನಿಸಿದೆ. ಆಗ ಪುನಃ ಕಾರು ಮಾಲೀಕ ಅವರು ಹಾವನ್ನು ನೋಡಿದ್ದಾಗಿ ತಿಳಿಸಿದ್ದಾರೆ. ಆಗ, ಗೋವಿಂದ್ ಶರ್ಮಾ ಮತ್ತೆ ಸ್ಥಳಕ್ಕೆ ಬಂದರು. ಅವರು ಸ್ಟೀರಿಂಗ್ ಬಾಕ್ಸ್ ತೆರೆದು ಕೊನೆಗೆ 3 ಅಡಿ ಉದ್ದದ ನಾಗರ ಹಾವನ್ನು ರಕ್ಷಿಸಿದರು. ಸತತ 3 ಗಂಟೆಗಳ ಪರಿಶ್ರಮದ ನಂತರ ಹಾವನ್ನು ಸಂರಕ್ಷಣೆ ಮಾಡಿದ್ದರಿಂದ ಕಾರು ಮಾಲೀಕ ನಿಟ್ಟುಸಿರು ಬಿಟ್ಟಿದ್ದಾರೆ. ಈ ಘಟನೆಯಲ್ಲಿ ಹಾವನ್ನು ರಕ್ಷಿಸಲು ಹಾವು ಹಿಡಿಯುವವನು ಹಲವು ಬಾರಿ ಬರಬೇಕಾಯಿತು. ಈ ಘಟನೆಯು ನಮ್ಮ ಕಾರುಗಳನ್ನು ಯಾವಾಗಲೂ ಎಚ್ಚರಿಕೆಯಿಂದ ನಿಲ್ಲಿಸಬೇಕು ಮತ್ತು ಅಂತಹ ಯಾವುದೇ ಅನಾಹುತಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ವಹಿಸಬೇಕೆಂಬ ಎಚ್ಚರಿಕೆಯಾಗಿದೆ.