Couple Romance: ಮದುವೆಯಾದ ಕೂಡಲೇ ವರ ಕಾರ್‌ನಲ್ಲಿ ವಧುವಿನ ಸೊಂಟಕ್ಕೆ ಕೈ ಹಾಕಿ ರೊಮ್ಯಾನ್ಸ್ ಮಾಡಲು ಶುರು ಮಾಡಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ಮನೆ ಬರೋವರೆಗೂ ತಾಳ್ಮೆ ಇರಲಿ ಎಂದು ಕಮೆಂಟ್ ಮಾಡಿದ್ದಾರೆ.

Groom Bride Trending Video: ಇಂದು ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು, ಸಾಲು ಸಾಲು ವೈರಲ್ ವಿಡಿಯೋಗಳು ಕಣ್ಮುಂದೆ ಬರುತ್ತದೆ. ಅದರಲ್ಲಿ ಅಡುಗೆ ಮತ್ತು ಮದುವೆಗೆ ಸಂಬಂಧಿಸಿದ ವಿಡಿಯೋಗಳು ಕಡಿಮೆ ಸಮಯದಲ್ಲಿಯೇ ವೈರಲ್ ಆಗುತ್ತವೆ. ಒಂದಿಷ್ಟು ವಿಡಿಯೋ ನೋಡುಗರ ಮುಜುಗರಕ್ಕೆ ಒಳಗಾಗುತ್ತವೆ. ಇತ್ತೀಚೆಗಷ್ಟೆ ವಧು-ವರ ಕಾರ್‌ನಲ್ಲಿಯೇ ಮದ್ಯ ಸೇವಿಸಲು ಶುರು ಮಾಡಿದ್ದರು. ಇದೀಗ ಅಂತಹುವುದೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪಾದರಸದಂತೆ ಹರಿದಾಡುತ್ತಿದೆ. ಕಾರ್‌ನಲ್ಲಿ ಬೇರೆಯವರು ಇರೋದನ್ನು ಮರೆತ ವರ ಪಕ್ಕದಲ್ಲಿ ಕುಳಿತಿದ್ದ ವಧುವಿನ ಸೊಂಟಕ್ಕೆ ಕೈ ಹಾಕಿ ರೊಮ್ಯಾನ್ಸ್ ಮಾಡಲು ಶುರು ಹಚ್ಕೊಂಡಿದ್ದಾನೆ. 

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿದ್ರೆ ನೀವು ಸಹ ಒಂದು ಕ್ಷಣ ಕಣ್ಣು ಮುಚ್ಚಿಕೊಳ್ಳಬೇಕಾಗುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಮದುವೆಯಾದ ಕೂಡಲೇ ವರ ರೊಚ್ಚಿಗೆದ್ದಿದ್ದಾನೆ. ಮನೆ ಬರೋವರೆಗೂ ಸ್ವಲ್ಪ ತಾಳ್ಮೆ ಇರಲಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನುಈ ವಿಡಿಯೋವನ್ನು ಮುಂದಿನ ಆಸನದಲ್ಲಿ ಕುಳಿತ ಮಹಿಳೆಯೊಬ್ಬರು ಮಾಡಿದ್ದಾರೆ. ಈ ಮಹಿಳೆಯನ್ನು ಬಾಬಿ ಎಂದು ಕರೆದು ನೆಟ್ಟಿಗರು ಕಾಲ್ ಮಾಡಿದ್ದಾರೆ. 

ಕಾರ್‌ನಲ್ಲಿ ಕುಚ್ ಕುಚ್ ಶುರು!
ವೈರಲ್ ಆಗಿರೋ ವಿಡಿಯೋದಲ್ಲಿ ಕಾರ್ ಹಿಂಬದಿ ಆಸನದಲ್ಲಿ ನವಜೋಡಿ ಕುಳಿತಿರೋದನ್ನು ಗಮನಿಸಬಹುದು. ಈ ಜೋಡಿಯ ಪಕ್ಕದಲ್ಲಿಯೇ ಮತ್ತೋರ್ವ ಯುವಕ, ಮುಂದೆ ಚಾಲಕ ಮತ್ತು ಓರ್ವ ಮಹಿಳೆ ಕುಳಿತಿದ್ದಾರೆ. ಕಾರ್‌ನಲ್ಲಿ ಇಷ್ಟೆಲ್ಲಾ ಜನರಿದ್ರೂ ವಧುವಿನ ಹೆಗಲ್ಮೇಲೆ ವರ ಕೈ ಹಾಕುತ್ತಾನೆ. ನಂತರ ನಿಧಾನಕ್ಕೆ ಸೊಂಟಕ್ಕೆ ಕೈ ಹಾಕಿ ರೊಮ್ಯಾನ್ಸ್ ಮಾಡಲು ಶುರು ಮಾಡುತ್ತಾನೆ. 

ಇದನ್ನೂ ಓದಿ: 7 ಅಡಿ ಎತ್ತರದ ಗೇಟ್ ಹಾರಿ ನರ್ಸಿಂಗ್ ಹೋಮ್‌ನಿಂದ ಎಸ್ಕೇಪ್ ಆದ 92 ವರ್ಷದ ಅಜ್ಜಿ: ವೀಡಿಯೋ ವೈರಲ್

ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?
ನವಜೋಡಿಗಳಿಗಿಂದ ಈ ವಿಡಿಯೋ ಮಾಡುತ್ತಿರುವ ಮಹಿಳೆಯೇ ಹೆಚ್ಚು ಉತ್ಸುಕರಾದಂತೆ ಕಂಡು ಬರುತ್ತಿದೆ. ಬಹುಶಃ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ವ್ಯಕ್ತಿ ಈಕೆಯ ಗಂಡನಾಗಿರಬಹುದು ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದಿಷ್ಟು ಮಂದಿ, ಮನೆಗೆ ಹೋದ್ಮೇಲೆ ಈ ಕೆಲಸ ಮಾಡೋದು ಇದ್ದೇ ಇರುತ್ತೆ. ಸ್ವಲ್ಪ ವೇಟ್ ಮಾಡು ಗುರು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಲೈಕ್ಸ್‌ಗಾಗಿ ತಮ್ಮ ಮರ್ಯಾದೆಯನ್ನೇ ಅವರೇ ಕಳೆದುಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ವೈರಲ್ ಆಗಿರುವ ವಿಡಿಯೋವನ್ನು ಹಸನಾ ಜರೂರಿ ಹೈ (@HasnaZaruriHai) ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಏಪ್ರಿಲ್ 6ರಂದು ಪೋಸ್ಟ್ ಮಾಡಲಾಗಿರುವ ವಿಡಿಯೋಗೆ ಇದುವರೆಗ 8.34 ಲಕ್ಷಕ್ಕೂ ಅಧಿಕ ವ್ಯೂವ್ ಎರಡೂವರೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. 

ಇದನ್ನೂ ಓದಿ: ಕೆಲಸ, ಆದಾಯ ಇಲ್ಲದ ಮೇಲೆ ಮದುವೆ ಆಗಿದ್ದೇಕೆ?ನ್ಯಾಯಾಧೀಶರ ಮಾತಿಗೆ ಭಾರಿ ಚರ್ಚೆ

Scroll to load tweet…