Asianet Suvarna News Asianet Suvarna News

PM Security Breach: ಮೋದಿ ಭದ್ರತೆ ಲೋಪ ಯೋಜಿತ ಪಿತೂರಿ: ಕಿರಣ್ ಬೇಡಿ

* ಮೋದಿ ಭದ್ರತೆ ವೈಫಲ್ಯ, ಪಂಜಾಬ್ ಸರ್ಕಾರದ ವಿರುದ್ಧ ಕಿಡಿ

* ಭದ್ರತಾ ವೈಫಲ್ಯದ ಬಗ್ಗೆ ಮಾಜಿ ಐಪಿಎಸ್‌ ಕಿರಣ್ ಬೇಡಿ ಶಾಕಿಂಗ್ ಹೇಳಿಕೆ

* ಇದೊಂದು ಯೋಜಿತ ಪಿತೂರಿ ಎಂದ ಕಿರಣ್ ಬೇಡಿ

Was Breach A Pre Planned Conspiracy Kiran Bedi Questions Punjab Govt Over Lapse in PM Security pod
Author
Bangalore, First Published Jan 8, 2022, 2:35 PM IST

ನವದೆಹಲಿ(ಜ.08): ಪ್ರಧಾನಿ ಮೋದಿ ಭದ್ರತೆಯ ಲೋಪ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ದೊಡ್ಡ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ ಡಿಜಿಪಿ ಗೈರುಹಾಜರಾಗಿದ್ದರು. ರಾಜ್ಯ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿಯೂ ಹಾಜರಾಗಿರಲಿಲ್ಲ. ಈ ವೇಳೆ ಡಿಎಂ ಕೂಡ ಇರಲಿಲ್ಲ. ಭದ್ರತಾ ಲೋಪವು ಪೂರ್ವ ಯೋಜಿತ ಪಿತೂರಿಯೇ? ಇದು ಪ್ರಧಾನಿಯವರ ಕುಮ್ಮಕ್ಕಿನಿಂದ ಸ್ಪಷ್ಟ ನಿದರ್ಶನವಾಗಿದೆ ಎಂದು ಮಾಜಿ ಐಪಿಎಸ್‌ ಕಿರಣ್ ಬೇಡಿ ಹೇಳಿದರು. 

ಏನಿದು ಘಟನೆ?

ಪ್ರಧಾನಿ ಮೋದಿ ಅವರು ಬುಧವಾರ ಬೆಳಗ್ಗೆ 11.30ಕ್ಕೆ ಬಟಿಂಡಾ ವಾಯುನೆಲೆಗೆ ತಲುಪಿದ್ದರು. ಪ್ರತಿಕೂಲ ಹವಾಮಾನದ ಕಾರಣ ಇಲ್ಲಿ 20 ನಿಮಿಷ ಕಾಯಲಾಗಿತ್ತು, ಆದರೂ ವಾಯುಮಾರ್ಗವಾಗಿ ಪ್ರಯಾಣಿಸಲು ಸಾಧ್ಯವಾಗದಾಗ ರಸ್ತೆ ಮೂಲಕ ಪ್ರಯಾಣಿಸುವ ನಿರ್ಧಾರಕ್ಕೆ ಬಂದಿದ್ದರು. ಬಳಿಕ ರಸ್ತೆ ಮೂಲಕ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ತೆರಳಿದರು. ರಸ್ತೆ ಪ್ರಯಾಣ ಸುಮಾರು 2 ಗಂಟೆಗಳಿಗಿಂತ ಹೆಚ್ಚು ಸಮಯವಿತ್ತು. ಆದರೆ ಪಂಜಾಬ್‌ನ ಡಿಜಿಪಿ ಭರವಸೆ ನೀಡಿದಾಗ, ಪ್ರಧಾನಿ ಬೆಂಗಾವಲು ಪಡೆ ಮುಂದೆ ಸಾಗಿತು. ಹುಸೇನಿವಾಲಾದಲ್ಲಿ ಹುತಾತ್ಮ ಸ್ಮಾರಕ ತೆರಳುವ ವೇಳೆ 30 ಕಿ.ಮೀ ಇರುವಾಗ ಅವರ ಬೆಂಗಾವಲು ಮೇಲ್ಸೇತುವೆ ತಲುಪಿತು, ಅಲ್ಲಿ ಪ್ರತಿಭಟನಾಕಾರರು ರಸ್ತೆಯನ್ನು ತಡೆದರು. ಮೋದಿ 15-20 ನಿಮಿಷಗಳ ಕಾಲ ಅಲ್ಲಿ ಸಿಲುಕಿಕೊಂಡರು. ಈ ಮೂಲಕ ಪ್ರಧಾನಿ ಭದ್ರತೆಯಲ್ಲಿ ದೊಡ್ಡ ಲೋಪವಾಗಿತ್ತು. 

Follow Us:
Download App:
  • android
  • ios