Asianet Suvarna News Asianet Suvarna News

ರಾಜ್ಯಸಭೆಯಲ್ಲಿ ದಿಲ್ಲಿ ಸುಗ್ರೀವಾಜ್ಞೆ ವಿರುದ್ಧ ಮತ: ಕೇಜ್ರಿಗೆ ಶಿವಸೇನೆ ಭರವಸೆ

ಚುನಾಯಿತ ಆಪ್‌ ಸರ್ಕಾರವನ್ನು ಬದಿಗೊತ್ತಿ ದೆಹಲಿ ಆಡಳಿತದ ಮೇಲೆ ತನ್ನ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಿರುದ್ಧ ರಾಜ್ಯಸಭೆಯಲ್ಲಿ ಮತ ಚಲಾಯಿಸುತ್ತೇವೆ ಎಂದು ಶಿವಸೇನೆಯ ನಾಯಕ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ (Uddhav Thackeray)  ಭರವಸೆ ನೀಡಿದ್ದಾರೆ.

Vote against Delhi Ordinance in Rajya Sabha Uddhav Thackeray promised during the meeting with Kejriwal akb
Author
First Published May 25, 2023, 7:26 AM IST

ಮುಂಬೈ: ಚುನಾಯಿತ ಆಪ್‌ ಸರ್ಕಾರವನ್ನು ಬದಿಗೊತ್ತಿ ದೆಹಲಿ ಆಡಳಿತದ ಮೇಲೆ ತನ್ನ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಿರುದ್ಧ ರಾಜ್ಯಸಭೆಯಲ್ಲಿ ಮತ ಚಲಾಯಿಸುತ್ತೇವೆ ಎಂದು ಶಿವಸೇನೆಯ ನಾಯಕ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ (Uddhav Thackeray)  ಭರವಸೆ ನೀಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ ಬಳಿಕ ಅವರು ಈ ನಿರ್ಧಾರ ತಿಳಿಸಿದ್ದಾರೆ. ಇತ್ತೀಚೆಗೆ ಜೆಡಿಯು ಹಾಗೂ ಟಿಎಂಸಿ ಸಹ ಸುಗ್ರೀವಾಜ್ಞೆ ವಿರುದ್ಧ ಮತದಾನ ಮಾಡಲು ಒಪ್ಪಿಗೆ ಸೂಚಿಸಿದ್ದವು. ಇನ್ನು ಆಪ್‌ಗೆ ಬೆಂಬಲ ಕೋರಲು ಎನ್‌ಸಿಪಿ (NCP) ಮುಖ್ಯಸ್ಥ ಶರದ್‌ ಪವಾರ್‌ (Sharad Pawar) ಅವರನ್ನು ಭೇಟಿ ಮಾಡಲು ಸಹ ಕೇಜ್ರಿವಾಲ್‌ ನಿರ್ಧರಿಸಿದ್ದಾರೆ.

ಠಾಕ್ರೆ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್‌ (Arvind Kejriwal), ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದನ್ನು ನೋಡಿದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಪ್ರೀಂಕೋರ್ಟ್ ಮೇಲೆ ವಿಶ್ವಾಸವಿಲ್ಲ ಎಂಬುದು ತಿಳಿಯುತ್ತದೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರಗಳನ್ನು ಬೀಳಿಸಲು ಕೇಂದ್ರ ಸರ್ಕಾರ ಹವಣಿಸುತ್ತಿದೆ ಎಂದು ಕಿಡಿಕಾರಿದರು.

ಶೀಲಾ ದೀಕ್ಷಿತ್‌ರ ಸಲಹೆ ಪಾಲಿಸಿ, ಸುಗ್ರೀವಾಜ್ಞೆ ವಿವಾದದಲ್ಲಿ ಕೇಜ್ರಿವಾಲ್‌ಗೆ ತಿಳಿ ಹೇಳಿದ ಮಾಕೆನ್‌!

 ದೆಹಲಿ ಆಡಳಿತ ವಿಚಾರದಲ್ಲಿ ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆ ವಿರೋಧಿಸಿ ಅರವಿಂದ್ ಕೇಜ್ರಿವಾಲ್ ಇತರ ಪಕ್ಷಗಳ ಬೆಂಬಲ ಕೋರಿದ್ದಾರೆ. ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಆದರೆ ಬೆಂಬಲ ವಿಚಾರದಲ್ಲಿ ಹಿರಿಯ ನಾಯಕರು ಒಕೆ ಎಂದಿದ್ದರೆ, ದೆಹಲಿ ಕಾಂಗ್ರೆಸ್ ಕಾಂಗ್ರೆಸ್ ನಿರ್ಧಾರವನ್ನೇ ವಿರೋಧಿಸಿದೆ. ಇಷ್ಟೇ ಅಲ್ಲ ಭ್ರಷ್ಟ ಕೇಜ್ರಿವಾಲ್‌ಗೆ ಬೆಂಬಲ ಯಾಕೆ? ಈ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಯಾವುದೇ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ. ಇದೀಗ ಕೇಜ್ರಿವಾಲ್‌ಗೆ ಮಾತ್ರ ಯಾಕೆ ಸಮಸ್ಯೆಯಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಜಯ್ ಮಾಕೇನ್ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಜತೆ ದಿಲ್ಲಿಯಲ್ಲಿನ ಅಧಿಕಾರ ಹಂಚಿಕೆ ಕುರಿತಂತೆ ಸಂಘರ್ಷದಲ್ಲಿ ತೊಡಗಿರುವ ಆಪ್‌ ನೇತಾರ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌  ಪ್ರತಿ ದಿನ ಒಬ್ಬೊಬ್ಬ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಬಳಿಕ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಭೇಟಿಯಾಗಿ ಇದೀಗ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಕೇಂದ್ರ ಹಾಗೂ ಮೋದಿ ವಿರುದ್ಧದ ಹೋರಾಟವಾದ ಕಾರಣ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಆದರೆ ದೆಹಲಿ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಕಾಂಗ್ರೆಸ್ ನಿರ್ಧಾರವನ್ನು ವಿರೋಧಿಸಿದ್ದಾರೆ.

ಕೇಂದ್ರ ಸುಗ್ರೀವಾಜ್ಞೆ ವಿರುದ್ದ ಕೇಜ್ರಿವಾಲ್‌ಗೆ ಬೆಂಬಲ, ಕಾಂಗ್ರೆಸ್ ಇಬ್ಬಾಗ!

ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ವಿರೋಧಿಸಬಾರದು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಇದೀಗ ದೆಹಲಿಯಲ್ಲಿ ಸಂಪೂರ್ಣ ಅಧಿಕಾರ ಚಾಚಲು ಬಯಸುತ್ತಿದೆ. ಖಲಿಸ್ತಾನಿಗಳಿಗೆ ಬೆಂಬಲ ಸೂಚಿಸುವ ಕೇಜ್ರಿವಾಲ್‌ಗೆ ಬೆಂಬಲ ನೀಡುವುದೇ ತಪ್ಪು. ಅಷ್ಟಕ್ಕೆ ಕೇಂದ್ರ ತಂದಿರುವ ಸುಗ್ರೀವಾಜ್ಞೆ ಸರಿ ಇದೆ. ಈ ಹಿಂದಿನ ಯಾವುದೇ ಮುಖ್ಯಮಂತ್ರಿಗಳಿಗೆ ಇಲ್ಲದ ಸಮಸ್ಯೆ ಇದೀಗ ಕೇಜ್ರಿವಾಲ್‌ಗೆ ಯಾಕೆ ಬರುತ್ತಿದೆ? ಇದು ಬೇಕಂತಲೇ ಸೃಷ್ಟಿ ಮಾಡಲಾಗುತ್ತಿದೆ. ತನ್ನ ಭ್ರಷ್ಟಾಚಾರದ ಕಂತೆ ಕತೆಗಳನ್ನು ಮುಚ್ಚಿಡಲು ಆಡುತ್ತಿರುವ ನಾಟಕ ಎಂದು ಅಜಯ್ ಮಾಕೇನ್ ಹೇಳಿದ್ದಾರೆ.

Follow Us:
Download App:
  • android
  • ios