Airtel ಬೆನ್ನಲ್ಲೇ Vodafone ಕರೆ, ಇಂಟರ್ನೆಟ್ ದರ ಹೆಚ್ಚಳ!
* ಶೀಘ್ರ ಮೊಬೈಲ್ ಕರೆ, ಇಂಟರ್ನೆಟ್ ದುಬಾರಿ?
* Airtel ಬೆನ್ನಲ್ಲೇ Vodafone ಕರೆ, ಇಂಟರ್ನೆಟ್ ದರ ಹೆಚ್ಚಳ
* ನ.25ರಿಂದ ಈ ಹೊಸ ದರವು ಪ್ರೀಪೇಯ್ಡ್ ಗ್ರಾಹಕರಿಗೆ ಅನ್ವಯಾಗಲಿದೆ
ನವದೆಹಲಿ(ನ.24): ದೇಶದ ಅತಿದೊಡ್ಡ ಮೊಬೈಲ್ ಸೇವಾ ಕಂಪನಿಗಳ ಪೈಕಿ ಒಂದಾದ ವೊಡಾಫೋನ್ ಐಡಿಯಾ (Vodafone Idea) ಕರೆ ಮತ್ತು ಇಂಟರ್ನೆಟ್ (Call And Internet) ಶುಲ್ಕದಲ್ಲಿ ಶೇ.20-25ರಷ್ಟುಹೆಚ್ಚಳ ಮಾಡಿ ನಿರ್ಧಾರ ಕೈಗೊಂಡಿದೆ. ನ.25ರಿಂದ ಈ ಹೊಸ ದರವು ಪ್ರೀಪೇಯ್ಡ್ ಗ್ರಾಹಕರಿಗೆ (Prepaid Customers) ಅನ್ವಯವಾಗಲಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಸೋಮವಾರ ಏರ್‌ಟೆಲ್ ಕಂಪನಿ (Airtel Company) ಕೂಡಾ ಇದೇ ಮಾದರಿಯಲ್ಲಿ ದರ ಏರಿಕೆ ಮಾಡಿತ್ತು. ವೊಡಾಪೋನ್ (Vodafone) ಕನಿಷ್ಠ ರೀಚಾರ್ಜ್ (Minimum Recharge) ದರವನ್ನು ಶೇ.25ರಷ್ಟುಏರಿಕೆ ಮಾಡಿದೆ. ಹಾಗಾಗಿ ಇನ್ಮುಂದೆ 28 ದಿನಗಳ ಸೌಲಭ್ಯಕ್ಕಾಗಿ 79 ರು. ಬದಲು 99 ರು. ರೀಚಾರ್ಜ್ ಮಾಡಬೇಕಾಗುತ್ತದೆ.
28 ದಿನಗಳ 1 ಜಿ.ಬಿ ಡೇಟಾ ಮತ್ತು ಅನಿಯಮಿತ ಕರೆ ದರವನ್ನು (Unlimited Call Rate) 219 ರು.ನಿಂದ 269 ರು.ಗೆ ಏರಿಕೆ ಮಾಡಲಾಗಿದೆ. 84 ದಿನಗಳ 1.5 ಜಿ.ಬಿ ಡೇಟಾ ಮತ್ತು ಅನಿಯಮಿತ ಕರೆ ದರವನ್ನು 599 ರು.ನಿಂದ 719 ರು.ಗೆ ಏರಿಕೆ ಮಾಡಲಾಗಿದೆ. ಒಂದು ವರ್ಷದ 1.5 ಜಿ.ಬಿ ಡೇಟಾ ಮತ್ತು ಅನಿಯಮಿತ ಕರೆ ದರವನ್ನು 2,399 ರು.ನಿಂದ 2,899 ರು.ಗೆ ಹೆಚ್ಚಿಸಲಾಗಿದೆ.
ಪ್ಲಾನ್ ಏರಿಕೆ
ಹಾಲಿ | ಪರಿಷ್ಕೃತ |
79 ರೂ | 99 ರೂ |
219 ರೂ | 269 ರೂ |
599 ರೂ | 719 ರೂ |
2,399 ರೂ | 2,899 ರೂ |
ಸ್ಥಿರ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ನೆಟ್‌ವರ್ಕ್ ಟೆಸ್ಟಿಂಗ್ ಅಪ್ಲಿಕೇಶನ್‌ಗಳ ಕಂಪನಿ ಓಕ್ಲಾ ಪರಿಶೀಲಿಸಿರುವಂತೆ, ಹೊಸ ಸುಂಕದ ಯೋಜನೆಗಳ ಮುಖಾಂತರ 'ಭಾರತದ ವೇಗದ ಮೊಬೈಲ್ ನೆಟ್‌ವರ್ಕ್ ಅನ್ನು ಮತ್ತಷ್ಟು ಸುಧಾರಿಸಲು ಸಹಾಯವಾಗುತ್ತದೆ' ಎಂದು ವಿಐ ಸಂಸ್ಥೆ ಹೇಳಿದೆ
ಕಂಪನಿಯು 28 ದಿನಗಳ ಅವಧಿಗೆ ರೀಚಾರ್ಜ್‌ನ ಕನಿಷ್ಠ ಮೌಲ್ಯವನ್ನು ಶೇಕಡಾ 25.31 ಹೆಚ್ಚಳದ ಬಳಿಕ 79 ರಿಂದ 99ರೂ ಕ್ಕೆ ಹೆಚ್ಚಳವಾಗಲಿದೆ. ಅಂತೆಯೇ 28 ದಿನಗಳ ಮಾನ್ಯತೆಯ ದಿನಕ್ಕೆ 1 GB ಡೇಟಾ ಮಿತಿಯ ಪ್ರಸ್ತುತ 219 ದರಗಳ ಪ್ಲಾನ್ ನೂತನ ದರ ಜಾರಿ ಬಳಿಕ 269 ರೂಗೆ ಏರಿಕೆಯಾಗಲಿದೆ. 84 ದಿನಗಳ ವ್ಯಾಲಿಡಿಟಿ ಪ್ಲಾನ್ ರೂ 599 ಬದಲಿಗೆ ರೂ 719 ಕ್ಕೆ ಏರಿಕೆಯಾಗಲಿದೆ. ದಿನಕ್ಕೆ 1.5 GB ಡೇಟಾ ಮಿತಿಯೊಂದಿಗೆ 365 ದಿನಗಳ ಯೋಜನೆಯು 20.8 ಪ್ರತಿಶತದಷ್ಟು ಹೆಚ್ಚಾಗಿ 2,899 ರೂಗೆ ಏರಿಕೆಯಾಗುತ್ತದೆ. ಈ ಪ್ಲಾನ್ ಹಾಲಿ ದರ ರೂ 2,399ರಷ್ಟಿದೆ.
ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ ಸೋಮವಾರ ಪ್ರಿಪೇಯ್ಡ್ ಪ್ಲ್ಯಾನ್ ದರಗಳನ್ನು ಏರಿಕೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ವೊಡಾಫೋನ್ ಕೂಡ ಇದೇ ನಿರ್ಧಾರ ಘೋಷಿಸಿದೆ. ಏರ್‌ಟೆಲ್ ಪ್ರಿಪೇಯ್ಡ್ ಪ್ಲ್ಯಾನ್ ದರಗಳನ್ನು ಶೇ. 25ರಷ್ಟು ಏರಿಕೆ ಮಾಡಿದ್ದು ನೂತನ ದರಗಳು ನವೆಂಬರ್ 26ರಿಂದ ಜಾರಿಗೆ ಬರಲಿವೆ.ಏರ್‌ಟೆಲ್ ಪ್ರಿಪೇಯ್ಡ್ ಚಂದಾ ದರಗಳನ್ನು ಏರಿಕೆ ಮಾಡಿದ ಬೆನ್ನಲ್ಲೇ ಕಂಪನಿಯ ಷೇರುಗಳು ಭಾರಿ ಏರಿಕೆ ಕಂಡಿದ್ದರೆ, ವೊಡಾಫೋನ್ ಐಡಿಯಾ ಷೇರುಗಳು ಮಂಗಳವಾರ ಶೇ. 0.28ರಷ್ಟು ಕಡಿಮೆ ಬೆಲೆಗೆ ಅಂದರೆ 10.63 ರೂ. ದರದಲ್ಲಿ ವಹಿವಾಟು ನಡೆಸುತ್ತಿದ್ದವು.