Asianet Suvarna News Asianet Suvarna News

Sabarimala Rush: 'ತಂದೆಯನ್ನು ಹುಡುಕಿಕೊಡಿ..' ಪೊಲೀಸರಿಗೆ ಕೈಮುಗಿದು ಬೇಡಿಕೊಂಡ ಪುಟ್ಟಮಗುವಿನ ವಿಡಿಯೋ ವೈರಲ್‌!


ಕಳೆದ ಐದು ದಿನಗಳಿಂದ ಶಬರಿಮಲೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ. ಈ ನಡುವೆ ಶಬರಿಮಲೆಯಲ್ಲಿ ದಾರಿ ತಪ್ಪಿದ ಮಗುವೊಂದು ತನ್ನ ತಂದೆಯನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ಬೇಡಿಕೊಳ್ಳುತ್ತಿರುವ ಹೃದಯವಿದ್ರಾವಕ ವಿಡಿಯೋ ವೈರಲ್‌ ಆಗಿದೆ.

Viral Video Heart wrenching video of crying child seeking help to find his father In Sabarimala emerges san
Author
First Published Dec 12, 2023, 11:08 PM IST

ಪತ್ತನಂತಿಟ್ಟ (ಡಿ.12): ಕಳೆದ ಐದು ದಿನಗಳಿಂದ ಶಬರಿಮಲೆಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಆದರೆ, ಜನಸಂದಣಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೇರಳದ ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿದೆ. .ವಿಪರೀತ ಜನದಟ್ಟಣೆಯಿಂದಾಗಿ ಅನೇಕ ಯಾತ್ರಾರ್ಥಿಗಳು ಶಬರಿಮಲೆ ದೇವಸ್ಥಾನ ಮತ್ತು ಅಯ್ಯಪ್ಪನ ದರ್ಶನವನ್ನು ಪಡೆಯದೆ ಪಂದಳಂನಿಂದ ಹಿಂತಿರುಗುತ್ತಿದ್ದಾರೆ. ಈ ನಡುವೆ ಶಬರಿಮಲೆಯಲ್ಲಿ ದಾರಿ ತಪ್ಪಿದ ಮಗುವೊಂದು ಪೊಲೀಸರಲ್ಲಿ ಬೇಡಿಕೊಳ್ಳುತ್ತಿರುವ ಹೃದಯವಿದ್ರಾವಕ ವಿಡಿಯೋ ಸಾಕಷ್ಟು ವೈರಲ್‌ ಆಗಿದೆ. ನಿಲಕ್ಕಲ್‌ನಲ್ಲಿ ಜನಸಂದಣಿಯಲ್ಲಿ ಕಳೆದುಹೋದ ತನ್ನ ತಂದೆಯನ್ನು ಮಗು ಹುಡುಕುತ್ತಿರುವುದನ್ನು ವಿಡಿಯೋ ತೋರಿಸಿದೆ. ಟೆಂಪೋದಲ್ಲಿರುವ ಮಗು, ಅಪ್ಪಾ.. ಅಪ್ಪಾ ಎಂದು ಕೂಗುತ್ತಿದ್ದು ತನ್ನ ಬಳಿ ಬಂದು ಪೊಲೀಸರ ಎದುರು ಕೈಮುಗಿದು ತನ್ನ ಅಪ್ಪನನ್ನು ಹುಡುಕಿಕೊಡಿ ಎಂದು ಗೋಳಾಡುತ್ತಿದ್ದ ವಿಡಿಯೋ ವೈರಲ್‌ ಆಗಿದೆ. ಅದಾದ ಕೆಲವೇ ಹೊತ್ತಿನಲ್ಲಿ ಮಗುವಿನ ತಂದೆ ಕೂಡ ಸಿಕ್ಕಿದ್ದು, ತಂದೆಯನ್ನು ನೋಡಿದ ಬಳಿಕ ಮಗು ಕೈಬೀಸಿದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಈ ನಡುವೆ  ಶಬರಿಮಲೆ ಋತುವಿನಲ್ಲಿ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಹೆಚ್ಚಿನ ವ್ಯವಸ್ಥೆಗಳನ್ನು ಮಾಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೂಚನೆ ನೀಡಿದ್ದಾರೆ. ಯಾತ್ರಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ಪರಿಶೀಲನಾ ಸಭೆಯಲ್ಲಿ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್, ಅರಣ್ಯ ಸಚಿವ ಎ.ಕೆ.ಸಸೀಂದ್ರನ್, ಮುಖ್ಯ ಕಾರ್ಯದರ್ಶಿ ಡಾ.ವಿ.ವೇಣು, ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್, ರಾಜ್ಯ ಪೊಲೀಸ್ ವರಿಷ್ಠ ಶೇಖ್ ದರ್ವೇಶ್ ಸಾಹಿಬ್, ಜಿಲ್ಲಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.
ಶಬರಿಮಲೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಗಳು ತಿಳಿಸಿವೆ ಮತ್ತು ಪಂದಳಂನ ವಲಿಯ ಕೊಯಿಕ್ಕಲ್ ಶ್ರೀ ಧರ್ಮ ಶಾಸ್ತಾ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಅನೇಕ ಜನರು ಅಲ್ಲಿಂದ್ದಲೇ ಮನೆಗೆ ವಾಪಾಸ್‌ ಹೋಗಿದ್ದಾರೆ.

30 ಜನ ಅಯ್ಯಪ್ಪ ಪಾದಯಾತ್ರಿಗಳಿಗೆ ಕಾರು ಡಿಕ್ಕಿ, 1 ಸಾವು!

ಬೆಟ್ಟ ಹತ್ತಲು ಆಗದೆ ಗಂಟೆಗಟ್ಟಲೆ ಕಾದು ಭಕ್ತರು ಹಿಂತಿರುಗುತ್ತಿದ್ದಾರೆ. ಈಗಲೂ ಅಪಾರ ಭಕ್ತರ ಹರಿವು ಇದೆ, ವಾಪಾಸ್‌ ಬರುವ ಯಾವುದೇ ಮಾರ್ಗ ಕಾಣುತ್ತಿಲ್ಲ. ಕೇರಳ ಬಸ್‌ಗಳು ಗಂಟೆಗಟ್ಟಲೆ ಸ್ಥಗಿತಗೊಂಡಿದ್ದರಿಂದ ಅನೇಕರು ಹತ್ತು ಗಂಟೆಗಳವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಪಾದಿಂದ ಪ್ರತಿ ಹತ್ತು ನಿಮಿಷಕ್ಕೆ ಕೇರಳ ಸರ್ಕಾರಿ ಬಸ್‌ಗಳು ಸಂಚರಿಸುತ್ತವೆ. ಅರಣ್ಯ ಮಾರ್ಗದಲ್ಲಿ ಹಲವು ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಂಡಿವೆ. ಪ್ಲಾಪಲ್ಲಿ ಇಳವುಂಕಲ್ ಪಥ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಸಿಲುಕಿರುವ ಯಾತ್ರಾರ್ಥಿಗಳಿಗೆ ನೀರು, ಆಹಾರ ಸಿಗುತ್ತಿಲ್ಲ. ದಟ್ಟಣೆ ಮತ್ತು ನಿರ್ಬಂಧಗಳು ಮುಂದುವರಿದಿರುವಾಗ 89,981 ಜನರು ದರ್ಶನಕ್ಕಾಗಿ ಮಂಗಳವಾರ ಬುಕ್‌ ಮಾಡಿದ್ದರು.

ಶಬರಿಮಲೆಗೆ ಮೊದಲ ಬಾರಿ ಭೇಟಿ ನೀಡಿ 18 ಪವಿತ್ರ ಮೆಟ್ಟಿಲು ಏರಿದ ಶತಾಯುಷಿ ಪಾರುಕುಟ್ಟಿಯಮ್ಮ

Follow Us:
Download App:
  • android
  • ios