ದುರ್ಗಾದೇವಿ ಶೋಭಾಯಾತ್ರೆ ಕಲ್ಲು ತೂರಾಟ, ಗುಂಡಿನ ದಾಳಿ: ಓರ್ವ ಸಾವು
ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ದುರ್ಗಾಪೂಜಾ ಮೆರವಣಿಗೆ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಹಿಂಸೆಯು ಒಬ್ಬನನ್ನು ಬಲಿಪಡೆದಿದೆ. ಬಳಿಕ ಉದ್ರಿಕ್ತರು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದಾರೆ.
ಬಹ್ರೈಚ್ (ಉ.ಪ್ರ.): ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ದುರ್ಗಾಪೂಜಾ ಮೆರವಣಿಗೆ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಹಿಂಸೆಯು ಒಬ್ಬನನ್ನು ಬಲಿಪಡೆದಿದೆ. ಬಳಿಕ ಉದ್ರಿಕ್ತರು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದಾರೆ. ಭಾನುವಾರ ದುರ್ಗಾ ವಿಗ್ರಹ ಮೆರವಣಿಗೆಯು ಮುಸ್ಲಿಂ ಪ್ರಾಬಲ್ಯದ ಪ್ರದೇಶ ಮಹಾರಾಜ್ ಗಂಜ್‌ನಲ್ಲಿ ಸಾಗುತ್ತಿದ್ದಾಗ ಹಿಂಸಾಚಾರ ಭುಗಿಲೆದ್ದಿತು. ವರದಿಯ ಪ್ರಕಾರ, ಎರಡು ಗುಂಪುಗಳ ನಡುವೆ ವಾಗ್ವಾದವು ಉಲ್ಬಣಗೊಂಡಿತು. ನಂತರ ಕಲ್ಲು ತೂರಾಟ ಮತ್ತು ಗುಂಡುಗಳನ್ನು ಹಾರಿಸಲಾಯಿತು. ಈ ವೇಳೆ 22 ವರ್ಷದ ರಾಮ್ ಗೋಪಾಲ್ ಮಿಶ್ರಾ ಎಂಬಾತ ಬಲಿಯಾಗಿದ್ದಾನೆ.
ಇದಕ್ಕೆ ಪ್ರತೀಕಾರವಾಗಿ ಸೋಮವಾರ ಪ್ರತಿಭಟನಾಕಾರರು ಸುತ್ತಮುತ್ತಲಿನ ಹಲವಾರು ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಒಂದು ಆಸ್ಪತ್ರೆಗೂ ಬೆಂಕಿ ಹಚ್ಚಲಾಗಿದೆ. ಉದ್ರಿಕ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಅಶ್ರುವಾಯು ಸಿಡಿಸಿದ್ದಾರೆ. ಘಟನೆ ಸಂಬಂಧ 30 ಜನರನ್ನು ಬಂಧಿಸಲಾಗಿದೆ ಮತ್ತು ಎಫ್‌ಐಆರ್ ದಾಖಲಿಸಲಾಗಿದೆ. ಪ್ರಮುಖ ಆರೋಪಿಯ ಪತ್ತೆಗೆ ಶೋಧ ಕಾರ್ಯ ನಡೆದಿದೆ.
ಇಂಟರ್ನೆಟ್ ಸ್ಥಗಿತ:
ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ತಪ್ಪು ಮಾಹಿತಿಯನ್ನು ನಿಯಂತ್ರಿಸಲು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಹಿಂದೂ ಹಬ್ಬಗಳಲ್ಲಿ ಕಲ್ಲು ತೂರಾಟಕ್ಕೆ ಮಹಾನ್ ನಾಯಕ ರಾಹುಲ್ ಗಾಂಧಿ ಯಾಕೆ ಮೌನ?: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಕಿಡಿ