'ಜುಲನಾ ದಂಗಲ್' ಗೆದ್ದ ವಿನೇಶ್ ಫೋಗಟ್; WWE ರೆಸಲರ್ ಕವಿತಾ ರಾಣಿಗೆ ಸಿಕ್ಕಿದ್ದೆಷ್ಟು ವೋಟ್?
ಹರಿಯಾಣದ ಜುಲಾನಾ ಕ್ಷೇತ್ರದಲ್ಲಿ ನಡೆದ ಹೈವೋಲ್ಟೇಜ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿನೇಶ್ ಫೋಗಟ್ ಗೆಲುವು ಸಾಧಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮತ್ತು WWE ರೆಸಲರ್ ಕವಿತಾ ರಾಣಿ ಸೋಲೊಪ್ಪಿಕೊಂಡಿದ್ದಾರೆ.
ಚಂಡೀಗಢ: ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನವನ್ನು ಜುಲನಾ ಕ್ಷೇತ್ರ ಸೆಳೆದಿತ್ತು. ಕಾರಣ ಮಾಜಿ ಅಥ್ಲಿಟ್ ವಿನೇಶ್ ಫೋಗಟ್ ಸ್ಪರ್ಧೆ. ಒಲಂಪಿಕ್ ಕ್ರೀಡಾಕೂಟದ ಬಳಿಕ ಆಟಕ್ಕೆ ರಾಜೀನಾಮೆ ಘೋಷಿಸಿ ಕಾಂಗ್ರೆಸ್ ಸೇರ್ಪಡೆಯಾಗಿ ಚುನಾವಣೆ ಎದುರಿಸಿದ್ದರು. ಮೊದಲ ಚುನಾವಣೆಯಲ್ಲಿ ವಿನೇಶ್ ಫೋಗಟ್‌ಗೆ ಗೆಲುವು ಸಿಕ್ಕಿದ್ದು, ಇದು ದೇಶದ ಮಹಿಳೆಯರ ಗೆಲುವು ಎಂದು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದಿಂದ WWE ರೆಸಲರ್ ಕವಿತಾ ರಾಣಿ ಸ್ಪರ್ಧಿಸಿದ್ದು, ಕೇವಲ 1280 ಮತಗಳನ್ನು ಪಡೆಯುವಲ್ಲಿ ಶಕ್ತರಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ದ ಕವಿತಾ ರಾಣ ಠೇವಣಿ ಕಳೆದುಕೊಂಡಿದ್ದಾರೆ.
ವಿನೇಶ್ ಫೋಗಟ್ ಸಮೀಪದ ಸ್ಪರ್ಧಿಯಾಗಿದ್ದ ಬಿಜೆಪಿಯ ಯೋಗೇಶ್ ಕುಮಾರ್ ವಿರುದ್ಧ 6,015 ಮತಗಳ ಅಂತರದಿಂದ ಗೆದ್ದು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ವಿನೇಶ್ ಫೋಗಟ್ 65,080 ಮತ್ತು ಯೋಗೇಂದ್ರ ಕುಮಾರ್ 59,065 ಮತಗಳನ್ನು ಪಡೆದುಕೊಂಡಿದ್ದಾರೆ. ಜೂಲಾನಾ ವಿಧಾನಸಭಾ ಚುನಾವಣೆಯಲ್ಲಿ 1,38,871 ಮತಗಳು ಚಲಾವಣೆಯಾಗಿತ್ತು.
ಜಮ್ಮು ಕಾಶ್ಮೀರದಲ್ಲಿ ಸಾಮರ್ಥ್ಯ ಹೆಚ್ಚಿಸಿಕೊಂಡ ಬಿಜೆಪಿ; ಸರ್ಕಾರ ರಚನೆಯತ್ತ ಕಾಂಗ್ರೆಸ್ ಮೈತ್ರಿಕೂಟ
ಸಂಘರ್ಷದ ಹಾದಿಯಲ್ಲಿರೋ ಪ್ರತಿ ಮಹಿಳೆಯ ಗೆಲುವು ಇದಾಗಿದೆ. ಈ ದೇಶ ನನಗೆ ಪ್ರೀತಿಯನ್ನು ನೀಡಿದೆ. ಈ ಪ್ರೀತಿಯನ್ನು ನಾನು ಮುಂದೆಯೂ ಕಾಪಾಡಿಕೊಂಡು ಹೋಗುತ್ತೇನೆ. ಸ್ವಲ್ಪ ತಾಳ್ಮೆಯಿಂದಿರಿ, ಇನ್ನೂ ಹಲವು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಬೇಕಿದೆ. ಕಾಂಗ್ರೆಸ್ ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿನೇಶ್ ಫೋಗಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಕೇವಲ ಮುನ್ನಡೆ/ಹಿನ್ನಡೆಗಳ ಲೆಕ್ಕಾಚಾರವನ್ನು ನೋಡುತ್ತಿದ್ದೇವೆ. ಚುನಾವಣಾ ಆಯೋಗ ಗೆಲುವಿನ ಪ್ರಮಾಣಪತ್ರ ನೀಡಿದ ನಂತರವೇ ಸ್ಪಷ್ಟವಾದ ಚಿತ್ರಣ ಸಿಗಲಿದ್ದು, ಕಾಂಗ್ರೆಸ್ ಸರ್ಕಾರ ರಚನ ಮಾಡಲಿದೆ ಎಂದು ವಿನೇಶ್ ಫೋಗಟ್ ಹೇಳಿಕೆ ನೀಡಿದ್ದಾರೆ.
ಮತ ಎಣಿಕೆ ಆರಂಭಗೊಂಡ ಆರಂಭಿಕ ಹಂತಗಳಲ್ಲಿ ವಿನೇಶ್ ಫೋಗಟ್ ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಮಧ್ಯದಲ್ಲಿ ಹಿನ್ನಡೆ ಅನುಭವಿಸಿದರೂ ಕೊನೆಗೆ ಗೆಲುವಿನ ಮಾಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಾಜಕೀಯ ಅಖಾಡಕ್ಕೆ ಧುಮುಕಿದ ಮೊದಲ ಚುನಾವಣೆಯಲ್ಲಿಯೇ ವಿನೇಶ್ ಫೋಗಟ್ ಗೆದ್ದಿರೋದು ಅವರ ಅಭಿಮಾನಿಗಳಿಗೆ ಸಂತಸನ್ನುಂಟು ಮಾಡಿದೆ.
ಉದಯ್‌ಪುರ ಪ್ಯಾಲೇಸ್‌ಗೆ ರಾಷ್ಟ್ರಪತಿ ಮುರ್ಮು ಭೇಟಿಗೆ ರಾಜಮನೆತನದ ವಿರೋಧ