ನವದೆಹಲಿ(ಜು.22): ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ಬಿರುಗಾಳಿ ಧೂಳೆಬ್ಬಿಸುತ್ತಿರುವ ವೇಳೆಯೇ, ನಿರ್ಮಾಪಕ ವಿಧು ಚೋಪ್ರಾ ಅವರು ನೀಡಿದ ಹಿಂಸೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದೆ ಎಂದು ಖ್ಯಾತ ಲೇಖಕ ಚೇತನ್‌ ಭಗತ್‌ ಹೇಳಿಕೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ, ಪ್ರತಿಭಟನೆ ಎರಡಕ್ಕೂ ಚೇತನ್ ಭಗತ್ ವಿರೋಧ!

ಅಲ್ಲದೇ ತಾನು ಬರೆದ ಪುಸ್ತಕವೊಂದರ ಕತೆಯನ್ನು ಆಧರಿಸಿ ನಿರ್ಮಿಸಲಾದ ‘ತ್ರಿ ಈಡಿಯಟ್ಸ್‌’ ಚಿತ್ರದ ಯಶಸ್ಸನ್ನು ವಿಧು ಚೋಪ್ರಾ ತನ್ನದಾಗಿಸಿಕೊಂಡು, ನಾಚಿಗೆ ಇಲ್ಲದೇ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ದಿವಂಗತ ಸುಶಾಂತ್‌ ಸಿಂಗ್‌ ರಜಪೂತ್‌ ನಟನೆಯ ‘ದಿಲ್‌ ಬೆಚಾರ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಚಿತ್ರದ ಬಗ್ಗೆ ಏನೋನೋ ಅತಿಯಾಗಿ, ವಿಚೇಚನೆ ರಹಿತವಾಗಿ ಬರೆಯಬೇಡಿ. ಈಗಾಗಲೇ ಹಲವು ಜೀವಗಳನ್ನು ನೀವು ತಿಂದಾಗಿದೆ’ ಎಂದು ಮಾರ್ಮಿಕವಾಗಿ ಟ್ವೀಟ್‌ ಮಾಡಿದ್ದರು.