ಪುಟ್ಟ ಅಳಿಲು ಮರಿಯೊಂದು ನೀರಿಗಾಗಿ ಬೇಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ನೆಟ್ಟಿಗರು ವಿಡಿಯೋ ನೋಡಿ ಅಯ್ಯೋ ಎಂದಿದ್ದಾರೆ. ಪುಟ್ಟ ಅಳಿಲು ಮರಿ ಕ್ಟಪಟ್ಟು ಎದ್ದು ಹತ್ತಿರವಿದ್ದ ವ್ಯಕ್ತಿಯೊಬ್ಬನನ್ನು ಹಿಂಬಾಲಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ವ್ಯಕ್ತಿ ಹೋದಲ್ಲೆಲ್ಲಾ ಅವರ ಸುತ್ತ ಮುತ್ತಲೇ ಓಡಾಡಿರುವುದು ಬಾಯಾರಿ ನೀರು ಕೇಳಿದಂತೆ ಕಾಣಿಸಿದೆ. ಸ್‌ಬುಕ್, ಟ್ವಿಟರ್ ಸೇರಿ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಣುಕು ವೈರಲ್ ಆಗಿದ್ದು, ಜನ ಭಾವುಕರಾಗಿದ್ದಾರೆ.

15 ದಿನಗಳಲ್ಲಿ 11 ಕಾಡುಪ್ರಾಣಿಗಳ ಸಾವು: ಆತಂಕ

ಅಳಿಲು ಮರಿಯನ್ನು ಫೋಕಸ್ ಮಾಡುವಲ್ಲಿಂದ ವಿಡಿಯೋ ಆರಂಭವಾಗುತ್ತದೆ. ಯುವತಿ ಮತ್ತೊಬ್ಬ ವ್ಯಕ್ತಿ ಅಳಿಲನ್ನು ನೋಡುತ್ತಿರುತ್ತಾರೆ. ವ್ಯಕ್ತಿ ಕೈಯಲ್ಲಿ ನೀರಿನ ಬಾಟಲಿ ನೋಡಿದ ತಕ್ಷಣ ಹಿಂಗಾಲುಗಳನ್ನು ಎತ್ತಿ ನೀರಿಗಾಗಿ ತಲೆ ಎತ್ತಿ ನೋಡುತ್ತದೆ.

ಆನೆ ಬಾಯಿಯಿಂದ ಬರುತ್ತಿದೆ ದಟ್ಟವಾದ ಹೊಗೆ : ವಿಡಿಯೋ ಭಾರೀ ವೈರಲ್..!

ವ್ಯಕ್ತಿ ಬಗ್ಗೆ ನೀರನ್ನು ನೀಡುವ ತನಕವೂ ಆತನ ಸುತ್ತ ಮುತ್ತಲೇ ಅಡ್ಡಾಡುತ್ತದೆ. ಬಾಟಲಿ ಸಿಕ್ಕ ಕೂಡಲೇ ತನ್ನ ಚಿಕ್ಕ ಬಾಯಿ ತೆರೆದು ಬೇಗ ಬೇಗ ನೀರು ಕುಡಿಯಲಾರಂಭಿಸುತ್ತದೆ. ಸ್ವಲ್ಪ ಹೊತ್ತಲೇ ನೀರು ಖಾಲಿ ಮಾಡುತ್ತದೆ.

ಕರೆಂಟ್ ಹೊಡೆದ ಕೋತಿಗೆ ಅಮ್ಮನಾದ್ರು ಎಎಸ್‌ಐ ಯಶೋದಾ

ಅರಣ್ಯಾಧಿಕಾರಿ ಸುಶಾಂತ್ ನಂದ ಅವರೂ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ನೀರಿಗಾಗಿ ಬೇಡುತ್ತಿರುವ ಅಳಿದು ಎಂದಿದ್ದಾರೆ. 4.2 ಲಕ್ಷ ಜನ ವಿಡಿಯೋ ವೀಕ್ಷಿಸಿದ್ದು, ಸಿನಿಮಾ ನಿರ್ಮಾಪಕ ನಿಲಾ ಮದ್‌ಹಬ್ ಪಂಡ ಅವರು ಬ್ರೇಕ್ಸ್ ಮೈ ಹಾರ್ಟ್ ಎಂದು ಬರೆದಿದ್ದಾರೆ.