* ಫೋನ್‌ ನೋಡ್ತಾ ಮೆಟ್ರೋ ಹಳೆ ಮೇಲೆ ಬಿದ್ದ* ವೈರಲ್ ಆಯ್ತು ದೆಹಲಿ ಮೆಟ್ರೋ ನಿಲ್ದಾಣದಲ್ಲಿ ನಡೆದ ಘಟನೆ* ಸಿಬ್ಬಂದಿ ಇರದಿದ್ದರೆ ವ್ಯಕ್ತಿ ಖಲ್ಲಾಸ್

ನವದೆಹಲಿ(ಫೆ.06): ಇಂದಿನ ದಿನದಲ್ಲಿ ಮೊಬೈಲ್ ಫೋನ್ ಅತ್ಯಂತ ಅಗತ್ಯವಾಗಿದೆ. ಅದರಲ್ಲೂ ಇಂದಿನ ಯುವಕರು ಫೋನ್ ಇಲ್ಲದೇ ಒಂದು ಹೆಜ್ಜೆ ಇಡಲು ಸಿದ್ಧರಿಲ್ಲ. ಮೊಬೈಲ್ ಕೈಯ್ಯಲ್ಲಿದ್ದರೆ ಸಾಕು ತಮ್ಮದೇ ಲೋಕದಲ್ಲಿ ಕಳೆದು ಹೋಗುತ್ತಾರೆ. ಸದ್ಯ ದೆಹಲಿ ಮೆಟ್ರೋ ನಿಲ್ದಾಣದಲ್ಲೂ ಇಂತಹುದೇ ಘಟನೆಯೊಂದು ಬೆಳಕಿಗೆ ಬಂದಿದೆ. ತನ್ನ ಫೋನ್ ಅನ್ನು ನೋಡುವುದರಲ್ಲಿ ನಿರತನಾಗಿದ್ದ ವ್ಯಕ್ತಿಯೊಬ್ಬ ಮೆಟ್ರೋ ಹಳಿ ಮೇಲೆ ಬಿದ್ದಿದ್ದಾನೆ. ಸದ್ಯ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವ್ಯಕ್ತಿ ತನ್ನ ಫೋನ್‌ ನೋಡುತ್ತಾ ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಮುಗ್ಗರಿಸಿ ಹಳಿಗಳ ಮೇಲೆ ಬಿದ್ದಿದ್ದಾನೆ. 

ಇನ್ನು ಹಳಿ ಮೇಲೆ ಬಿದ್ದ ವ್ಯಕ್ತಿ ಎದ್ದೇಳಲು ಪ್ರಯತ್ನಿಸುತ್ತಿರುವಾಗ ಕೆಲವು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್) ಸಿಬ್ಬಂದಿ ಆತನ ಸಹಾಯಕ್ಕೆ ಓಡುತ್ತಿರುವುದನ್ನು ಕಾಣಬಹುದು. ಸಿಬ್ಬಂದಿ ಕೂಡಲೇ ವ್ಯಕ್ತಿಯತ್ತ ಧಾವಿಸಿ ಮೆಟ್ರೋ ರೈಲು ಬರುವ ಮುನ್ನವೇ ವ್ಯಕ್ತಿಯನ್ನು ಹಳಿಯಿಂದ ಎತ್ತಿ ಪ್ಲಾಟ್‌ಫಾರ್ಮ್‌ ಮೇಲೆ ಹಾಕಿದ್ದಾರೆ. ರಾಷ್ಟ್ರ ರಾಜಧಾನಿಯ ಈಶಾನ್ಯ ಭಾಗದಲ್ಲಿರುವ ಶಹದಾರಾ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

Scroll to load tweet…

ಸಿಐಎಸ್‌ಎಫ್ ತನ್ನ ಹೇಳಿಕೆಯಲ್ಲಿ, “ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುವಾಗ ಮೊಬೈಲ್ ಫೋನ್‌ನಲ್ಲಿ ನಿರತರಾಗಿದ್ದ ವ್ಯಕ್ತಿ ಪ್ಲಾಟ್‌ಫಾರ್ಮ್ ನಂ. 1 ರಿಂದ ಮೆಟ್ರೋ ಟ್ರ್ಯಾಕ್ ಮೇಲೆ ಜಾರಿ ಬಿದ್ದಿದ್ದಾರೆ. ಸಿಐಎಸ್‌ಎಫ್ ಕ್ಯೂಆರ್‌ಟಿ ತಂಡದ ಕಾನ್‌ಸ್ಟೆಬಲ್ ರೋಥಾಶ್ ಚಂದ್ರ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಕೂಡಲೇ ಹಳಿಗಿಳಿದು ವ್ಯಕ್ತಿ ಮೇಲಿಟ್ಟಿದ್ದಾರೆ. ಮೆಟ್ರೋ ರೈಲು ಬರುವ ಮುನ್ನವೇ ವ್ಯಕ್ತಿಯನ್ನು ಟ್ರ್ಯಾಕ್‌ನಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ" ಎಂದಿದೆ.

ಇನ್ನು ಹಳಿ ಮೇಲೆ ಬಿದ್ದ ವ್ಯಕ್ತಿಯನ್ನು 8 ವರ್ಷದ ಶೈಲೇಂದ್ರ ಮೆಹ್ತಾ ಎಂದು ಗುರುತಿಸಲಾಗಿದೆ. ಮೆಹ್ತಾ ವ್ಯಕ್ತಿಗೆ ಕಾಲಿಗೆ ಸಣ್ಣ ಗಾಯವಾಗಿದೆ.