* ಮಧ್ಯಪ್ರದೇಶದಲ್ಲಿ ಹಾಡಹಗಲೇ ಹೇಯ ಕೃತ್ಯ* ನಡುರಸ್ತೆಯಲ್ಲೇ ಬಾಲಕಿಯ ಎಳೆದಾಡಿ ಗ್ಯಾಂಗ್‌ರೇಪ್* ವಿಡಿಯೋ ವೈರಲ್ ಆದ ಬಳಿಕ ಎಚ್ಚೆತ್ತ ಪೊಲೀಸರು

ಭೋಪಾಲ್(ಮಾ.13): ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಲ್ಲಿ ಅತ್ಯಂತ ಹೇಯ ಕೃತ್ಯ ನಡೆದಿದೆ. ಇಲ್ಲಿ ಕೆಲ ಯುವಕರು ಬಾಲಕಿಗೆ ಹಾಡ ಹಗಲೇ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ವಿಡಿಯೋದಲ್ಲಿ ಕೆಲ ದಿನಗಳ ಹಿಂದೆ ನಡೆದ ಭಗೋರಿಯಾ ಉತ್ಸವದ್ದೆಂದು ಹೇಳಲಾಗುತ್ತಿದೆ. ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಅಲಿರಾಜಪುರದ ಬಲ್ಪುರ್ ಗ್ರಾಮದಲ್ಲಿ ಈ ಹಬ್ಬವನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಬಾಲಕಿಯ ಮೇಲೆ ಎರಗಿದ ಕೆಲ ಹುಡುಗರು ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಬಾಲಕಿಯನ್ನು ಎಳೆದೊಯ್ದು ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ

ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕಿ ಅಲ್ಲಿದ್ದ ಕಾರಿನ ಹಿಂದೆ ಬಾಲಕಿ ಅಡಗಿಕೊಳ್ಳಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಅಷ್ಟರಲ್ಲಿ ಆ ಕಡೆ ಹೋಗುತ್ತಿದ್ದ ಗುಂಪಿನಲ್ಲಿದ್ದ ಯುವಕನೊಬ್ಬ ಬಾಲಕಿಯನ್ನು ಓಡಿಸಿ ಕಿರುಕುಳ ನೀಡಿದ್ದಾನೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಮತ್ತೊಬ್ಬ ಯುವಕ ಬಾಲಕಿಯನ್ನು ಎಳೆದೊಯ್ದು ತನ್ನ ಸಹಚರರ ನಡುವೆ ಎಳೆದೊಯ್ದಿದ್ದಾನೆ. ಇಲ್ಲಿ ತನ್ನ ಸಹಚರರೆಲ್ಲರೂ ಸೇರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ವರದಿಗಳ ಪ್ರಕಾರ, ಹುಡುಗಿ ಮತ್ತು ಯುವಕರು ನೆರೆಯ ಧಾರ್ ಜಿಲ್ಲೆಯ ಅದೇ ಗ್ರಾಮದ ನಿವಾಸಿಗಳು.

ಶೀಘ್ರದಲ್ಲೇ ಬಂಧಿಸಲಾಗುವುದು ಎಂದ ಎಸ್ಪಿ

ಘಟನೆಯ ನಂತರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಲಿರಾಜ್‌ಪುರ ಮನೋಜ್ ಸಿಂಗ್, ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು. ಕೆಲ ಯುವಕರನ್ನು ಗುರುತಿಸಿದ್ದೇವೆ ಎಂದೂ ಹೇಳಿದ್ದಾರೆ. ಅವರನ್ನು ಬಂಧಿಸಲು ತಂಡಗಳನ್ನು ರವಾನಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆಯೂ ಅಲಿರಾಜಪುರದಲ್ಲಿ ಇಂತಹ ಕುಕೃತ್ಯ

ಸೆಪ್ಟೆಂಬರ್ 2021 ರಲ್ಲಿ, ಅದೇ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದ ವೀಡಿಯೊ ವೈರಲ್ ಆಗಿತ್ತು. ವೈರಲ್ ಆದ ವಿಡಿಯೋದಲ್ಲಿ ಕೆಲವರು ಮಹಿಳೆಗೆ ಥಳಿಸುತ್ತಿದ್ದ ದೃಶ್ಯಗಳಿದ್ದವು. ಈ ಘಟನೆಯಲ್ಲಿ ಮಹಿಳೆಯ ಪತಿಯೂ ಭಾಗಿಯಾಗಿದ್ದಾನೆ. ಸೋಂಡ್ವಾ ಪೊಲೀಸ್ ಠಾಣೆಯ ಉಮ್ರಾಲಿ ಗ್ರಾಮದ ಈ ವೀಡಿಯೊ ನಂತರ, ಪೊಲೀಸರು ರಕ್ಷಣೆಗೆ ಬಂದು, ಕೆಲವರನ್ನು ಬಂಧಿಸಲಾಯಿತು. ಚಾರಿತ್ರ್ಯವಧೆ ಶಂಕಿಸಿ ಥಳಿಸಿದ್ದಾರೆನ್ನಲಾಗಿತ್ತು. .