ಪ್ರಯಾಣಿಕರ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಿವೆಯಾದರೂ ಅವುಗಳ ಟಿಕೆಟ್ ದರ ದುಬಾರಿಯಾಗಿದೆ. ಹೀಗಾಗಿ ಕೆಲ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ತೀರಾ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಕಡಿಮೆ ಅಂತರದ ಭಾರತ್ ರೈಲುಗಳ ಟಿಕೆಟ್ ದರಗಳ ಮರುಪರಿಶೀಲನೆಗೆ ಮುಂದಾದ ರೈಲ್ವೆ ಇಲಾಖೆ.
ನವದೆಹಲಿ(ಜು.06): ದೇಶದ ಮೊದಲ ಹೈಸ್ಪೀಡ್ ರೈಲು ಎನಿಸಿಕೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ದರದಲ್ಲಿ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಪ್ರಯಾಣಿಕರ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಿವೆಯಾದರೂ ಅವುಗಳ ಟಿಕೆಟ್ ದರ ದುಬಾರಿಯಾಗಿದೆ. ಹೀಗಾಗಿ ಕೆಲ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ತೀರಾ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಕಡಿಮೆ ಅಂತರದ ಭಾರತ್ ರೈಲುಗಳ ಟಿಕೆಟ್ ದರಗಳ ಮರುಪರಿಶೀಲನೆಗೆ ರೈಲ್ವೆ ಮುಂದಾಗಿದೆ.
Dharwad-Bengaluru ವಂದೇ ಭಾರತ್ ಟ್ರೈನ್ ಕಲ್ಲು ಹೊಡೆದ ಪ್ರಕರಣ, ಇಬ್ಬರು ಮಕ್ಕಳು ಪೊಲೀಸ್ ವಶಕ್ಕೆ!
ಉದಾಹರಣೆಗೆ ಭೋಪಾಲ್- ಇಂದೋರ್ ವಂದೇ ಭಾರತ್ 3 ಗಂಟೆಗಳ ಪ್ರಯಾಣ ಅವಧಿ ಹೊಂದಿದ್ದು ಕೇವಲ ಶೇ. 21 ರಿಂದ 29ರಷ್ಟುಪ್ರಯಾಣಿಕರು ಮಾತ್ರವೇ ಪ್ರಯಾಣಿಸುತ್ತಿದ್ದಾರೆ. ಇದರ ಎಸಿ ಕೋಚ್ ಟಿಕೆಟ್ ದರವು 950 ರು. ಮತ್ತು ಎಕ್ಸಿಕ್ಯೂಟಿವ್ ಟಿಕೆಟ್ ದರ 1525 ರು. ಇದೆ.
ಇಂತಹ ‘ಕಡಿಮೆ ಅವಧಿಯ ವಂದೇ ಭಾರತ್ ರೈಲು ಟಿಕೆಟ್ ದರ ಕಡಿಮೆಗೊಳಿಸಿ ಉತ್ತಮ ಕಾರ್ಯನಿರ್ವಹಣೆ ಕೈಗೊಳ್ಳಲು ಬದಲಾವಣೆ ಮಾಡಲಾಗುವುದು’ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
