Asianet Suvarna News Asianet Suvarna News

ಉತ್ತರಾಖಂಡದಲ್ಲಿ ಬೀದಿ ನಾಯಿಗೆ ಶ್ವಾನ ಪಡೆ ತರಬೇತಿ: ವೈರಲ್‌

ಉತ್ತರಾಖಂಡದಲ್ಲಿ ಬೀದಿ ನಾಯಿಗೆ ಶ್ವಾನ ಪಡೆ ತರಬೇತಿ ನೀಡಲಾಗುತ್ತಿದೆ. ತಮಾಷೆಯಲ್ಲ... ಇಲ್ಲಿದೆ ನೋಡಿ ವಿಡಿಯೋ

Uttarakhand Police train strays to include them in dog squad video is viral
Author
Bangalore, First Published Nov 22, 2019, 4:47 PM IST

ನವದೆಹಲಿ[ನ.22]: ಪೊಲೀಸರು ತನಿಖೆಗೆ ಬಳಸುವ ಶ್ವಾನಪಡೆಗೆ ಜರ್ಮನ್‌ ಶೆಫರ್ಡ್‌ ಸೇರಿದಂತೆ ಹಲವು ವಿದೇಶಿ ತಳಿಗಳ ನಾಯಿಗಳನ್ನು ಬಳಸಿಕೊಳ್ಳುವುದು ಸಹಜ. ಆದರೆ ಪ್ರತಿಯೊಂದು ಜಾತಿಯ ಶ್ವಾನಗಳಿಗೂ ಇರುವ ಆಘ್ರಾಣ ಶಕ್ತಿಯನ್ನು ಗ್ರಹಿಸಿರುವ ಉತ್ತರಾಖಂಡದ ಪೊಲೀಸರು, ಬೀದಿ ನಾಯಿಯೊಂದಕ್ಕೆ ತರಬೇತಿ ನೀಡುವ ಮೂಲಕ ಅದನ್ನು ಸ್ಪೈಪರ್‌ ಸ್ಕ್ವಾಡ್‌ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ.

ಈ ಚಿತ್ರಗಳಿಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ವೈರಲ್‌ ಆಗಿದೆ. ಅಲ್ಲದೇ ಈ ಬೀದಿ ನಾಯಿ ತರಬೇತಿ ವೇಳೆ ಚುರುಕಾಗಿ, ಸಾಹಸ ಪ್ರದರ್ಶನ ನೀಡಿ ಶ್ವಾನ ದಳದ ಇತರೆ ನಾಯಿಗಳನ್ನು ಮೀರಿಸಿದೆಯಂತೆ.

ಈ ನಾಯಿಯ ಸಾಹಸ ನಿಮ್ಮಲ್ಲಿ ನಿಜಕ್ಕೂ ದಿಗ್ಭ್ರಮೆ ಉಂಟು ಮಾಡುತ್ತದೆ. ಇದೇ ಮೊದಲ ಬಾರಿಗೆ ಬೀದಿ ನಾಯಿಗೆ ತರಬೇತಿ ನೀಡಲಾಗಿದೆ ಎಂದು ಅಡಿಬರಹ ಬರೆಯಲಾಗಿದೆ.

Follow Us:
Download App:
  • android
  • ios