* ಉತ್ತರಾಖಂಡ್‌ನಲ್ಲಿ ಚುನಾವಣೇಗೆ ಪಕ್ಷಗಳ ಸಿದ್ಧತೆ* ಅತ್ತ ರಾಹುಲ್, ಇತ್ತ ಮೋದಿ ಯಾರ ಪರ ಮತದಾರರು?* ದೇವಭೂಮಿಯಲ್ಲಿ ರಂಗೇರಿದ ಚುನಾವಣಾ ಕಣ
ಡೆಹ್ರಾಡೂನ್(ಫೆ.10): ಉತ್ತರಾಖಂಡ ವಿಧಾನಸಭಾ ಚುನಾವಣೆಯ (Uttarakhand Assembly Elections) ದಿನಾಂಕ ಸಮೀಪಿಸುತ್ತಿದ್ದಂತೆ ಇಲ್ಲಿ ರಾಜಕೀಯ ತಳಮಳ ತೀವ್ರಗೊಳ್ಳುತ್ತಿದೆ. ಸದ್ಯ ಚುನಾವಣಾ ಪ್ರಚಾರ ಜೋರಾಗಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ರಾಜ್ಯದಿಂದ ಹಿಡಿದು ಕೇಂದ್ರದವರೆಗೆ ಎಲ್ಲಾ ನಾಯಕರು ಈ ನಿಟ್ಟಿನಲ್ಲಿ ಶಕ್ತಿ ಮೀರಿ ಯತ್ನಿಸುತ್ತಿದ್ದಾರೆ. ಏತನ್ಮಧ್ಯೆ, ಗುರುವಾರ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇವಭೂಮಿಯ ಮತದಾರರನ್ನು ತಮ್ಮ ಪರ ಸೆಳೆಯಲು ಶ್ರೀನಗರ ಗಡ್ವಾಲ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿಂದೆ ಅವರು ರಾಜ್ಯದ ಹಲವು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅಲ್ಲದೇ ಇಲ್ಲಿ ಅವರು ಈಗಾಗಲೇ ವರ್ಚುವಲ್ ರ್ಯಾಲಿ (Virtuaal Rally) ಮಾಡಲಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ಭೌತಿಕ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಇನ್ನು ಉತ್ತರಾಖಂಡದಲ್ಲಿ ಇಂದು ಭಾರೀ ರಾಜಕೀಯ ಸಂಚಲನ ಉಂಟಾಗಲಿದೆ ಎಂಬುವುದು ಮತ್ತೊಂದು ವಿಚಾರ, ಏಕೆಂದರೆ ಇಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರು ಮೂರನೇ ಬಾರಿಗೆ ಸಾರ್ವಜನಿಕರಿಂದ ಮತ ಕೇಳಲು ಮುಂದಾಗಿದ್ದಾರೆ.
UP Elections: ಮೊದಲ ಹಂತದಲ್ಲಿ ಚುನಾವಣೆ ಕಾವು, ದಿಗ್ಗಜರಿಗೆ ಪ್ರತಿಷ್ಠೆಯ ಸವಾಲು!
ಉತ್ತರಾಖಂಡ ಚುನಾವಣಾ ಹೊಣೆಯನ್ನು ತೆಗೆದುಕೊಂಡ ಮೋದಿ
ವಾಸ್ತವವಾಗಿ, ಪ್ರಧಾನಿ ಮೋದಿಯವರ ಈ ರ್ಯಾಲಿಯನ್ನು ಫೆಬ್ರವರಿ 10 ರಂದು 12:00 ಗಂಟೆಗೆ ಶ್ರೀನಗರ, ಗರ್ವಾಲ್‌ನಲ್ಲಿ ಆಯೋಜಿಸಲಾಗಿದೆ. ಅಲ್ಲಿ ಅವರು ಅಲ್ಮೋರಾದ (Almora) ಜನತೆಗೆ ಬಿಜೆಪಿ ಪರವಾಗಿ ಮತ ನೀಡುವಂತೆ ಮನವಿ ಮಾಡಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ಪ್ರಧಾನಿಯೇ ಸಾರ್ವಜನಿಕ ಸಭೆಯಲ್ಲಿ ಹಂಚಿಕೊಂಡಿದ್ದಾರೆ. ರಾಜ್ಯದ ಜನರನ್ನು ಭೇಟಿ ಮಾಡಲು ಫೆಬ್ರವರಿ 10 ರಂದು ಶ್ರೀನಗರಕ್ಕೆ ಆಗಮಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈಗ ಪ್ರಧಾನಿಯವರು ಉತ್ತರಾಖಂಡ ಚುನಾವಣೆಯ ಹೊಣೆಯನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಹಾಗಾಗಿಯೇ ಅವರ ಕಾರ್ಯಕ್ರಮಗಳು ಒಂದರ ಹಿಂದೊಂದರಂತೆ ನಡೆಯುತ್ತಿವೆ.
ಪ್ರಧಾನಿ ಸ್ವಾಗತಕ್ಕೆ ಬಿಜೆಪಿ ಸಜ್ಜು, ನಗರದೆಲ್ಲೆಡೆ ಬೋರ್ಡು
ಪ್ರಧಾನಿ ಮೋದಿಯವರ ಈ ರ್ಯಾಲಿಯನ್ನು ಆಯೋಜಿಸಲು ಉತ್ತರಾಖಂಡ ಬಿಜೆಪಿ ಸಂಪೂರ್ಣ ಸಿದ್ಧತೆ ನಡೆಸಿದೆ. ಸ್ಥಳದಲ್ಲಿ ಸುಂದರ ದೀಪಾಲಂಕಾರ ಹಾಗೂ ಬೃಹತ್ ಪೆಂಡಾಲ್‌ಗಳನ್ನು ಅಳವಡಿಸಲಾಗಿದೆ. ಇದು ಜನರಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಉಳಿದಿದೆ. ಅಲ್ಮೋರಾದಾದ್ಯಂತ ಪ್ರಧಾನಿಯವರ ಸ್ವಾಗತ ಫಲಕಗಳನ್ನು ಹಾಕಲಾಗಿದೆ. ಅಲ್ಲದೆ, ನೆಲದ ಮೇಲೆ ಎಲ್ಇಡಿ ಪರದೆಯನ್ನು ಅಳವಡಿಸಲಾಗಿದೆ. ಈ ವೇಳೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಅಲ್ಲಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ರೈತರ ಹಿತಕ್ಕಾಗಿ ಕೃಷಿ ಕಾಯ್ದೆ, ದೇಶದ ಹಿತಾಸಕ್ತಿಗಾಗಿ ರದ್ದು: PM Narendra Modi
ಭಾರೀ ಪೈಪೋಟಿ, ಹೀಗಾಗೇ ಮಹತ್ವ ಪಡೆದ ಮೋದಿ ಸಮಾವೇಶ
ಫೆಬ್ರವರಿ 14 ರಂದು ರಾಜ್ಯಕ್ಕೆ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಕೇವಲ ನಾಲ್ಕು ದಿನಗಳ ಮೊದಲು ಬಿಜೆಪಿ ಉತ್ತರಾಖಂಡದ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಣಕ್ಕಿಳಿಸಲು ಹೊರಟಿದೆ ಎಂಬುವುದು ಉಲ್ಲೇಖನೀಯ. ಇದರಿಂದ ರಾಜ್ಯದ ಚುನಾವಣಾ ಾಲೆ ಬದಲಾಗಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ ಗಡ್ವಾಲ್ ಶ್ರೀನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಹೋರಾಟವಿದೆ. ಇಲ್ಲಿಂದ ಬಿಜೆಪಿಯ ಆರೋಗ್ಯ ಸಚಿವ ಧನ್ ಸಿಂಗ್ ರಾವತ್ ಕಣದಲ್ಲಿದ್ದಾರೆ. ಅವರು ಕಾಂಗ್ರೆಸ್ ರಾಜ್ಯಾಧ್ಯಕ್ಷ ಗಣೇಶ್ ಗೋಡಿಯಾಲ್ ವಿರುದ್ಧ ಕಣಕ್ಕಿಳಿದಿದ್ದಾರೆ. ಅದಕ್ಕಾಗಿಯೇ ಪ್ರಧಾನಿ ಮೋದಿಯವರ ಈ ರ್ಯಾಲಿಯನ್ನು ವಿಶೇಷವಾಗಿ ಪರಿಗಣಿಸಲಾಗಿದೆ.
ರಾಹುಲ್ ಗಾಂಧಿ ಸಭೆಯೂ ಮಹತ್ವದ್ದು
ಫೆಬ್ರವರಿ 10 ರಂದು ರಾಹುಲ್ ಗಾಂಧಿ ಮೂರನೇ ಬಾರಿಗೆ ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ ಎಂಬುವುದು ಗಮನಾರ್ಹ. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಇಂದು ಶ್ರೀನಗರ ಮತ್ತು ಅಲ್ಮೋರಾದಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಏಕೆಂದರೆ ಇಲ್ಲಿಂದ ಅವರ ಪಕ್ಷದ ಹಿರಿಯ ನಾಯಕ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗಣೇಶ್ ಗೋಡಿಯಾಲ್ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಇಂದು ಅವರ ರ್ಯಾಲಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಅಲ್ಲದೇ ಅತ್ತ ಪ್ರಧಾನಿ ಮೋದಿಯೂ ಇರುತ್ತಾರೆ.
ಒಂದು ಹಂತದ ಮತದಾನ
ಉತ್ತರಾಖಂಡದ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ-ಕಾಂಗ್ರೆಸ್ ಜತೆಗೆ ಆಮ್ ಆದ್ಮಿ ಮತ್ತಿತರ ಪಕ್ಷಗಳೂ ಚುನಾವಣಾ ಪ್ರಚಾರದಲ್ಲಿ ನಿರತವಾಗಿವೆ. ಸಾರ್ವಜನಿಕರನ್ನು ಓಲೈಸಲು ಭರವಸೆ ನೀಡಲಾಗುತ್ತಿದೆ. ಅಭಿವೃದ್ಧಿಯ ಮಾತು ಕೇಳಿ ಬರುತ್ತಿದೆ.
