ಡೆಹ್ರಾಡೂನ್‌(ಮಾ.24): ಮಹಿಳಾ ಬ್ಯಾಂಕ್‌ ಮ್ಯಾನೇಜರ್‌ರೊಂದಿಗೆ ಅಸಭ್ಯ ಭಾಷೆಯಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಚಾಟ್‌ ಮಾಡಿದ ಆರೋಪ ಸಂಬಂಧ ಇಲ್ಲಿನ ಕಾಂಗ್ರೆಸ್‌ ನಾಯಕ ಆಜಾದಿ ಆಲಿ ಎಂಬವರನ್ನು ಮಂಗಳವಾರ ಬಂಧಿಸಲಾಗಿದೆ.

ಘಟನೆ ಬೆನ್ನಲ್ಲೇ ಪಕ್ಷದಿಂದಲೂ ಅವರನ್ನು ಉಚ್ಚಾಟಿಸಲಾಗಿದೆ ಎಂದು ಉತ್ತರಾಖಂಡ ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿ ವಿಜಯ್‌ ಸಾರಸ್ವತ್‌ ಅವರು ತಿಳಿಸಿದ್ದಾರೆ. ವಿಮೆ ಪಾಲಿಸಿ ಕೊಂಡುಕೊಳ್ಳುವುದಾಗಿ ಮಹಿಳಾ ಬ್ಯಾಂಕ್‌ ಮ್ಯಾನೇಜರ್‌ ಅನ್ನು ಅಜಾದ್‌ ಆಲಿ ಸಂಪರ್ಕಿಸಿದ್ದರು.

ಮ್ಯಾನೇಜರ್‌ ವಿಮೆ ಕುರಿತಂತೆ ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆದರೆ ಕಾಂಗ್ರೆಸ್‌ ನಾಯಕ ಅವರೊಂದಿಗೆ ಅಸಭ್ಯ ಭಾಷೆಯಲ್ಲಿ ಮಾತನಾಡಿದ್ದಾರೆ ಎಂದು ಬ್ಯಾಂಕ್‌ಮ್ಯಾನೇಜರ್‌ ದೂರು ನೀಡಿದ್ದರು.