ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಸರ್ಕಾರ ಇದೀಗ ಹೊಸ ಐಡಿಯಾ ಮಾಡಿದೆ.
ನವದೆಹಲಿ (ಸೆ.25): ರಸ್ತೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ 2017ರಲ್ಲಿ ವಿಶೇಷ ರೋಮಿಯೋ ನಿಗ್ರಹ ಪಡೆ ರಚಿಸಿದ್ದ ಉತ್ತರಪ್ರದೇಶ ಸರ್ಕಾರ, ಇದೀಗ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವವರ ಮರ್ಯಾದೆ ಹರಾಜು ಹಾಕಲು ಮುಂದಾಗಿದೆ.
ಮಹಿಳೆಯರನ್ನು ಚುಡಾಯಿಸುವುದು, ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದವರ ಫೋಟೋಗಳನ್ನು ಆಯಕಟ್ಟಿನ ರಸ್ತೆ ಮತ್ತು ವೃತ್ತಗಳಲ್ಲಿ ಪ್ರದರ್ಶಿಸಲು ನಿರ್ಧರಿಸಿದೆ.
ಕಾಮುಕ 'ಫಾದರ್' ಕಲಬುರಗಿ ಹೆಣ್ಣು ಬಾಕನ ಕೋಣೆ ಕಾಮದಾಟ! ...
ಇದಕ್ಕಾಗಿ ಆಪರೇಷನ್ ದುರಾಚಾರಿ’ ಹೆಸರಿನಡಿ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗು ಹೆಚ್ಚಾಗಿ ನಡೆಯುವ ಹಿನ್ನೆಲೆಯಲ್ಲಿ ಇವುಗಳ ನಿಯಂತ್ರಣ ಮಾಡಲು ಸರ್ಕಾರ ಈಗ ಹೊಸ ಐಡಿಯಾ ಮಾಡಿ ಸಾರ್ವಜನಿಕವಾಗಿ ಇವರ ಫೋಟೊ ಪ್ರಕಟಿಸಲು ಮುಂದಾಗಿದೆ.
