Asianet Suvarna News Asianet Suvarna News

ಪ್ರತಿ ರೈತನ ಕುಟುಂಬಕ್ಕೆ ಒಂದು ಕೆಲಸ ನೀಡಲು ಯೋಗಿ ಆದಿತ್ಯನಾಥ್ ನಿರ್ಧಾರ!

ಮುಂದಿನ ಐದು ವರ್ಷಗಳಲ್ಲಿ 2,10,000 ಉದ್ಯಮಿಗಳು ಮತ್ತು ರೈತರಿಗೆ ತರಬೇತಿ ನೀಡುವ ಗುರಿಯನ್ನು ಉತ್ತರ ಪ್ರದೇಶ ಸರ್ಕಾರವು ಹೊಂದಿದೆ.
 

Uttar Pradesh news Chief Minister Yogi Adityanath to provide one job to every farmer family san
Author
Bengaluru, First Published May 1, 2022, 4:42 PM IST | Last Updated May 1, 2022, 4:52 PM IST

ಲಕ್ನೋ (ಮೇ.1): ಕಾರ್ಮಿಕ ದಿನಾಚರಣೆಯ ದಿನದಂದೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ( Uttar Pradesh Chief Minister Yogi Adityanath ) ದೊಡ್ಡ ಘೋಷಣೆ ಮಾಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಪ್ರತಿ ರೈತ ಕುಟುಂಬದಲ್ಲಿ ಕನಿಷ್ಠ ಒಂದಾದರೂ ಕೆಲಸದ ಅವಕಾಶವನ್ನು ನೀಡುವ ಗುರಿ ಹೊಂದಿರುವುದಾಗಿ ಪ್ರಕಟಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ 2,10,000 ಉದ್ಯಮಿಗಳು ಮತ್ತು ರೈತರಿಗೆ ( farmer ) ತರಬೇತಿ ನೀಡುವ ಗುರಿಯನ್ನು ಉತ್ತರ ಪ್ರದೇಶ ಸರ್ಕಾರವು ಹೊಂದಿದೆ ಎಂದು ತಿಳಿಸಿದ್ದಾರೆ. ರೈತರ ಆದಾಯವನ್ನು ಹೆಚ್ಚಳ ಮಾಡುವುದರ ಗುರಿಯೊಂದಿಗೆ, ಈ ರೈತರನ್ನು ಉದ್ಯಮಿಗಳನ್ನಾಗಿ ಪರಿವರ್ತನೆ ಮಾಡುವ ಉದ್ದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದೆ ಎಂದಿದ್ದಾರೆ. ಇದು ರೈತರ ಆದಾಯ ಹೆಚ್ಚಳ (increasing the income of the farmers) ಮಾಡಲು ಸಹಾಯ ಮಾಡುವುದು ಮಾತ್ರವಲ್ಲದೆ, ಯುವಕರಿಗೆ ಹೆಚ್ಚಿನ ಉದ್ಯೋಗದ ಅವಕಾಶಗಳೂ ಒಲಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ ಸರ್ಕಾರ ವಕ್ತಾರರ ಮಾಹಿತಿಯ ಪ್ರಕಾರ, ಯೋಗಿ ಆದಿತ್ಯನಾಥ್ ಸರ್ಕಾರ 375 ಎಕರೆಯ ಬೃಹತ ಆಹಾರ ಸಂಸ್ಕೃರಣಾ ಘಟಕವನ್ನು ( food processing units ) ಆರಂಭಿಸಲು ಸಿದ್ಧತೆ ನಡೆಸಿದೆ. ಅದರೊಂದಿಗೆ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ (ಪಿಎಂಎಫ್‌ಎಂಇ) ಯೋಜನೆಯಡಿ ಪ್ರಧಾನ ಮಂತ್ರಿ ಕಾರ್ಯಕ್ರಮದ  (Pradhan Mantri Formalisation of Micro food Processing Enterprises ) ಅಡಿಯಲ್ಲಿ 41,336 ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಹಾಗೂ ಮೇಲ್ದರ್ಜೆಗೇರಿಸುವ ಕೆಲಸವನ್ನು ಮಾಡಲಾಗುತ್ತದೆ.

PMFME ಯೋಜನೆಯಡಿ, ಆಹಾರ ಉದ್ಯಮದಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿಸಲು ಸರ್ಕಾರವು ಸಹಾಯವನ್ನು ನೀಡುತ್ತದೆ. ಇದರ ಅಡಿಯಲ್ಲಿ ಸಣ್ಣ ಆಹಾರ ಸಂಸ್ಕರಣಾ ಕೈಗಾರಿಕೆಗಳನ್ನು ಪ್ರಾರಂಭಿಸಬಹುದು.

ರೈತರ ಬೆಳೆಗೆ (Farmer crops) ಉತ್ತಮ ಬೆಲೆ ಸಿಗಬೇಕು ಎಂಬುದು ಸರ್ಕಾರದ ಆಶಯ. ಇದಕ್ಕಾಗಿ ರೈತರನ್ನು ಆಹಾರ ಸಂಸ್ಕರಣಾ ಉದ್ಯಮದೊಂದಿಗೆ ಸಂಪರ್ಕಿಸಲಿದೆ. ಆಹಾರ ಸಂಸ್ಕರಣೆಯ ನಂತರ ಬೆಳೆ ಹಾನಿಯಾಗುವ ಸಾಧ್ಯತೆ ಇರುವುದಿಲ್ಲ ಮತ್ತು ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ದೊರೆಯುತ್ತದೆ. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ. ಇದಲ್ಲದೆ, ರೈತರು ಮತ್ತು ಉದ್ಯಮಿಗಳಿಗೆ ಉದ್ಯಮಗಳನ್ನು ಸ್ಥಾಪಿಸಲು ತರಬೇತಿ ನೀಡಲು ಸರ್ಕಾರ ವ್ಯವಸ್ಥೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿಗಷ್ಟೇ ಉತ್ತರ ಪ್ರದೇಶ ಸರ್ಕಾರ, ನಿಗದಿತ ಕನಿಷ್ಠ ಬೆಂಬಲ ಬೆಲೆಯ (MSP) 2022-23 ರ ರಾಬಿ ಬೆಳೆ ಸಂಗ್ರಹಣೆ ಪ್ರಾರಂಭವಾಗುತ್ತಿದ್ದಂತೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 72 ಗಂಟೆಗಳ ಒಳಗೆ ರೈತರ ಬ್ಯಾಂಕ್ ಖಾತೆಗಳಿಗೆ (Farmers Bank Account) ಹಣವನ್ನು ವರ್ಗಾಯಿಸಲು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದರು. ಈ ವರ್ಷ 60 ಲಕ್ಷ ಮೆ.ಟನ್ ಗೋಧಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಕೇಂದ್ರ ಸರ್ಕಾರವು ( Central government  ) ಗೋಧಿಗೆ ಎಂಎಸ್ ಪಿ ಅನ್ನು ಕ್ವಿಂಟಲ್‌ಗೆ 2,015 ರೂ.ಗೆ ನಿಗದಿಪಡಿಸಿದೆ, ಕಳೆದ ವರ್ಷ ಕ್ವಿಂಟಲ್‌ಗೆ 1,975 ರೂಪಾಯಿ ನಿಗದಿ ಮಾಡಲಾಗಿತ್ತು. ಬೆಂಬಲ ಬೆಲೆಯಲ್ಲಿ 40 ರೂಪಾಯಿ ಏರಿಕೆ ಮಾಡಲಾಗಿದೆ.

ಅಧಿಕಾರಿಗಳ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆದಿತ್ಯನಾಥ್, ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಗೋಧಿ ಖರೀದಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು ಎಂದು ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios