ಬೈಕ್-ಕಾರ್ ಬಗ್ಗೆ ಕೇಳಿದ್ದೀವಿ; ಕೇಂದ್ರ ಸಚಿವರು ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್ ಇಂಧನವೇ ಖಾಲಿ ಆಯ್ತು!
ಜಾರ್ಖಂಡ್‌ನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರು ಹೆಲಿಕಾಪ್ಟರ್‌ನಲ್ಲಿ ಇಂಧನ ಕೊರತೆಯಿಂದಾಗಿ ರಸ್ತೆ ಮಾರ್ಗವಾಗಿ ಪ್ರಯಾಣಿಸಬೇಕಾಯಿತು.
ರಾಂಚಿ: ಜಾರ್ಖಂಡ್ ರಾಜ್ಯದ ಗಢವಾ ಜಿಲ್ಲೆಯಲ್ಲಿ ಕೇಂದ್ರ ಸಚಿವರ ಭದ್ರತಾ ವ್ಯವಸ್ಥೆಯಲ್ಲಿ ದೊಡ್ಡ ಲೋಪ ಎದುರಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಪ್ರಯಾಣಿಸಬೇಕಾದ ಹೆಲಿಕಾಪ್ಟರ್ ಇಂಧನ ಖಾಲಿಯಾಗಿದ್ದರಿಂದ ರಸ್ತೆ ಮಾರ್ಗವಾಗಿ ಪ್ರಯಾಣಿಸಿದ್ದಾರೆ. ಜಾರ್ಖಂಡ್‌ನ ಗಢವಾ ಜಿಲ್ಲೆಯ ಉಂಟಾರಿ ಪ್ರಖಾಂಡ್ ಪ್ರದೇಶದಲ್ಲಿ ಬಿಜೆಪಿಯ ಸಂಕಲ್ಪ ಪರಿವರ್ತನಾ ಯಾತ್ರೆ ಶುರುವಾಗಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬೂಲಾಲ್ ಮರಾಂಡಿ ಹಾಗೂ ಅನೇಕ ಬಿಜೆಪಿ ನಾಯಕರು ಆಗಮಿಸಿದ್ದರು. ಶ್ರೀಬಂಶಿಘರ್ ದೇವಸ್ಥಾನದಲ್ಲಿ ಕೇಂದ್ರ ಸಚಿವರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಕೆ ಬಳಿಕ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ, ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಈ ಸಮಾವೇಶದ ನಂತರ ಹಿಂದಿರುಗುವ ವೇಳೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ಇಂಧನ ಕೊರತೆಯುಂಟಾದ ಹಿನ್ನೆಲೆ ರಸ್ತೆ ಮಾರ್ಗವಾಗಿ ಬನಾರಸ್‌ಗೆ ತೆರಳಿದರು. ಕೇಂದ್ರ ಸಚಿವರ ಭದ್ರತೆಗಾಗಿ 12 ಬೆಂಗಾವಲು ವಾಹನಗಳು ಸಹ ಬನಾರಸ್‌ಗೆ ತೆರಳಿದವು ಎಂದು ವರದಿಯಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಇಬ್ಬರು ಸಚಿವರು, ಹೆಲಿಕಾಪ್ಟರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.
ಗಾಢವಾ ಜಿಲ್ಲೆಯಲ್ಲಿದ್ದ ಹೆಲಿಕಾಪ್ಟರ್‌ಗೆ ಇಂಧನ ತೆಗೆದುಕೊಂಡು ಬರುತ್ತಿದ್ದ ವಾಹನ ಮಾರ್ಗ ಮಧ್ಯೆದಲ್ಲಿ ಕೆಟ್ಟು ನಿಂತಿದ್ದರಿಂದ ನಿಗಧಿತ ಸಮಯಕ್ಕೆ ತಲುಪಲು ವಿಫಲವಾಗಿತ್ತು. ಕೆಲ ಸ್ಥಳೀಯ ಮಾಧ್ಯಮಗಳ ಪ್ರಕಾರ, ಪಲಾಮೂ ಮತ್ತು ಗಢವಾ ಮಾರ್ಗ ಮಧ್ಯೆ ಇಂಧನ ತುಂಬಿದ್ದ ವಾಹನ ಕೆಟ್ಟು ನಿಂತಿತ್ತು.