Asianet Suvarna News Asianet Suvarna News

UP Election 2022 : ದಲಿತ ವಿರೋಧಿ ಟೀಕೆಯ ಬೆನ್ನಲ್ಲೇ, ದಲಿತರ ಮನೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಊಟ

ಗೋರಖ್ ಪುರದಲ್ಲಿ ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ ಆದಿತ್ಯನಾಥ್
ಸರ್ಕಾರ ರಾಜ್ಯದ ಎಲ್ಲಾ ಜನರ ಅಭಿವೃದ್ಧಿಗೆ ಬದ್ಧ ಎಂದ ಯುಪಿ ಸಿಎಂ
ಸಮಾಜವಾದಿ ಪಕ್ಷದ ರಾಜಕೀಯಕ್ಕೆ ತಿರುಗೇಟು ನೀಡಿದ ಬಿಜೆಪಿ
 

Uttar Pradesh news Chief Minister Yogi Adityanath had a meal at a Dalit household IN Gorakhpur san
Author
Bengaluru, First Published Jan 14, 2022, 5:55 PM IST | Last Updated Jan 14, 2022, 5:55 PM IST

ಗೋರಖ್ ಪುರ (ಜ. 14): ದೇಶದ ಬಹುದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ (Uttar Pradesh) ಚುನಾವಣೆ ಘೋಷಣೆ ಆದ ಬೆನ್ನಲ್ಲಿಯೇ ರಾಜ್ಯದಲ್ಲಿ ರಾಜಕೀಯ ಮೇಲಾಟಗಳು ಗರಿಗೆದರಿವೆ. ಸಾಲು ಸಾಲು ಹಾಲಿ ಶಾಸಕರು ಹಾಗೂ ಸಚಿವರ ರಾಜೀನಾಮೆಯಿಂದ ಕುಸಿದಿರುವ ಪಕ್ಷದ ವರ್ಚಸ್ಸನ್ನು ಏರಿಸುವ ನಿಟ್ಟಿನಲ್ಲಿ ಬಿಜೆಪಿ (BJP) ಕೂಡ ತನ್ನ ಪ್ರಯತ್ನ ಮಾಡುತ್ತಿದೆ. ಶುಕ್ರವಾರ ಮಕರ ಸಂಕ್ರಾಂತಿಯ ನಿಮಿತ್ತ ತಮ್ಮ ಸ್ವಕ್ಷೇತ್ರ ಗೋರಖ್ ಪುರಕ್ಕೆ (Gorakhpur ) ತೆರಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಈ ವೇಳೆ ದಲಿತರ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಿದರು. ಇದೇ ವೇಳೆ ಸಮಾಜವಾದಿ ಪಕ್ಷ  (Samajwadi Party) ಉತ್ತರ ಪ್ರದೇಶವನ್ನು ಆಳುತ್ತಿದ್ದ ಸಮಯದಲ್ಲಿ ಸಾಮಾಜಿಕ ನ್ಯಾಯದ ಬದಲಿಗೆ ಸಾಮಾಜಿಕ ಶೋಷಣೆ ಆಗುತ್ತಿತ್ತು ಎಂದು ಟೀಕಿಸಿದ ಅವರು, ತಮ್ಮ ಸರ್ಕಾರ ಯಾವ ಜಾತಿಯವರಿಗೂ ಬೇಧಭಾವ ತೋರದೆ ಸಮಾಜದ ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸಿದೆ ಎಂದು ಹೇಳಿದರು.

ಯೋಗಿ ಆದಿತ್ಯನಾಥ್ ಸರ್ಕಾರ ದಲಿತ ವಿರೋಧಿ ಎಂದು ಆರೋಪಿಸಿ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya), ದಾರಾ ಸಿಂಗ್ ಚೌಹಾಣ್ (Dara Singh Chauhan)ಮತ್ತು ಧರಮ್ ಸಿಂಗ್ ಸೈನಿ (Dharam Singh Saini)ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗುವ ಮುನ್ನ ಗೋರಖ್ ಪುರದಲ್ಲಿ ಮುಖ್ಯಮಂತ್ರಿ ದಲಿತರ ಮನೆಯಲ್ಲಿ ಊಟ ಮಾಡುವ ಕಾರ್ಯಕ್ರಮ ಮಾಡಿದರು. ಫೆಬ್ರವರಿ 10 ರಂದು ಆರಂಭವಾಗುವ ಉತ್ತರ ಪ್ರದೇಶ ವಿಧಾನಸಭೆಗೆ ಪೂರ್ವಭಾವಿಯಾಗಿ ಬಿಜೆಪಿ ಸದಸ್ಯತ್ವ ಅಭಿಯಾನದ ಬಗ್ಗೆ ಪ್ರಚಾರ ಮಾಡಲು ಗೋರಖ್ ಪುರಕ್ಕೆ ತೆರಳಿದ್ದರು. ಈಗಾಗಲೇ ಬಿಜೆಪಿ ಹಾಗೂ ಅಪ್ನಾ ದಳವನ್ನು ತೊರೆದು ಸಾಕಷ್ಟು ಮಂದಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮಕರ ಸಂಕ್ರಾತಿಯ ಸಮಯದಲ್ಲಿ ಅಮೃತ್ ಲಾಲ್ ಭಾರ್ತಿ ಮನೆಯಲ್ಲಿ ಊಟ ಮಾಡಿದ ಬಳಿಕ ಮಾತನಾಡಿದ ಯೋಗಿ ಆದಿತ್ಯನಾಥ್, "ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರ ತನ್ನ ಐದು ವರ್ಷದ ಅವಧಿಯಲ್ಲಿ ಕೇವಲ 18 ಸಾವಿರ ಮನೆಗಳನ್ನು ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ನೀಡಲಾಗಿತ್ತು. ಅದೇ ನಮ್ಮ ಸರ್ಕಾರದ ಅವಧಿಯಲ್ಲಿ ಈವರೆಗೂ 45 ಲಕ್ಷ ಮನೆಗಳನ್ನು ಬಡವರು ಹಾಗೂ ಕಡುಬಡವರಿಗೆ ಈ ಯೋಜನೆಯ ಅಡಿಯಲ್ಲಿ ನೀಡಲಾಗಿದೆ' ಎಂದು ಮಾಹಿತಿ ನೀಡಿದರು.
 


"ಯುಪಿಯಲ್ಲಿ ಅಖಿಲೇಶ್ ಯಾದವ್ ಸರ್ಕಾರ ಇದ್ದಷ್ಟು ಹೊತ್ತು ಸಾಮಾಜಿಕ ನ್ಯಾಯದ ಬದಲಿಗೆ ಜನರಿಗೆ ಸಾಮಾಜಿಕ ಶೋಷಣೆ ಸಿಕ್ಕಿತ್ತು' ಎನ್ನುವ ಮೂಲಕ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ "ಸಾಮಾಜಿಕ ನ್ಯಾಯ" ಟ್ಯಾಗ್ ಲೈನ್ ಅನ್ನು ಟೀಕೆ ಮಾಡಿದರು. ಡಬಲ್ ಎಂಜಿನ್ ಸರ್ಕಾರದ ಅಡಿಯಲ್ಲಿ 2.61 ಕೋಟಿ ಕುಟುಂಬಗಳು ಶೌಚಾಲಯಗಳು ಹಾಗೂ 1.36 ಕೋಟಿ ಕುಟುಂಗಳು ಉಜ್ವಲ ಯೋಜನೆಯಿಂದ ಪ್ರಯೋಜನ ಪಡೆದಿವೆ ಎಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಆಗುವ ಲಾಭವನ್ನು ಉಲ್ಲೇಖ ಮಾಡಿದ್ದಾರೆ.

UP Election 2022: ಮಕರ ಸಂಕ್ರಾಂತಿ ಈ ಬಾರಿ ಇತಿಹಾಸವಾಗುತ್ತೆ, ಯಾಕಂದ್ರೆ ಬಿಜೆಪಿಯ ಅಂತ್ಯವಾಗುತ್ತೆ!
ಕುಟುಂಬ ರಾಜಕೀಯದ ಕಪಿಮುಷ್ಠಿಯಲ್ಲಿ ಇರುವವರು, ಸಮಾಜದ ಯಾವ ವರ್ಗಗಳಿಗೂ ನ್ಯಾಯ ನೀಡಲು ಸಾಧ್ಯವಾಗುವುದಿಲ್ಲ' ಎಂದು ಹೇಳಿದ ಯೋಗಿ ಅದಿತ್ಯನಾಥ್, ದಲಿತರು ಹಾಗೂ ಶೋಷಿತರ ಹಕ್ಕುಗಳ ಮೇಲೆ ಅಖಿಲೇಶ್ ಯಾದವ್ ಸರ್ಕಾರ ಡಕಾಯಿತಿ ನಡೆಸಿತ್ತು ಎಂದು ಕಿಡಿಕಾರಿದರು. ಅಖಿಲೇಶ್ ಯಾದವ್ 2012 ರಿಂದ 2017ರ ವರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.

UP Election 2022: ಅಖಿಲೇಶ್, ಡಿಂಪಲ್ ಆಪ್ತ ಪಂಖೂರಿಗೆ ಕೈ ಟಿಕೆಟ್
ಸ್ವಾಮಿ ಪ್ರಸಾದ್ ಮೌರ್ಯ, ಚೌಹಾಣ್ ಮತ್ತು ಧರಮ್ ಸಿಂಗ್ ಸೈನಿ ಹಾಗೂ ಬಹುತೇಕ ಎಲ್ಲಾ ಬಂಡಾಯ ಶಾಸಕರು ದಲಿತರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಕಾಳಜಿ ವಹಿಸದಿರುವುದು ಕೇಸರಿ ಟೀಮ್ ತೊರೆಯಲು ಪ್ರಮುಖ ಕಾರಣವೆಂದು ಉಲ್ಲೇಖಿಸಿದ್ದಾರೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

Latest Videos
Follow Us:
Download App:
  • android
  • ios