Asianet Suvarna News Asianet Suvarna News

ರಾಜಕೀಯಕ್ಕೆ ಬಲಿಯಾಯ್ತು ದಾಂಪತ್ಯ, ಹಾಲಿ ಸಚಿವ-ಮಾಜಿ ಸಚಿವೆಯ ಡಿವೋರ್ಸ್‌!

ಆರು ವರ್ಷಗಳ ಹಿಂದೆ ಬಿಎಸ್‌ಪಿ ನಾಯಕಿ ಮಾಯಾವತಿ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಪ್ರದೇಶದ ಸಚಿವ ದಯಾಶಂಕರ್‌ ಸಿಂಗ್‌ ಹಾಗೂ ಮಾಜಿ ಸಚಿವೆ ಸ್ವಾತಿ ಸಿಂಗ್‌ ವಿಚ್ಛೇದನವಾಗಿದೆ. ಅದರೊಂದಿಗೆ ಬೆಡ್‌ರೂಮ್‌ ರಾಜಕೀಯದಿಂದಲೇ ಸುದ್ದಿಯಾಗಿದ್ದ 22 ವರ್ಷಗಳ ವಿವಾದಿತ ದಾಂಪತ್ಯಕ್ಕೆ ಕೊನೆ ಬಿದ್ದಂತಾಗಿದೆ.
 

Uttar Pradesh former minister Swati Singh and Minister Dayashankar Singh divorce san
Author
First Published Apr 4, 2023, 1:19 PM IST | Last Updated Apr 4, 2023, 1:23 PM IST

ನವದೆಹಲಿ (ಏ.4): ಅದು 90ರ ದಶಕ. ಲಖನೌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ರಾಜಕೀಯದಲ್ಲಿದ್ದ ಸ್ವಾತಿ ಸಿಂಗ್‌ ಎನ್ನುವ ಚಂದನೆಯ ಯುವತಿ ದಯಾಶಂಕರ್‌ ಎನ್ನುವ ರಾಜಕೀಯ ನಾಯಕನ ಪರವಾಗಿ ಪ್ರಚಾರ ಮಾಡುತ್ತಿದ್ದರು. ಆದರೆ, ಅದಾಗಿ ಕೆಲವೇ ವರ್ಷಗಳಲ್ಲಿ ಇವರಿಬ್ಬರ ಸಂಬಂಧಕ್ಕೆ ದಾಂಪತ್ಯದ ಮುದ್ರೆ ಬಿದ್ದಿತ್ತು. 22 ವರ್ಷಗಳ ಒವರ ದಾಂಪತ್ಯವೀಗ ಮುರಿದುಬಿದ್ದಿದೆ. ಅದಕ್ಕೆ ಕಾರಣ, ಮನೆಯ ಹೊರಗೆ ಇರಬೇಕಾಗಿದ್ದ ರಾಜಕೀಯ ಬೆಡ್‌ರೂಮ್‌ನ ಒಳಗೆ ಬರುವಷ್ಟು ಸಮಯ ನೀಡಿದ್ದು. ಆರು ವರ್ಷಗಳ ಹಿಂದೆ ಬಿಎಸ್‌ಪಿ ನಾಯಕಿ ಮಾಯಾವತಿ ವಿರುದ್ಧ ದಯಾಶಂಕರ್‌ ಸಿಂಗ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾಗ, ಸ್ವಾತಿ ಸಿಂಗ್‌ ದಯಾಶಂಕರ್‌ ಪರವಾಗಿ ನಿಂತಿದ್ದು ಮಾತ್ರವಲ್ಲದೆ, ಕೆಲವೊಮ್ಮೆ ತಮ್ಮ ಮಗಳ ರಾಜಕೀಯ ಭವಿಷ್ಯಕ್ಕಾಗಿ ಕಾದಾಟ ನಡೆಸಿದ್ದರು. ಉತ್ತರ ಪ್ರದೇಶ ಸರ್ಕಾರದ ಮಾಜಿ ಸಚಿವೆ ಸ್ವಾತಿ ಸಿಂಗ್ ಪತಿ ದಯಾಶಂಕರ್ ಸಿಂಗ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಕೌಟುಂಬಿಕ ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಈ ಸಂಬಂಧವನ್ನು ಕೊನೆಗೊಳಿಸಲು ಅನುಮೋದನೆ ನೀಡಿದೆ. ದಯಾಶಂಕರ್‌ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ಸ್ವಾತಿ ವಿಚ್ಛೇದನದ ಅರ್ಜಿ ಸಲ್ಲಿಸಿದ್ದರು. ಇದನ್ನು ಕೋರ್ಟ್‌ ಅನುಮೋದಿಸಿದೆ. 2001ರ ಮೇ ತಿಂಗಳಿನಲ್ಲಿ ಇವರಿಬ್ಬರೂ ವಿವಾಹವಾಗಿದ್ದರು.

2017ರಲ್ಲಿ ಸ್ವಾತಿ ಸಿಂಗ್‌ ಅವರ ಮತಿ ದಯಾಶಂಕರ್‌ ಸಿಂಗ್‌ ಅವರು ಸತತ 2ನೇ ಬಾರಿಗೆ ವಿಧಾನಪರಿಷತ್ತಿಗಾಗಿ ನಡೆದ ಚುನಾವಣೆಯಲ್ಲಿ ಸೋಲು ಕಂಡಿದ್ದರು ಮಾತ್ರವಲ್ಲದೆ, ಉತ್ತರಪ್ರದೇಶ ರಾಜಕೀಯದಲ್ಲಿ ಬಹಳ ಪ್ರಭಾವಿಯಾಗಿದ್ದ ಮಾಯಾವತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಮಾಯಾವತಿ ವಿರುದ್ಧ ಅವರು ನೀಡಿದ್ದ ಹೇಳಿಕೆ ಎಷ್ಟು ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಯಿತೆಂದರೆ, ಸ್ವತಃ ಬಿಜೆಪಿ ಪಕ್ಞ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಅಮಾನತ್ತು ಮಾಡಿತ್ತು. ಈ ಘಟನೆಯ ಬಳಿಕ ಬಿಎಸ್‌ಪಿ ಪಕ್ಷ ಕೂಡ ಲಖನೌ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಿತು. ಈ ಹಂತದಲ್ಲಿ ಸ್ವಾತಿ ಸಿಂಗ್‌ ಹಾಗೂ ಅವರ ಮಗಳ ವಿರುದ್ಧ ಅಸಭ್ಯ ಟೀಕೆಗಳನ್ನು ಪಕ್ಷ ಮಾಡಿತ್ತು. 

ಈ ಹಂತದಲ್ಲಿ ಮಗಳು ಹಾಗೂ ಪತಿಯ ರಕ್ಷಣೆಗೆ ಮುಂದಾಇದ್ದಸ ಸ್ವಾತಿ ಸಿಂಗ್‌, ಏಕಾಂಗಿಯಾಗಿ ಬಿಎಸ್‌ಪಿ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಇದು ಎಷ್ಟರ ಮಟ್ಟಿಗೆ ವರಗೆ ಜನಪ್ರಿಯತೆ ತಂದುಕೊಟ್ಟಿತೆಂದರೆ, ಕೆಲವೇ ದಿನಗಳಲ್ಲಿ ಇವರು ಬಿಜೆಪಿ ಫೈರ್‌ಬ್ರ್ಯಾಂಡ್‌ ನಾಯಕಿಯಾಗಿ ಉದಯವಾದರು. ಕೆಲವೇ ತಿಂಗಳಲ್ಲಿ ಬಿಜೆಪಿಯ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿಯೂ ನೇಮಕವಾದರು. ಅದರೊಂದಿಗೆ 2017ರಲ್ಲಿ ಉತ್ತರ ಪ್ರದೇಶ ವಿಧಾಸನಭೆ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡರು. ನೋಡನೋಡುತ್ತಲೇ ದಯಾಶಂಕರ್‌ ಸಿಂಗ್‌ ಬಿಜೆಪಿಯಿಂದ ಮರೆಯಾದರೆ, ಅವರ ಪತ್ನಿ ಬಿಜೆಪಿಯಲ್ಲಿ ದೊಡ್ಡ ದೊಡ್ಡ ಸ್ಥಾನಕ್ಕೇರಿದರು.

ಮೊಮ್ಮಗಳನ್ನೇ ರೇಪ್ ಮಾಡಿದ ಅಜ್ಜ, 10 ರೂ. ಕೊಟ್ಟು ಬಾಯಿ ಮುಚ್ಚಲು ಹೇಳಿದ!

2017ರ ವಿಧಾನಸಭೆ ಚುನಾವಣೆಯಲ್ಲಿ ಸ್ವಾತಿ ಸಿಂಗ್‌, ಸರೋಜಿನಿ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು  ಮಾತ್ರವಲ್ಲದೆ, ಭರ್ಜರಿ ವಿಜಯವನ್ನೂ ಸಾಧಿಸಿದರು. ಮೂರು ದಶತಕಗಳಿಂದ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು ಎನ್ನುವ ಹಂಬಲ ಸ್ವಾತಿ ಸಿಂಗ್‌ರಿಂದ ಈಡೇರಿತ್ತು. ಮೋದಿ ಅಲೆ ಹಾಗೂ ಸ್ವಾತಿ ಸಿಂಗ್‌ಗೆ ಇದ್ದ ಫೈರ್‌ಬ್ರ್ಯಾಂಡ್‌ ಇಮೇಜ್‌ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವಂತೆ ಮಾಡಿತ್ತು. ಈ ಗೆಲುವಿನೊಂದಿಗೆ ಸ್ವಾತಿ ಸಿಂಗ್‌ಗೆ ಸಚಿವ ಸಂಪುಟದಲ್ಲೂ ಸ್ಥಾನ ಸಿಕ್ಕಿತು. ಅದರ ಬೆನ್ನಲ್ಲಿಯೇ ಆಕೆಯ ಪತಿಯ ಅಮಾನತು ಶಿಕ್ಷೆ ಕೂಡ ಮುಕ್ತಾಯ ಕಂಡಿತ್ತು.

ಸ್ಮಾರ್ಟ್‌ಫೋನ್‌ ಖರೀದಿಸಿದವರಿಗೆ 2 ಬಿಯರ್‌ ಕ್ಯಾನ್ ಆಫರ್ ಇಟ್ಟ, ಜನ ಅಂಗಡಿಗೆ ಮುಗಿಬಿದ್ದು ಅರೆಸ್ಟ್ ಆದ

2022 ರ ವಿಧಾನಸಭಾ ಚುನಾವಣೆಯಲ್ಲಿ, ಸ್ವಾತಿ ಸಿಂಗ್ ಮತ್ತು ಅವರ ಪತಿ ದಯಾಶಂಕರ್ ಸಿಂಗ್ ಲಕ್ನೋದ ಸರೋಜಿನಿ ನಗರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು, ಆದರೆ ಬಿಜೆಪಿ ಹೈಕಮಾಂಡ್ ಈ ಸ್ಥಾನದಿಂದ ರಾಜೇಶ್ವರ್ ಸಿಂಗ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಸ್ವಾತಿ ಟಿಕೆಟ್ ಕಡಿತಗೊಳಿಸಿತು. ದಯಾಶಂಕರ್ ಅವರನ್ನು ಬಲಿಯಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಲಾಯಿತು ಮತ್ತು ಅವರನ್ನು ಸರ್ಕಾರದಲ್ಲಿ ಸ್ವತಂತ್ರ ಉಸ್ತುವಾರಿ ಸಾರಿಗೆ ಸಚಿವರನ್ನಾಗಿ ಮಾಡಲಾಯಿತು. ಈ ವಿವಾದದ ನಂತರ ಇಬ್ಬರ ವೈಯಕ್ತಿಕ ವಿವಾದದ ಜತೆಗೆ ರಾಜಕೀಯ ವಿವಾದಗಳೂ ಮುನ್ನೆಲೆಗೆ ಬಂದಿದ್ದವು. ರಾಜಕೀಯದ ವಿಚಾರದಲ್ಲಿ ಮನೆಯಲ್ಲಿ ಆಗುತ್ತಿದ್ದ ಸಣ್ಣಪುಟ್ಟ ಗಲಾಟೆಗಳೇ ಇಂದು ಸಂಸಾರವನ್ನು ಇಬ್ಬಾಗ ಮಾಡಿದೆ.

Latest Videos
Follow Us:
Download App:
  • android
  • ios