Asianet Suvarna News Asianet Suvarna News

Earthquake in Ayodhya: ಭೂಕಂಪಕ್ಕೆ ನಡುಗಿದ ರಾಮನೂರು ಅಯೋಧ್ಯೆ, 4.3 ರಷ್ಟು ತೀವ್ರತೆ ದಾಖಲು!

* ಭೂಕಂಪದಿಂದ ರಾಮನಗರಿ ಅಯೋಧ್ಯೆಯ ಭೂಮಿ ಕಂಪಿಸಿದೆ

* ರಿಕ್ಟರ್ ಮಾಪಕದಲ್ಲಿ 4.3 ರಷ್ಟ್ಉ ತೀವ್ರತೆ ದಾಖಲು

Uttar Pradesh Ayodhya hit by earthquake of magnitude 4 3 pod
Author
Bangalore, First Published Jan 7, 2022, 10:23 AM IST | Last Updated Jan 7, 2022, 10:33 AM IST

ಅಯೋಧ್ಯೆ(ಜ.07): ಗುರುವಾರ ರಾತ್ರಿ 12 ಗಂಟೆ ಸುಮಾರಿಗೆ ಸಂಭವಿಸಿದ ಭೂಕಂಪದಿಂದ ರಾಮನಗರಿ ಅಯೋಧ್ಯೆಯ ಭೂಮಿ ಕಂಪಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ (National Centre for Seismology)ಪ್ರಕಾರ, ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.3 ರಷ್ಟಿತ್ತು ಮತ್ತು ಅದರ ಕೇಂದ್ರಬಿಂದುವು ನೆಲದಿಂದ 15 ಕಿಮೀ ಕೆಳಗೆ ನೇಪಾಳದಲ್ಲಿದೆ. ಆದರೆ, ಭೂಕಂಪದಿಂದ ಯಾವುದೇ ರೀತಿಯ ಪ್ರಾಣ ಅಥವಾ ಆಸ್ತಿ ಪಾಸ್ತಿ ಹಾನಿ ಬಗ್ಗೆ ಮಾಹಿತಿ ಬಂದಿಲ್ಲ. ಕಂಪನದಿಂದ ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿ ಹೋಗಿದ್ದಾರೆ.

ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪವು ರಾತ್ರಿ 11:59 ಕ್ಕೆ ಸಂಭವಿಸಿದೆ ಹಾಗೂ 22 ಸೆಕೆಂಡುಗಳವರೆಗೆ ಭೂಮಿ ಕಂಪಿನಿಸಿದ ಅನುಭವವಾಗಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.3 ಎಂದು ಅಳೆಯಲಾಗಿದೆ. ಕೇಂದ್ರದ ಪ್ರಕಾರ, ಅದರ ಕೇಂದ್ರವು ಭೂಮಿಯಿಂದ 15 ಕಿ.ಮೀ. ಾಳದಲ್ಲಿತ್ತು. ಇದೇ ವೇಳೆ ಕೆಲವರಿಗೆ ತಡರಾತ್ರಿ ಭೂಕಂಪನದ ಅನುಭವವಾಗಿದ್ದು, ಜನರು ಮನೆಗಳಿಂದ ಹೊರಬಂದಿದ್ದಾರೆ.

Latest Videos
Follow Us:
Download App:
  • android
  • ios