ವಾಶಿಂಗ್ಟನ್(ಅ.10):  ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಚೀನಾದ ಕುತಂತ್ರ ಬುದ್ದಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪಿಯೊ, ಚೀನಾ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿಕ ಚೀನಾ ಬರೋಬ್ಬರಿ 60,000 ಸೈನಿಕರನ್ನು ನಿಯೋಜಿಸಿದೆ. ಇದು ಕ್ವಾಡ್(QUAD) ರಾಷ್ಟ್ರಗಳಿಗೆ  ಚೀನಾ ಹಾಕಿದ ಬೆದರಿಕೆಯಾಗಿದೆ ಎಂದು ಮೈಕ್ ಪೊಂಪೆ ಹೇಳಿದ್ದಾರೆ.

ಚೀನಾಗೆ ಸಿಗಲ್ಲ ದೀಪಾವಳಿ 'ಸಿಹಿ': ಸರ್ಕಾರದ ದಿಟ್ಟ ಕ್ರಮಕ್ಕೆ ಡ್ರ್ಯಾಗನ್ ತತ್ತರ!.

ಟೊಕಿಯೋದಲ್ಲಿ ನಡೆದ ಕ್ವಾಡ್ ರಾಷ್ಟ್ರಗಳ(ಅಮೆರಿಕ, ಜಪಾನ್, ಭಾರತ ಹಾಗೂ ಆಸ್ಟ್ರೇಲಿಯಾ) ಮಹತ್ವದ ಸಭ ಬಳಿಕ ಮೈಕ್ ಪೊಂಪಿಯೊ ಈ ವಿಚಾರ ಹೇಳಿದ್ದಾರೆ. ಇಂಡೋ-ಪೆಸಿಫಿಕ್ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳು ಟೊಕಿಯೋದಲ್ಲಿ ಭೇಟಿಯಾಗಿದ್ದರು. ಕೊರೋನಾ ವಕ್ಕರಿಸಿದ ಬಳಿಕ ನಡೆಯುತ್ತಿರುವ ಮೊದಲ ಮಾತುಕತೆ ಇದಾಗಿದೆ.

ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ಅತೀ ದೊಡ್ಡ ಪ್ರಜಾಪ್ರಭುತ್ವ ಹಾಗೂ  ಅತ್ಯಂತ ಬಲಿಷ್ಠ ಆರ್ಥಿಕತೆ ಹೊಂದಿ ರಾಷ್ಟ್ರಗಳು. ಚೀನಾದ ಕಮ್ಯೂನಿಸ್ಟ್ ಪಕ್ಷ ಕ್ವಾಡ್ ರಾಷ್ಟ್ರಗಳಿಗೆ ಬೆದರಿಕೆ ಹಾಕುವ ಪ್ರಯತ್ನ ಮಾಡುತ್ತಿದೆ. ಇದೀಗ ಭಾರತದ ಗಡಿಯಲ್ಲಿ ವಾಸ್ತವ ರೇಖೆ ಬದಲಿಸವು ಪ್ರಯತ್ನ, ಒಳನುಸುಳುವ ಯತ್ನ ಸೇರಿದಂತೆ ಹಲವು ರೀತಿಯಲ್ಲಿ ಗಡಿ ನಿಯಮ ಉಲ್ಲಂಘಿಸುತ್ತಿದೆ ಎಂದು ಮೈಕ್ ಪೊಂಪಿಯೊ ಹೇಳಿದ್ದಾರೆ.

ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಟೋಕಿಯೊದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾಗಿದ್ದಾರೆ.  ಜಗತ್ತಿನಾದ್ಯಂತ ಪ್ರಗತಿ, ಶಾಂತಿ, ಸಮೃದ್ಧಿ ಮತ್ತು ಸುರಕ್ಷತೆಗಾಗಿ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿಹೇಳಿದ್ದಾರೆ.