ಜಿ20 ಸಚಿವರ ಮಟ್ಟದ ಸಭೆಗಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕದ ಪರಿಸರ ರಕ್ಷಣಾ ಏಜೆನ್ಸಿಯ ಅಧಿಕಾರಿ ಮೈಕಲ್‌.ಎಸ್‌.ರೇಗನ್‌ ಅವರು ಚೆನ್ನೈನ ಪ್ರೌಢಶಾಲಾ ವಿದ್ಯಾರ್ಥಿಗಳ ಜೊತೆ ಹವಾಮಾನ ಬದಲಾವಣೆಯ ಬಗ್ಗೆ ಚರ್ಚೆ ನಡೆಸಿದರು.

ಚೆನ್ನೈ: ಜಿ20 ಸಚಿವರ ಮಟ್ಟದ ಸಭೆಗಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕದ ಪರಿಸರ ರಕ್ಷಣಾ ಏಜೆನ್ಸಿಯ ಅಧಿಕಾರಿ ಮೈಕಲ್‌.ಎಸ್‌.ರೇಗನ್‌ ಅವರು ಚೆನ್ನೈನ ಪ್ರೌಢಶಾಲಾ ವಿದ್ಯಾರ್ಥಿಗಳ ಜೊತೆ ಹವಾಮಾನ ಬದಲಾವಣೆಯ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಅವರು ಚೆನ್ನೈ ಸಮುದ್ರ ತೀರದಲ್ಲಿ ವಿದ್ಯಾರ್ಥಿಗಳ ಜೊತೆ ನಡೆಯುವ ಮೂಲಕ ಉಷ್ಣತೆ ಮತ್ತು ಸಮುದ್ರ ನೀರಿನ ಕ್ಷಾರತೆ ಬಗ್ಗೆ ಸಂಶೋಧನೆಗಳನ್ನು ನಡೆಸಿದರು.

ಸಮುದ್ರದ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದಕ್ಕಾಗಿ ಈ ಚಟುವಟಿಕೆಯನ್ನು ನಡೆಸಲಾಯಿತು. ಬಳಿಕ ಮಾತನಾಡಿದ ರೇಗನ್‌, ಯುವಕರು ಇತ್ತೀಚೆಗೆ ಸಾಮಾಜಿಕ ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಪರಿಸರ ಚಳುವಳಿಯೂ ಸಹ ಇದಕ್ಕೆ ಹೊರತಾಗಿಲ್ಲ. ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ಅದರಿಂದ ಸಾಗರಗಳನ್ನು ರಕ್ಷಿಸಲು ನಾವು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲು ಭಾಗಿಯಾಗಿದ್ದು ನನಗೆ ಸಂತೋಷ ನೀಡಿದೆ. ಹವಾಮಾನ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಮೆರಿಕ ಸದಾ ಬದ್ದವಾಗಿದೆ. ಅಂತಾರಾಷ್ಟ್ರೀಯವಾಗಿಯೂ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಜೆನ್ನಿಫರ್‌ ಬುಲ್ಲಾಕ್‌ ಮತ್ತು ಚೆನ್ನೈನ ಶೈಕ್ಷಣಿಕ ಅಧಿಕಾರಿ ಸ್ಟೆಫಿಜಾನ್‌ ಭಾಗಿಯಾಗಿದ್ದರು.

'ಈಶ' ಭಾರತದ ಹೊಸ ಗುರುತು: ಜಿ20 ವಿಜ್ಞಾನ ಸಮಾವೇಶದಲ್ಲಿ ಗಣ್ಯರ ಮೆಚ್ಚುಗೆ

9 ವರ್ಷದಲ್ಲಿ 190 ಮಿಲಿಯನ್ LPG, ಎಲ್ಲಾ ಗ್ರಾಮಕ್ಕೆ ವಿದ್ಯುತ್ ಸಂಪರ್ಕ; ಜಿ20 ಸಭೆಯಲ್ಲಿ ಮೋದಿ ಭಾಷಣ!