ನವದೆಹಲಿ: ಯುಪಿಎ ಅವಧಿಯಲ್ಲಿ ನಡೆದಿದ್ದ ಕಲ್ಲಿದ್ದಲು ಹಗರಣದಲ್ಲಿ ಮಾಜಿ ಸಂಸದ ವಿಜಯ್ ದರ್ದಾ ಅವರಿಗೆ ಸ್ಥಳೀಯ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.
ನವದೆಹಲಿ: ಯುಪಿಎ ಅವಧಿಯಲ್ಲಿ ನಡೆದಿದ್ದ ಕಲ್ಲಿದ್ದಲು ಹಗರಣದಲ್ಲಿ ಮಾಜಿ ಸಂಸದ ವಿಜಯ್ ದರ್ದಾ ಅವರಿಗೆ ಸ್ಥಳೀಯ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ. ಉಳಿದಂತೆ ದರ್ದಾ ಅವರ ಪುತ್ರ ದೇವೇಂದ್ರ ದರ್ದಾ, ಜೆಎಲ್‌ಡಿ ಯವತ್ಮಾಲ್ ಎನರ್ಜಿ ಲಿ.ನ ನಿರ್ದೇಶಕ ಮನೋಜ್ ಕುಮಾರ್‌ಗೆ ತಲಾ 4 ವರ್ಷ, ಕಲ್ಲಿದ್ದಲು ಸಚಿವಾಲಯದ ಮಾರ್ಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ, ಮತ್ತು ಇತರೆ ಇಬ್ಬರು ಅಧಿಕಾರಿಗಳಾದ ಕೆ.ಎಸ್.ಕ್ರೋಪಾ, ಕೆ.ಸಿ.ಸಮರಿಯಾ ಅವರಿಗೆ ತಲಾ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಮೇಲ್ಕಂಡ 6 ಜನರು ದೋಷಿಗಳು ಎಂದು ನ್ಯಾಯಾಲಯ ಜು.14ರಂದು ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಬುಧವಾರ ಪ್ರಕಟಿಸಲಾಗಿದೆ.
ಕಲ್ಲಿದ್ದಲು ಹಗರಣ: ಟಿಎಂಸಿ ಮುಖಂಡನ ಪತ್ನಿಗೆ ಏರ್‌ಪೋರ್ಟ್‌ನಲ್ಲಿ ತಡೆ
ಕಲ್ಲಿದ್ದಲು ಹಗರಣ: ಮಾಜಿ ಕಾರ್ಯದರ್ಶಿ ಎಚ್.ಸಿ. ಗುಪ್ತಾಗೆ 3 ವರ್ಷ ಜೈಲು ಶಿಕ್ಷೆ
