Asianet Suvarna News Asianet Suvarna News

ಗಾಯಾಳು ವಲಸೆ ಕಾರ್ಮಿಕರನ್ನು ಶವಗಳ ಜತೆ ಸಾಗಿಸಿದ ಉ.ಪ್ರ.!

ಗಾಯಾಳು ವಲಸೆ ಕಾರ್ಮಿಕರನ್ನು ಶವಗಳ ಜತೆ ಸಾಗಿಸಿದ ಉ.ಪ್ರ.!| ಟಾರ್ಪಲ್‌ನಲ್ಲಿ ಸುತ್ತಿಟ್ಟ ಮೃತದೇಹಗಳೊಟ್ಟಿಗೆ ಟ್ರಕ್‌ನಲ್ಲಿ ಕಾರ್ಮಿಕರ ಸಾಗಣೆ| ಸರ್ಕಾರದ ಅಮಾನವೀಯ ನಡೆಗೆ ಜಾಲತಾಣಗಳಲ್ಲಿ ಛೀಮಾರಿ

UP Sends Dead Bodies With Migrants In Open trucks Jharkhand Furious
Author
Bangalore, First Published May 20, 2020, 9:05 AM IST

ಲಕ್ನೋ(ಮೇ.20):  ಭೀಕರ ಅಪಘಾತದಲ್ಲಿ ಗಾಯಗೊಂಡ ವಲಸೆ ಕಾರ್ಮಿಕರನ್ನು ಟಾರ್ಪಲ್‌ನಲ್ಲಿ ಸುತ್ತಿಟ್ಟ ಮೃತದೇಹಗಳೊಟ್ಟಿಗೆ ಟ್ರಕ್‌ನಲ್ಲಿ ಸಾಗಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಔರಯಾದಲ್ಲಿ ಶನಿವಾರ ಎರಡು ಟ್ರಕ್‌ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ 26 ವಲಸೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, 30 ಜನರು ಗಾಯಗೊಂಡಿದ್ದರು. ಮರುದಿನ ಈ ದುರ್ಘಟನೆಯಲ್ಲಿ ಗಾಯಗೊಂಡ ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರನ್ನು ಶವಗಳೊಟ್ಟಿಗೇ 3 ಟ್ರಕ್‌ಗಳಲ್ಲಿ ಉತ್ತರ ಪ್ರದೇಶ ಸರ್ಕಾರ ಸಾಗಿಸಿದೆ.

ಸದ್ಯ ಈ ವಿಡಿಯೋ ವೈರಲ್‌ ಆಗುತ್ತಿದ್ದು, ಸರ್ಕಾರದ ಅಮಾನವೀಯ ನಡೆಗೆ ಜಾಲತಾಣಗಳಲ್ಲಿ ಜನರು ಛೀಮಾರಿ ಹಾಕಿದ್ದಾರೆ.

ಅಲ್ಲದೆ ‘ಇದು ಮೃತರು ಮತ್ತು ಗಾಯಗೊಂಡವರಿಗೆ ಮಾಡುತ್ತಿರುವ ಅವಮಾನ. ಜಾರ್ಖಂಡ್‌ ಗಡಿಯವರೆಗೆ ಸೂಕ್ತ ವಾಹನದಲ್ಲಿ ವಲಸಿಗರನ್ನು ರವಾನಿಸಿ’ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಬಳಿಕ ಪ್ರಯಾಗ್‌ರಾಜ್‌ ಹೆದ್ದಾರಿ ಬಳಿ ಟ್ರಕ್‌ಗಳನ್ನು ತಡೆದು ಮೃತದೇಹಗಳನ್ನು ಆ್ಯಂಬುಲೆನ್ಸ್‌ನಲ್ಲಿ ತುಂಬಿ ಕಳುಹಿಸಲಾಗಿದೆ.

Follow Us:
Download App:
  • android
  • ios