ಮಥುರಾ(ಮೇ.05): ಏಪ್ರಿಲ್ 29ರಂದು ಉತ್ತರ ಪ್ರದೇಶದ ಮಥುರಾ ನಿವಾಸಿ ಸಂಗೀತಾ ಸಿಂಗ್ ಮಗಳ ಹುಟ್ಟುಹಬ್ಬವಿತ್ತು. ಸಂಗೀತಾ ಪತಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸದ್ಯ ಕರ್ತವ್ಯದ ಮೇರೆಗೆ ಮನೆಯಿಂದ ದೂರವಿದ್ದಾರೆ. ಹೀಗಿರುವಾಗ ಇತ್ತ ಲಾಕ್‌ಡೌನ್ ಹೇರಲಾಗಿದ್ದು, ಮಗಳ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗ್ತಿಲ್ಲ ಎಂಬ ವಿಚಾರವಾಗಿ ಸಂಗೀತ ಬೇಜಾರಾಗಿದ್ದರು. ಈ ವಿಚಾರವನ್ನು ಅವರು ಉತ್ತರ ಪ್ರದೇಶದ ಪೊಲೀಸರುಗೆ ತಿಳಿಸಿದ್ದಾರೆ. ಹೀಗಿರುವಾಗ ಯೋಧನ ಮಗಳ ಪ್ರಥಮ ವರ್ಷದ ಹುಟ್ಟುಹಬ್ಬ ಅದ್ಧೂರಿಯಾಗೇ ಆಚರಿಸಲು ನಿರ್ಧರಿಸಿದ ಮಥುರಾ ಪೊಲೀಸರು ಹಲವಾರು ವಾಹನಗಳಲ್ಲಿ, ಕೇಕ್, ಫೋಟಟೋ ಫ್ರೇಮ್, ಕೇಕ್, ಬಲೂನ್ ಹೀಗೆ ಎಲ್ಲಾ ವಸ್ತುಗಳೊಂದಿಗೆ ಆಗಮಿಸಿ ಪುಟ್ಟ ಕಂದನ ಹುಟ್ಟುಹಬ್ಬ ಯಾವತ್ತೂ ನೆನಪಿನಲ್ಲಿ ಉಳಿದುಕೊಳ್ಳುವಂತೆ ಆಚರಿಸಿದ್ದಾರೆ.

ಗೋವಿಂದ ನಗರ ಕ್ಷೇತ್ರದ ಮಹಾವಿದ್ಯಾ ಕಾಲನಿ ನಿವಾಸಿ ಈ ಪರಿವಾರದ ಕಂದನಿಗೆ ಒಂದು ವರ್ಷವಾಗಿದೆ. ಪುಟ್ಟ ಹುಡುಗಿಯ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಗಡಿಯಲ್ಲಿ ಶತ್ರುಗಳು ದೇಶಕ್ಕೆ ನುಸುಳದಂತೆ ಕಾವಲು ಕಾಯುತ್ತಿದ್ದಾರೆ. ಹೀಗಿರುವಾಗ ಈ ಪುಟ್ಟ ಮಗುವಿನ ತಾಯಿ ಸೋಶಿಯಲ್ ಮೀಡಿಯಾ ಮೂಲಕ ಉತ್ತರ ಪ್ರದೇಶ ಹಾಗೂ ಮಥುರಾ ಪೊಲೀಸರಿಗೆ ಸಂದೇಶದ ಮೂಲಕ ಮಗಳ ಹುಡ್ಡುಹಬ್ಬ ಹೇಗೆ ಆಚರಿಸಲಿ ಎಂದು ಪ್ರಶ್ನಿಸಿದ್ದಾರೆ.

ಆದರೆ ಪೊಲೀಸರು ಮಾಡಿದ ಈ ವ್ಯವಸ್ಥೆ ಸಂಗೀತಾರನ್ನು ಮೂಕ ವಿಸ್ಮಿತರನ್ನಾಗಿಸಿದೆ. ಸಂದೇಶ ಹಾಕಿದ ಕೆಲವೇ ತಾಸಿನಲ್ಲಿ ಮೂರು ಕಾರು ಹಾಗೂ ಹಲವಾರು ಬೈಕ್‌ಗಳಲ್ಲಿ ಆಗಮಿಸಿದ ಉತ್ತರ ಪ್ರದೇಶ 112 ಸೇವೆ ಒದಗಿಸುವ ಅಧಿಕಾರಿಗಳು ಹಾಗೂ ಪೊಲೀಸರು ಅವರ ಮನೆಗೆ ಒಂದು ಬರ್ತ್‌ ಡೇ ಕೇಕ್, ಹಹಲವಾರು ಬಲೂನ್, ಫೋಟೋ ಫ್ರೇಮಮ್ ಹಾಗೂ ಉಡುಗೊರೆಗಳೊಂದಿಗೆ ಆಗಮಿಸಿದ್ದಾರರೆ. 

ಪುಟ್ಟ ಹುಡುಗಿಯ ತಾಯಿ ಸಂಗೀತಾ ಸಿಂಗ್ ಸೇರಿದಂತೆ ಕುಟುಂಬದ ಇತರ ಸದಸ್ಯರ ಉಪಸ್ಥಿತಿಯಲ್ಲಿ ಕೇಕ್ ಕತ್ತರಿಸಿ ಯೋಧನ ಮಗಳ ಹುಡ್ಡುಹಬ್ಬವನ್ನು ವಿಶೇಷ ಹಾಗೂ ಅದ್ಧೂರಿಯಾಗಿ ಆಚರಿಸಲಾಗಿದೆ. ಇದೊಂದು ಅವಿಸ್ಮರಣೀಯ ಕ್ಷಣವಾಗಿದ್ದು, ಇಡೀ ಕುಟುಂಬ ಪೊಲೀಸರ ಈ ನಡೆಗೆ ಧನ್ಯವಾದ ತಿಳಿಸಿದ್ದಾರೆ.