ಲಕ್ನೋ[ಡಿ.26]: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವವವರು ಡಿಸೆಂಬರ್ 20ರಂದು ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಮೇಒಲೇ ಫೈರಿಂಗ್ ನಡೆಸಿದ್ದಾರೆಂಬ ಮಾತುಗಳು ಜೋರಾಗಿವೆ. ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು ಹಲವಾರು ಫೋಟೋ ಹಾಗೂ ವಿಡಿಯೋಗಳನ್ನು ರಿಲೀಸ್ ಮಾಡಿದ್ದು, ಇವುಗಳಲ್ಲಿರುವ ಒಂದು ವಿಡಿಯೋದಲ್ಲಿ ನೀಲಿ ಬಣ್ಣದ ಜಾಕೆಟ್ ಧರಿಸಿರುವ ವ್ಯಕ್ತಿಯೊಬ್ಬ ಮುಖವನ್ನು ಬಟ್ಟೆಯಿಂದ ಮರೆಮಾಚಿ, ಗನ್ ಹಿಡಿದು ತಿರುಗಾಡುತ್ತಿರುವ ದೃಶ್ಯಗಳು ದಾಖಲಾಗಿವೆ. 

ಉತ್ತರ ಪ್ರದೇಶದಲ್ಲಿ ಕಳೆದೊಂದು ವಾರದಲ್ಲಿ ಸುನಾರು 15 ಮಂದಿ ಸಾವನ್ನಪ್ಪಿದ್ದಾರೆ. ಮೀರತ್‌ನಲ್ಲೇ ಬೃಒಬ್ಬರಿ 6 ಮಂದಿ ಮೃತಪಟ್ಟಿದ್ದಾರೆ. ಇನ್ನು 19 ಹಾಗೂ 21ರಂದು ನಡೆದಿದ್ದ ಪೌರತ್ವ ವಿರೋಧಿ ಹೋರಾಟದಲ್ಲಿ ತಮ್ಮ ಮೇಲೇ ದಾಳಿಯಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ಕೇವಲ ಬಿಜ್‌ನೌರ್‌ನಲ್ಲಷ್ಟೇ ಫೈರಿಂಗ್ ನಡೆಸಿದ್ದರು

ಸಾವನ್ನಪ್ಪಿರುವುವವರಲ್ಲಿ ಅಧಿಕ ಮಂದಿ ಗುಂಡೇಟಿಗೆ ಬಲಿಯಾಗಿದ್ದಾರೆ. ಆದರೆ ತಾವು ಕೇವಲ ಪ್ಲಾಸ್ಟಿಕ್ ಪೆಲೆಟ್ ಹಾಗೂ ರಬ್ಬರ್ ಬುಲೆಟ್ ಮಾತ್ರ ಬಳಸಿರುವುದಾಗಿ ಉತ್ತರ ಪ್ರದೇಶ ಪೊಲೀಸರು ಹೇಳಿಕೆ ನೀಡಿದ್ದಾರೆ. ಇನ್ನು ತಾವು ಕೇವಲ ಬಿಜ್‌ನೌರ್‌ನಲ್ಲಷ್ಟೇ ಫೈರಿಂಗ್ ನಡೆಸಿದ್ದು, ಇಲ್ಲಿ ಕೇವಲ ಓರ್ವ 20 ವರ್ಷದ ಯುವಕ ಮೃತಪಟ್ಟಿದ್ದಾನೆಂದಿದ್ದಾರೆ.

288 ಪೊಲೀಸರಿಗೆ ಗಾಯ

ಈ ಸಂಬಂಧ ಪ್ರತಯಿಕ್ರಿಯಿಸಿರುವ ಡೆಪ್ಯುಟಿ ಸಿಎಂ ದಿನೇಶ್ ಶರ್ಮಾ 'ಈ ಹಿಂಸಾಚಾರದಲ್ಲಿ ಬಹಳಷ್ಟು ನಷ್ಟ ಸಂಭವಿಸಿದೆ. ಈವರೆಗೂ ರಾಜ್ಯದ 21 ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರದಲ್ಲಿ 288 ಪೊಲೀಸರಿಗೆ ಗಾಯಗಳಾಗಿವೆ. ಇವರಲ್ಲಿ 62 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಇನ್ನು ಹಿಂಸಾಚಾರ ನಡೆದ ಪ್ರದೇಶದಿಂದ ಪೊಲೀಸರು 500ಕ್ಕೂ ಹೆಚ್ಚು ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ' ಎಂದಿದ್ದಾರೆ.