Asianet Suvarna News Asianet Suvarna News

ಕೊರೋನಾ ಹೋರಾಟದಲ್ಲಿ ಯುರೋಪ್‌ನ್ನು ಮೀರಿಸಿದ ಉತ್ತರ ಪ್ರದೇಶ: ಯೋಗಿ

ಉತ್ತರ ಪ್ರದೇಶ ಯುರೋಪ್‌ ರಾಷ್ಟ್ರಗಳಿಗಿಂತಲೂ ಉತ್ತಮವಾಗಿ ಕೊರೋನಾ ವಿರುದ್ಧ ಹೋರಾಡಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

 

UP is performing far better than europe countries says cm Yogi Adityanath
Author
Bangalore, First Published May 8, 2020, 11:36 AM IST

ಲಕ್ನೋ(ಮೇ.08): ಉತ್ತರ ಪ್ರದೇಶ ಯುರೋಪ್‌ ರಾಷ್ಟ್ರಗಳಿಗಿಂತಲೂ ಉತ್ತಮವಾಗಿ ಕೊರೋನಾ ವಿರುದ್ಧ ಹೋರಾಡಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಯುರೋಪ್‌ನ ಪ್ರಮುಖ ರಾಷ್ಟ್ರಗಳಾದ ಫ್ರಾನ್ಸ್‌, ಇಟಲಿ, ಸ್ಪೇನ್‌ಗಿಂತಲೂ ಉತ್ತರ ಪ್ರದೇಶ ದೊಡ್ಡ ರಾಜ್ಯವಾಗಿದೆ. ಹೀಗಿದ್ದರೂ ಉತ್ತರ ಪ್ರದೇಶ ಕೊರೋನಾ ಹೋರಾಟದಲ್ಲಿ ಮುಂದಿದೆ ಎಂದು ಅವರು ಹೇಳಿದ್ದಾರೆ.

ವಿಧಾನ ಸಭೆಯ ವಿಪಕ್ಷ ನಾಯಕ ರಾಮ್‌ ಗೋವಿಂದ್‌ ಚೌಧರಿ ಅವರಿಗೆ ಯೋಗಿನಾಥ್ ಪತ್ರ ಬರೆದಿದ್ದು, ಯುರೋಪ್‌ ರಾಷ್ಟ್ರಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಲಕ್ಷಕ್ಕೂ ಅಧಿಕ ಸಾವು ಸಂಭವಿಸಿದೆ. ಆದರೆ ಉತ್ತರ ಪ್ರದೇಶದಲ್ಲಿ 2,969 ಪಾಸಿಟಿವ್ ಪ್ರಕರಣಗಳಷ್ಟೇ ಇವೆ. 58 ಸಾವು ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಮದ್ಯ ಮಾರಾಟ ಬೇಡವೇ ಬೇಡ ಅಂತ ಕೂತಿದ್ರು ಅಮಿತ್ ಶಾ..!

ಮೇ ತಿಂಗಳ ಆರಂಭದಲ್ಲಿ ಚೌಧರಿ ಅವರು ಉತ್ತರ ಪ್ರದೇಶದಲ್ಲಿ ಕೊರೋನಾ ಸ್ಥಿತಿಗತಿಯ ಬಗ್ಗೆ ಪ್ರಶ್ನಿಸಿ ಯೋಗಿಗೆ ಪತ್ರ ಬರೆದಿದ್ದರು. ಕೊರೋನಾ ವಿರುದ್ಧ ಹೋರಾಟದಲ್ಲಿ ಯುಪಿ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಛಧರಿ ಪತ್ರದಲ್ಲಿ ಆರೋಪಿಸಿದ್ದರು.

ಕೊರೋನಾಗೆ ಫೈಲು ಕಾರಣವಂತೆ; ಮಂತ್ರಿಗಳ ಪರದಾಟ!

ಸರ್ಕಾರ, ಅಧಿಕಾರಿಗಳು, ಜನರು ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವುದು ಬಿಟ್ಟು ಸುಖಾ ಸುಮ್ಮನೆ ಆರೋಪ ಮಾಡುವುದು ಸಂದರ್ಭೋಚಿತವಲ್ಲ. ಈ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ನಾವು ಒಗ್ಗಟ್ಟಾಗಬೇಕು ಎಂದು ಸಿಎಂ ಯೋಗಿ ತಿಳಿಸಿದ್ದಾರೆ. 

Follow Us:
Download App:
  • android
  • ios